• Sat. Apr 20th, 2024

PLACE YOUR AD HERE AT LOWEST PRICE

ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗಿದ್ದ,  ಮೀಸಲಾತಿ ರದ್ದು ಪಡಿಸಿರುವುದು ಜನ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ವಕೀಲ ಶ್ಯಾನಭೋಗನಹಳ್ಳಿ ಎಸ್.ಬಿ. ಸುರೇಶ್ ಖಂಡಿಸಿದ್ದಾರೆ.

ಈ ಕುರಿತು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಅವರು ಮತನಾಡಿದರು. ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಹಿಂದುಳಿದ ಸಮಾಜವಾದ ಅಲ್ಪಸಂಖ್ಯಾತರ ಸಮುದಾಯಕ್ಕೆ ಇದ್ದ ಶೇ.ರಷ್ಟು ಮೀಸಲಾತಿ ರದ್ದುಪಡಿಸಿರುವುದನ್ನು ಬಹುಜನ ಸಮಾಜ ಪಕ್ಷ ತೀವ್ರವಾಗಿ ಖಂಡಿಸುತ್ತದೆ.  ಒಬ್ಬರ ಸವಲತ್ತನ್ನು ಕಸಿದು ಮತ್ತೊಬ್ಬರಿಗೆ ಕೊಡುವುದರಲ್ಲಿ ಯಾವುದೇ ನ್ಯಾಯವಿಲ್ಲ ಎಂದ ಅವರು, ಇದು ಅತ್ಯಂತ ಹೃದಯ ಹೀನ ಜನ ವಿರೋಧಿ, ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಟೀಕಿಸಿದರು.

ಹಿಂದುಳಿದ ಸಮುದಾಯಗಳಿಗೆ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ಏಳಿಗೆಗಾಗಿ ದಿವಂಗತ ದೇವರಾಜ್ ಅರಸ್ ರವರ ಅಧಿಕಾರಾವಧಿಯಲ್ಲಿ ನೀಡಲಾಗಿದ್ದ, ಅಲ್ಪಸಂಖ್ಯಾತರ ಹಕ್ಕು ಎಂದೇ ಪರಿಗಣಿಸುವ ಮೀಸಲಾತಿಯನ್ನು ಅತ್ಯಂತ ಕುತಂತ್ರದಿ0ದ ಸರ್ಕಾರ ಕಿತ್ತು ಕೊಳ್ಳುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.

ಈ ಹಿನ್ನಲೆಯಲ್ಲಿ ಏಪ್ರಿಲ್ 1 ರ0ದು ಬಹುಜನ ಸಮಾಜ ಪಕ್ಷ ರಾಜ್ಯ ಘಟಕದಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಕೋಲಾರ ಜಿಲ್ಲೆಯಿಂದ ಸುಮಾರು ೫೦೦ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ದಿಂಬಾ ಡಿ.ಈ. ಆನಂದ್, ಜಿಲ್ಲಾ ಉಪಾಧ್ಯಕ್ಷ ಬಂಗಾರಪೇಟೆ ರಮಣ್‌ಕುಮಾರ್, ಮಾಲೂರಿನ ವಡಗನಹಳ್ಳಿ ರಮೇಶ್, ಹುಳಿದೇನಹಳ್ಳಿ ಸುರೇಶ್, ಮಾರ್ಕೆಟ್ ಗೋವಿಂದರಾಜು, ಬಿಎಸ್‌ಪಿ ಅಲ್ಪಸಂಖ್ಯಾತರ ಮುಖಂಡ ಮಖ್ದೂಸ್ ಪಾಷ, ರೋಷನ್ ಪಾಷ, ಅಸಾದುಲ್ಲಾ, ಆರೀಫ್ ಉಪಸ್ಥಿತರಿದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!