• Wed. Nov 29th, 2023

PLACE YOUR AD HERE AT LOWEST PRICE

ಕೋಲಾರ,ಮೇ.02. ಹೊಗರಿ ಗ್ರಾಮದಲ್ಲಿ ನನಗೆ ಕಳೆದ ಚುನಾವಣೆಗಳಲ್ಲಿ 800 ಮತಗಳು ಕೊಡುತ್ತಾ ಬಂದಿದ್ದು,ಅಧಿಕಾರ ಇಲ್ಲದಿದ್ದರೂ ಬಿ.ಜೆ.ಪಿ ಸರ್ಕಾರದಿಂದ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಿಸಿ ಕೊಟ್ಟಿದ್ದೇನೆ. ಗ್ರಾಮದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಪೂರ್ಣ ಪ್ರಮಾಣದ ಮತಗಳು ಬಿ.ಜೆ.ಪಿ ಪಕ್ಷಕ್ಕೆ ಹಾಕಬೇಕು. ನಿಮ್ಮ ಗ್ರಾಮಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಜವಾಬ್ದಾರಿ ನನ್ನದಾಗಿದ್ದು ಯಾವುದೇ ರೀತಿಯ ಸಮಸ್ಯಗಳು ಇದ್ದರೂ ಸಹ ನನಗೆ ಕರೆ ಮಾಡಿ ನಾನು ಸ್ಪಂದಿಸುತ್ತೇನೆ ಎಂದು ಮಾಜಿ ಶಾಸಕ ಹಾಗೂ ಬಿ.ಜೆ.ಪಿ.ಅಭ್ಯರ್ಥಿ ವರ್ತೂರ್ ಪ್ರಕಾಶ್ ಆಶ್ವಾಸನೆ ನೀಡಿದರು.

ತಾಲೂಕಿನ ಹೋಗರಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮತಯಾಚನೆ ಮಾಡಿ ಮಾತನಾಡಿದ ಅವರು ಈ ಬಾರಿ ನೀವು ನನಗೆ ಅಧಿಕಾರಿ ಕೊಟ್ಟರೆ ಕ್ಷೇತ್ರದ ಯಾವ ಗ್ರಾಮದಲ್ಲೂ ಕೂಡ ವಿರೋಧ ಪಕ್ಷ ಇರುವುದಿಲ್ಲ.ವಿರೋಧ ಪಕ್ಷಗಳು ಮಾತಾಡಲು ಅವಕಾಶ ನೀಡದ ರೀತಿ ಅಭಿವೃದ್ಧಿ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೋಲಾರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವುದಕ್ಕೆ ಹೊರಟಿದ್ದೇನೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಜಿಲ್ಲಾ ಪಂಚಾಯಿತಿ ,ತಾಲೂಕು ಪಂಚಾಯಿತಿ ಚುನಾವಣೆವರೆಗೆ ಅವಿರೋಧವಾಗಿ ಆಯ್ಕೆಯಾಗುವ ತರ ಕೋಲಾರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆಂದರು.

ಕೋಲಾರದಲ್ಲಿ ಯಾರಿಗೂ ನಾನು ಮೋಸ ಮಾಡಿಲ್ಲ. ಯಾರು ಆಸ್ತಿಯೂ ನಾನು ಕೊಳ್ಳೆ ಹೊಡೆದಿಲ್ಲ. ಅಭಿವೃದ್ಧಿ ಮಾಡುವುದರಲ್ಲಿ ನಾನು ಹಿಂದೆ ಹೋಗುವುದಿಲ್ಲ. ನನ್ನ ರೀತಿ ಯಾವೊಬ್ಬ ರಾಜಕಾರಣಿಯು ಕೋಲಾರದಲ್ಲಿ ನಿಮಗೆ ಸಿಗುವುದಿಲ್ಲ. ನನ್ನ ಕೈ ಬಿಡಬೇಡಿ ಎಂದು ಅವರು ಮನವಿ ಮಾಡಿದರು.

ನಾನು 25 ವರ್ಷಗಳ ಕಾಲ ನಿಮ್ಮ ಮನೆ ಮಗನಾಗಿ ಮನೆ ಸೇವಕನಾಗಿ ಹಗಲಿರಳು ದುಡಿಯುತ್ತೇನೆ. ನಿಮ್ಮ ಗ್ರಾಮದ ಅಭಿವೃದ್ಧಿಗಾಗಿ ಯಾರ ಕೈ ಕಾಲು ಬೇಕಾದರೂ ಹಿಡಿಯುತ್ತೇನೆ. ಗ್ರಾಮ ಬೆಟ್ಟದ ಪಕ್ಕದಲ್ಲಿ ಇರುವುದರಿಂದ ಆಗಾಗ ಚಿರತೆ ದಾಳಿ ಕೂಡ ನಡೆಯುತ್ತದೆ. ಅದಕ್ಕೆ ಸೂಕ್ತ ಕ್ರಮ ಮುಂದಿನ ದಿನಗಳಲ್ಲಿ ಕೈಗೊಳ್ಳುತ್ತೇನೆ. ನಿಮ್ಮ ಗ್ರಾಮ ಅಭಿವೃದ್ಧಿಗಾಗಿ ನಿಮ್ಮ ಕ್ಷೇತ್ರ ಅಭಿವೃದ್ಧಿಗಾಗಿ ನನಗೆ ಇನ್ನೊಮ್ಮೆ ಬಿ.ಜೆ.ಪಿ ಪಕ್ಷದ ಕಮಲದ ಗುರುತಿಗೆ ಕ್ರಮ ಸಂಖ್ಯೆ 3 ಕ್ಕೆ ತಮ್ಮಗಳ ಅಮೂಲ್ಯವಾದ ಮತಗಳನ್ನು ನೀಡುವ ಮೂಲಕ ಆಶೀರ್ವಾದ ಮಾಡಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಬೆಗ್ಲಿ ಸೂರ್ಯ ಪ್ರಕಾಶ್, ಅರುಣ್ ಪ್ರಸಾದ್, ರೂಪ ಶ್ರೀ ಮಂಜುನಾಥ, ತಾ .ಪಂ. ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ, ಒಗರಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಬಾಬು, ನಾರಾಯಣಸ್ವಾಮಿ, ಅಂಬರೀಶ್, ಅರುಣ್ ಬಾಬು, ರವಿಕುಮಾರ್, ಪೃಥ್ವಿರಾಜ್, ನಾಗರಾಜ್, ಕಲ್ಲಪ್ಪ, ಚೌಡಪ್ಪ, ಚಲಪತಿ, ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!