PLACE YOUR AD HERE AT LOWEST PRICE
ಬಂಗಾರಪೇಟೆ : ಕ್ಷೇತ್ರದಲ್ಲಿ ಆಗಿರುವ ಐತಿಹಾಸಿಕ ಅಭಿವೃದ್ಧಿ ಕಾಮಗಾರಿಗಳ ಶ್ರೀರಕ್ಷೆಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎನ್.ನಾರಾಯಣಸ್ವಾಮಿ ಗೆಲುವು ಕಟ್ಟಿಟ್ಟಬುತ್ತಿ ಎಂದು ಚಿಕ್ಕಅಂಕoಡಹಳ್ಳಿ ಹರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಪ್ರಚಾರದಲ್ಲಿರುವ ಹರೀಶ್ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು. ತಾಲ್ಲೂಕಿನ ಇತಿಹಾಸದಲ್ಲೇ ಎಸ್.ಎನ್. ನಾರಾಯಣಸ್ವಾಮಿರವರು ಶಾಸಕರಾದ ಮೇಲೆ ಯಾರೂ ಮಾಡದ ಅಭಿವೃದ್ದಿ ಕೆಲಸಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಿದ್ದಾರೆ. ಶಾಸಕರ ಅಭಿವೃದ್ದಿ ಕೆಲಸಗಳು ಅವರಿಗೆ ಶ್ರೀರಕ್ಷೆಯಾಗಲಿದೆ.
ಸುಮಾರು ೨೫ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು, ಗ್ರಾಮೀಣ ಪ್ರದೇಶಗಳು ಸಿಮೆಂಟ್ ರಸ್ತೆಗಳನ್ನೇ ಕಂಡಿರಲಿಲ್ಲ, ಅದರಲ್ಲೂ ಎಸ್.ಸಿ.ಎಸ್.ಟಿ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ ಮರೀಚಿಕೆಯಾಗಿತ್ತು. ಎಸ್.ಎನ್.ನಾರಾಯಣಸ್ವಾಮಿರವರು ಶಾಸಕರಾದ ಮೇಲೆ ಹಳ್ಳಿಗಳಲ್ಲಿ ಹಾಗೂ ನಗರದ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು, ರಸ್ತೆಗಳು, ಚರಂಡಿಗಳು, ಹೈಮಾಸ್ ದೀಪಗಳು ಹಾಕಿಸುವ ಮೂಲಕ ಮೂಲಭೂತ ಸೌಲಭ್ಯಗಳಿಗೆ ಆದ್ಯತೆಯನ್ನು ನೀಡಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ನೋಡಿದಾಗ, ಪಟ್ಟಣದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಕಾನೂನು ಸುವ್ಯವಸ್ಥೆಗೆ ಅನುಕೂಲವಾಗುವ ನೂತನ ಪೊಲೀಸ್ ಠಾಣಾ ಕಟ್ಟಡ ಮಂಜೂರು, ಮಿನಿ ವಿಧಾನಸೌಧ ನಿರ್ಮಾಣ, ತಾಲ್ಲೂಕಿನ ವಿವಿಧೆಡೆ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಶಾಲಾ ಕಟ್ಟಡಗಳು, ಕಾಲೇಜು ಕಟ್ಟಡಗಳು, ಮಕ್ಕಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಸೇರಿದಂತೆ ನೂರಾರು ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕಾವಗಿ ಮಾಡಿ ಜನರ ಮನ ಗೆದ್ದಿದ್ದಾರೆ. ಅವರು, ಮುಂದಿನ ೨೦೨೩ರ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಇದೇ ವೇಳೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ರವೀಂದ್ರಸಿoಗ್ ಮಾತನಾಡಿ, ಎಸ್.ಎನ್.ನಾರಾಯಣಸ್ವಾಮಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅವರ ಸೇವೆ ಬೇಕೆಂದು ಮನೆಗೆ ಹೋದವರನ್ನು ಎಂದೂ ನಿರಾಶೆಗೊಳಿಸದೆ ಕೆಲಸ ಮಾಡಿಕೊಟ್ಟಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದರೂ, ಜನರ ಸೇವೆಗೆ ಮುಂದಾಗುತ್ತಾರೆ. ಕೋಲಾರ ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಹತ್ತು ವರ್ಷಗಳ ಹಿಂದೆ ದಿನಕ್ಕೊಂದು ಅಪಘಾತ ನಡೀತಿತ್ತು. ಅಷ್ಟು ಹಾಳಾಗಿದ್ದ ರಸ್ತೆ ಇಂದು ಹೆದ್ದಾರಿಯಂತೆ ಅಭಿವೃದ್ದಿಯಾಗಿದೆ. ಅಪಘಾತಗಳ ಸಂಖೆಯೂ ಕಡಿಮೆಯಾಗಿದೆ, ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.