PLACE YOUR AD HERE AT LOWEST PRICE
ದಿನಪತ್ರಿಕೆಯ ರಾದ ಎಸ್.ಲಕ್ಷ್ಮಿಪತಿ ಇನ್ನಿಲ್ಲ.
ಕೋಲಾರ, ಪತ್ರಕರ್ತ ಕೋಲಾರ ಮಿಂಚು ದಿನಪತ್ರಿಕೆಯ ಸಂಪಾದಕರೂ ಆದ ಎಸ್.ಲಕ್ಷ್ಮಿಪತಿ ಅವರು ಇಂದು ಅಪಘಾತದಲ್ಲಿ ದುರ್ಮರಣ ಹೊಂದಿದ್ದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬೇತಮಂಗಲ ರಸ್ತೆಯ ಶಾಪೂರು ಕ್ರಾಸ್‌ನಲ್ಲಿ ಸಂಜೆ ಇವರು ಚಲಿಸುತ್ತಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದು ಎಸ್.ಲಕ್ಷ್ಮಿಪತಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಸಹೋದ್ಯೋಗಿ ಪತ್ರಕರ್ತರಾದ ಸಾಗರ್, ಶಿವಕುಮಾರ್, ನವೀದ್‌ಪಾಷ ಮತ್ತು ಮುನಿರಾಜು ಅವರು ಗಾಯಗೊಂಡಿದ್ದು, ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲೆಂದು ಹಾಗೂ ಗಾಯಗೊಂಡ ಪತ್ರಕರ್ತರು ಶೀಘ್ರ ಗುಣಮುಖರಾಗಲೆಂದು ಸಂಘದ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಹಾರೈಸಿದ್ದಾರೆ.