PLACE YOUR AD HERE AT LOWEST PRICE
ಕೋಲಾರ : ದಲಿತ ಸಮುದಾಯಲ್ಲಿನ ಬಲಗೈ ಸಮಾಜದ ಒಂದು ಉಪ ಸಮುದಾಯವಾದ ನೀರಗಂಟಿಗರು ಅಥವಾ ಚಿಕ್ಕತಾಳಿಯ ಬಹುತೇಕರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಥ್‌ರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುತ್ತಿರುವುದಾಗಿ ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ಖಾದ್ರಿಪುರಬಾಬು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಹಾಗೂ ನಮ್ಮವರೇ ಕೆಲವರು ಗೊಂದಲ ಸೃಷ್ಟಿಸಿ ಸಮುದಯದ ಮೇಲೆ ಆರೋಪ ಮಾಡಿ ಮುಜುಗರಕ್ಕೆ ಒಳಪಡಿಸುತ್ತಿದ್ದಾರೆ. ನಮ್ಮ ಸಮುದಾಯ ಒಗ್ಗಟಿನಿಂದಿದ್ದು ನಾವು ಕೊತ್ತೂರು ಮಂಜುನಾಥ್ ಬೆಂಬಲಕ್ಕೆ ನಿಂತಿದ್ದೇವೆ ಎಂದರು.
ಕೊತ್ತೂರು ಮಂಜುನಾಥ್ ಕೆಲವು ಮುಖಂಡರು ಅವರಿಂದ ಅನುಕೂಲ ಪಡೆದು ಬೆನ್ನಿಗೆ ಚೂರಿ ಹಾಕಿದವರನ್ನು ಕುರಿತು ಲೇಲೇಕರ್ ಶೂ ಬಗ್ಗೆ ಮಾತಾಡಿದ್ದಾರೆ ಹೊರೆತು ಅವರು ಸಮುದಾಯದ ಬಗ್ಗೆ ಅವಮಾನ ಆಗುವಂತೆ ಮಾತನಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಪುರಹಳ್ಳಿ ಯಲ್ಲಪ್ಪ ಮುಖಂಡರಾದ ವೇಮಗಲ್ ವೆಂಕಟೇಶ್, ದಿಂಬಚಾಮನಹಳ್ಳಿ ಅಂಬರೀಶ್, ವೇಮಗಲ್ ನಾಗರಾಜ್, ಚಿನ್ನಾಪುರ ರತ್ನಮ್ಮ, ರವಿಕುಮಾರ್ ಸೇರಿದಂತೆ ಮತ್ತಿತರಿದ್ದರು.