• Fri. Mar 1st, 2024

PLACE YOUR AD HERE AT LOWEST PRICE

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ.

ಬಂಗಾರಪೇಟೆ:ಯಾರೋ ಕಟ್ಟಿದ ಹುತ್ತದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂದು ಸೇರಿಕೊಂಡು ಹುತ್ತ ಕಟ್ಟಿದವರನ್ನೇ ಮನೆಯಿಂದ ಹೊರ ಹಾಕಿದರು, ಶಾಸಕರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್  ಬಿಟ್ಟು ಜೆಡಿಎಸ್ ಸೇರಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ರಾಮಚಂದ್ರ ಶಾಸಕರ ವಿರುದ್ದ ವಾಗ್ದಾಳಿ ನಡೆಸದಿರು.

ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಲ್ಲೋ ಇದ್ದರು. ಅವರನ್ನು ಪಕ್ಷಕ್ಕೆ ಕರೆತಂದು ಕ್ಷೇತ್ರದ ಜನರಿಗೆ ಪರಿಚಯ ಮಾಡಿಸದ ನನ್ನನ್ನೇ ನೀವು ಪಕ್ಷದಿಂದ ಹೊರ ಹಾಕಿದೆ, ನನಗೆ ಜಿಪಂ ಟಿಕೆಟ್ ಬೇಡವೆಂದರೂ ಬಲವಂತದಿಂದ ಕೊಟ್ಟು ಪಿತೂರಿ ಮಾಡಿ ಸೋಲಿಸಿದರು ಎಂದು ಆರೋಪಿಸಿದರು.

ಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಯಾರೂ ಈಗ ಕಾಂಗ್ರೆಸ್ ಪಕ್ಷದಲ್ಲಿಲ್ಲ ಶಾಸಕರ ಕಿರುಕುಳಕ್ಕೆ ನೊಂದು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ. ಇವರು ಮಾತೆತ್ತಿದರೆ ಅಭಿವೃದ್ದಿ ಮಾಡಿರುವೆ ಎನ್ನುವರು. ಅದರ ಅರ್ಥ ಕ್ಷೇತ್ರದಲ್ಲಿ ಅವರ ಸ್ವಂತ ಅಭಿವೃದ್ದಿಯಾಗಿದೆ ಎಂದರ್ಥವೆಂದು ವ್ಯಂಗ್ಯವಾಡಿದರು

ಶಾಸಕರು ನನ್ನನ್ನು ಪಕ್ಷದಲ್ಲಿ ಕಡೆಗಣಿಸಿದ್ದರಿಂದ ಜೆಡಿಎಸ್ ಸೇರಿದೆ. ಅಷ್ಟಕ್ಕೇ ನಾನು ಜೆಡಿಎಸ್ ಅಭ್ಯರ್ಥಿಯೊಂದಿಗೆ ಡೀಲ್ ಮಾಡಿಕೊಂಡಿದ್ದೇನೆಂಬ ಆರೋಪ ಮಾಡಿದ್ದು ಅದು ಸತ್ಯಕ್ಕೆ  ದೂರವಾದದು. ಶಾಸಕರಿಗೆ ಸೋಲಿನ ಬೀತಿಯಿಂದ ಬಾಯಿಗೆ ಬಂತಂತೆ ಜೆಡಿಎಸ್ ಮುಖಂಡರ ಮೇಲೆ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದು, ಇದಕ್ಕೆ ಮೇ 10 ಜನರಿಗೆ ತಕ್ಕ ಉತ್ತರ ಸಿಗಲಿದೆ  ಎಂದರು.

ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್ ಮಾತನಾಡಿ ಶಾಸಕರ ವರ್ತನೆ ಹಾಗೂ ದಬ್ಬಾಳಿಕೆಯಿಂದ ಬೇಸತ್ತು ಒಬ್ಬೊಬ್ಬರೆ ಕಾಂಗ್ರೆಸ್ ತೊರೆಯುತ್ತಿರುವುದರಿಂದ ಹತಾಶರಾಗಿ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಂತೆ ಜೆಡಿಎಸ್ ಮುಖಂಡರ ವಿರುದ್ದ ಮಾತನಾಡುತ್ತಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಲಿ, ಈಗಾಗಲೇ ಕ್ಷೇತ್ರದ ಜನ ನಿಮ್ಮ ದೌರ್ಜನ್ಯ,ದಬ್ಬಾಳಿಕೆಯಿಂದ ಬೇಸತ್ತು ಶಾಸಕರನ್ನು ಬದಲಾಯಿಸಲು ಮುಂದಾಗಿದ್ದಾರೆಂದರು.

ನೀವು ಪಕ್ಷದ ನಿಷ್ಟಾವಂತರಾ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೊಂದಿಗೆ ಡೀಲ್ ಆಗಿ ಪಕ್ಷದ ಅಭ್ಯರ್ಥಿಗೆ ಮೋಸ ಮಾಡಿದಿರಿ, ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಗುರುಗಳಿಗೇ ಟೋಪಿ ಹಾಕಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದವರು ನೀವು. ನಿಮ್ಮಿಂದ ನಾವು ಪಾಠ ಕಲಿಯಬೇಕಾ ಎಂದು ತಿರುಗೇಟು ನೀಡಿದರು

ನಾನು ಪಕ್ಷದಿಂದ ಎಲ್ಲಾ ಅನುಕೂಲಗಳನ್ನು ಪಡೆದು ಪಲಾಯನ ಮಾಡಿದ್ದೇನೆಂದು  ಟೀಕಿಸಿದ್ದಾರೆ. ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗುವ ಮೊದಲೇ ನಾನು ಜಿಪಂ ಸದಸ್ಯನಾಗಿದ್ದೆ ವಿನಃ ನಿಮ್ಮಿಂದ ನಾನು ಜಿಪಂ ಸದಸ್ಯರಾಗಿಲ್ಲ, ನನ್ನ ಸಹಕಾರದಿಂದ ನೀವು ಶಾಸಕರಾದರೇ ವಿನಃ ನಿಮ್ಮಿಂದ ನಾನಲ್ಲ, ರಾಮಚಂದ್ರರನ್ನು ಹೆದರಿಸಿದಂತೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ತಾಲೂಕು ಅಧ್ಯಕ್ಷ ಮುನಿರಾಜು ಚಂದ್ರಶೇಖರ್, ರಾಜು, ರಾಮಚಂದ್ರರೆಡ್ಡಿ, ರಂಗನಾಥ್, ಗೋವಿಂದು ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!