• Sun. Apr 28th, 2024

PLACE YOUR AD HERE AT LOWEST PRICE

ಮಕ್ಕಳ ಮನಸ್ಸಿನ ವೇಗವನ್ನು ಎಂಜಿನಿಯರ್, ವೈದ್ಯರಾಗಬೇಕೆಂಬ ಹಣೆಪಟ್ಟಿ ಕಟ್ಟಿ ಸೀಮಿತಗೊಳಿಸದಿರಿ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರದ್ಯಾಪಕ ಮತ್ತು ನಾಟಕಕಾರ ಡಾ.ರಾಜಪ್ಪ ದಳವಾಯಿ ಪೋಷಕರಿಗೆ ಸಲಹೆ ನೀಡಿದರು.

ಕೋಲಾರ ನಗರದ ಅಂತರಗಂಗೆ ಬೆಟ್ಟ ಶಿವಂಗಂಗೆ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನೆಮ್ಮದಿಯ ನಾಳೆಗಾಗಿ ನಮ್ಮದಿ ಚುಕ್ಕಿಮೇಳ-2023ನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮನಸ್ಸು ವೇಗವಾಗಿ ಎಲ್ಲವನ್ನೂ ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಆದರೆ ಪೋಷಕರು ಆ ವೇಗಕ್ಕೆ ತಡೆಯೊಡ್ಡುವ ಕೆಲಸ ಮಾಡದೆ ಮಕ್ಕಳು ಸ್ವಾತಂತ್ರ್ಯವಾಗಿ ಎಲ್ಲವನ್ನೂ ಗ್ರಹಿಸಲು ಬಿಡಬೇಕು ಎಂದರು.

ಆದಿಮ ಕೇಂದ್ರದಲ್ಲಿ ನಡೆಯುವ ಇಂತಹ ಚುಕ್ಕಿಮೇಳಗಳು ಮುಕ್ತ ಗ್ರಹಿಕೆಗೆ ಮತ್ತು ಕಲಿಕೆಗೆ ಸೂಕ್ತ ವೇದಿಕೆಯಾಗಿದೆ ಎಂದ ಅವರು ಮಕ್ಕಳ ಕಲಿಕೆ ಮತ್ತು ಗ್ರಹಿಕೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.

ತಮಗೆ ಚಿಕ್ಕಂದಿನಿಂದಲೂ ತಮಟೆ ನುಡಿಸುವುದು ಕಲಿಯಬೇಕೆಂಬ ಹಂಬಲ. ಆದರೆ ಇದುವರೆಗೂ ಅದು ಸಾದ್ಯವಾಗಲಿಲ್ಲ. ಚಿಕ್ಕಿಮೇಳದ ಶಿಭಿರಾರ್ಥಿಯಾಗಿ ತಾವು ಕಲಿಯುವ ಆಸೆ ಇದ್ದು ಮೇಳದಲ್ಲಿ ಕೆಲವು ದಿನಗಳು ಭಾಗವಹಿಸುವುದಾಗಿ ತಿಳಿಸಿದರು.

ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಕಷ್ಟದ ಕೆಲಸ ಎಂದ ಅವರು ಮಕ್ಕಳನ್ನು ಪ್ರೀತಿಸುತ್ತಾ ಅವರ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಬೆಂಗಳೂರು ವಿಶ್ವ ವಿದ್ಯಾಲಯ ಪ್ರದರ್ಶನ ಕಲಾ ವಿಭಾಗದ ಪ್ರದ್ಯಾಪಕ ಡಾ.ರಾಮಕೃಷ್ಣಯ್ಯ ಮಾತನಾಡಿ, ನಾಲ್ಕು ಗೋಡೆಗಳ ಪಾಠಶಾಲೆಯ ಕಲಿಗೆಗಿಂತಲೂ ಉತ್ತಮ ಹಾಗೂ ಮುಕ್ತ ಸುಂದರ ಪರಿಸರದ ವಾತಾವರಣದಲ್ಲಿ ನೈಸರ್ಗಿಕವಾಗಿ ಸ್ವತಂತ್ರವಾಗಿ ಕಲಿಯಲು ಮಕ್ಕಳಿಗೆ ಆದಿಮ ಚುಕ್ಕಿಮೇಳ ಅವಕಾಶ ಕಲ್ಪಿಸುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕ ಎಸ್.ಶ್ರೀನಿವಾಸರೆಡ್ಡಿ ಮಾತನಾಡಿ, ತಮ್ಮ ಇಲಾಖೆಯು ಆದಿಮ ಸಾಂಸ್ಕೃತಿಕ ಕೇಂದ್ರದ ಚುಕ್ಕಿಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗತ್ಯ ನೆರವು ನೀಡುತ್ತದೆ ಎಂದರು.

 

ಶಭಿರದ ನಿರ್ಧೇಶಕ ಹ.ಮಾ.ರಾಮಚಂದ್ರ ಮಾತನಾಡಿ, ಸಮೂಹ ಮಾದ್ಯಮಗಳು ತಮ್ಮ ನಿಲುವು ನಿರ್ಧಾರಗಳನ್ನು ಜನರ ಮೇಲೆ ಹೇರುತ್ತಿರುವ ದಿನಗಳಲ್ಲಿ ಮಕ್ಕಳಲ್ಲಿ ಜೀವಪರವಾದ ನಿಲುವು ಕಲಿಸಲು ಮತ್ತು ಜೀವನ ವಿಧಾನ ಕಲಿಕೆಗೆ ಆದಿಮ ಚಿಕ್ಕಿಮೇಳವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಕೊಂಡರಾಜನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಚುಕ್ಕಿಮೇಳದ ಮೂಲಕ ಮಕ್ಕಳಲ್ಲಿ ಸಹಬಾಳ್ವೆ ಸಹಜೀವನ ಕಲಿಕೆ ಸಾದ್ಯವಾಗುತ್ತದೆ. ಇಂತಹ ಶಿಭಿರಗಳಿಗೆ ಗ್ರಾಪಂನಿಂದ ಅಗತ್ಯ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.

ಆದಿಮ ಸಂಸ್ಥೆಯ ಅದ್ಯಕ್ಷ ಎನ್.ಮುನಿಸ್ವಾಮಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಈ ವೇಳೆ ಜೆ.ಜಿ.ನಾಗರಾಜ್, ಅಗ್ರಹಾರ ರಮೇಶ್, ಕೊಂಡಯ್ಯ, ನಾವೆಂಕಿ, ತುರಾಂಡಹಳ್ಳಿ ಶ್ರೀನಿವಾಸ್, ಸುಭ್ರಮಣಿ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!