PLACE YOUR AD HERE AT LOWEST PRICE
ಕೋಲಾರ : ಕ್ಯಾಲನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಲೇಔಟ್ ಹರೀಶ್‌ಗೌಡ ತಮ್ಮ ಸಾವಿರಾರು ಬೆಂಬಲಿಗರೊoದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕಿನ ಕ್ಯಾಲನೂರು ಗ್ರಾಮ ಪಂಚಾಯ್ತಿಯ ಬೆಲ್ಲಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊoದಿಗೆ ಎಂಎಲ್‌ಸಿ ಅನಿಲ್ ಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಜೆಡಿಎಸ್ ಪಕ್ಷದಲ್ಲಿದ್ದ ನಾನು ನನ್ನ ತನು ಮನು ದನವವನ್ನು ಪ್ರಾಮಾಣಿಕವಾಗಿ ಧಾರೆ ಎರೆದು ಸೇವೆ ಸಲ್ಲಿಸಿದ್ದೇನೆ. ಆದರೆ, ಎಷ್ಟೇ ಸೇವೆ ಮಾಡಿದರೂ ಜೆಡಿಎಸ್ ಪಕ್ಷ ನನ್ನನ್ನು ಗುರ್ತಿಸಿಲ್ಲ, ಪಕ್ಷದಲ್ಲಿ ಸೇವೆಗೆ ತಕ್ಕ ಸ್ಥಾನಮಾನವನ್ನು ನೀಡಿಲ್ಲ.ಇದ್ದರಿಂದ ಬೇಸೆತ್ತು, ಇಂದು ತಮ್ಮ ಬೆಂಬಲಿಗರೊoದಿಗೆ ಚರ್ಚೆಮಾಡಿ ಅವರ ಪೂರ್ಣ ಬೆಂಬಲವನ್ನು ಪಡೆದು ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ಅವರ ಗೆಲುವಿಗಾಗಿ ಇಂದಿನಿoದಲೇ ಕಾರ್ಯ ಪ್ರವೃತ್ತರಾಗಿದ್ದು, ಕ್ಯಾಲನೂರು ಜಿಲ್ಲಾ ಪಂಚಾಯ್ತಿಯ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಮತಯಾಚನೆ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಚಲಾವಣೆಯಾಗುವಂತೆ ಶ್ರಮವಹಿಸುತ್ತೇವೆ ಎಂದರು.
ಕಾoಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ಮಾತನಾಡಿ, ಲೇಔಟ್ ಹರೀಶ್ ಅವರ ಸೇರ್ಪಡೆಯಿಂದ ಕ್ಯಾಲ ನೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ. ಅವರ ಅಪಾರ ಬೆಂಬಲಿಗರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷ ಇಂದಿನಿoದ ಮತ್ತಷ್ಟು ಪರಿಣಾಮಕಾರಿಯಾಗಿ ಚುನಾವಣೆಯನ್ನು ನಡೆಸಲು ದೃಢವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಲೇಔಟ್ ಹರೀಶ್ ಮತ್ತು ಅವರ ಬೆಂಬಲಿಗರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಅನ್ಯಾಯ ಆಗದಂತೆ ನಡೆಸಿಕೊಳ್ಳುತ್ತೇವೆ ಎಂದು ಹಾಗೂ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ ಅನಿಲ್ ಕುಮಾರ್, ಕೆಪಿಸಿಸಿ ನಂದಿನಿ ಪ್ರವೀಣ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವಿ.ಎಂ. ಮುನಿಯಪ್ಪ, ಬಾಬಣ್ಣ,(ನಾರಯಣಸ್ವಾಮಿ), ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ,ಚ೦ಜಿಮೆಲೆ ರಮೇಶ್, ಕ್ಯಾಲನೂರು ಸುಬ್ಬಣ್ಣ, ಯುವ ಮುಖಂಡ ಸುಧಾಕರ್, ಕಾಂಗ್ರೆಸ್ ಮುಖಂಡ ಮುನಿಅಂಜಿನಪ್ಪ, ಪಾಡಿಗಾನಹಳ್ಳಿ ರಾಮಾಂಜಿನಪ್ಪ, ಡಿಎಸ್‌ಎಸ್ ಮಂಜುಳ ಮುಂತಾದವರು ಉಪಸ್ಥಿತರಿದ್ದರು.