• Sat. Jul 13th, 2024

ರಾಜ್ಯದಲ್ಲಿ ಕೋಮುವಾದಿ, ಸಾಮ್ರಾಜ್ಯಸಾಹಿ, ಹೊಸ ಕಾರ್ಪೊರೇಟ್ ಸಂಸ್ಥೆಗಳ ಪರವಾದ ಬಿಜೆಪಿ ಪಕ್ಷವನ್ನು ಸೋಲಿಸಲು ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲು ಸಿಪಿಐಎಂ ಪಕ್ಷ ತೀರ್ಮಾನಿಸಲಾಗಿದೆ

PLACE YOUR AD HERE AT LOWEST PRICE

ಕೋಲಾರ: ರಾಜ್ಯದಲ್ಲಿ ಕೋಮುವಾದಿ, ಸಾಮ್ರಾಜ್ಯಸಾಹಿ, ಹೊಸ ಕಾರ್ಪೊರೇಟ್ ಸಂಸ್ಥೆಗಳ ಪರವಾದ ಬಿಜೆಪಿ ಪಕ್ಷವನ್ನು ಸೋಲಿಸಲು ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲು ಸಿಪಿಐಎಂ ಪಕ್ಷ ತೀರ್ಮಾನಿಸಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಾಮಿಕ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಶಾಸಕರನ್ನು ಸೋಲಿಸಿ ಬುದ್ದಿಕಲಿಸಬೇಕಾಗಿದೆ ಅ ನಿಟ್ಟಿನಲ್ಲಿ ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲಿಸಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು ಉಳಿದ ಬಂಗಾರಪೇಟೆ ಹಾಗೂ ಮಾಲೂರು ನಲ್ಲಿ ಬಿಜೆಪಿಯನ್ನು ಸೋಲಿಸುವ ಪಕ್ಷಕ್ಕೆ ಬೆಂಬಲಿಸಲು ಇನ್ನೂ ಎರಡು ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ ಕೆಜಿಎಫ್ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದ ಅಭ್ಯರ್ಥಿ ಪಿ.ತಂಗರಾಜ್ ಸ್ಪರ್ಧೆ ಮಾಡಿದ್ದು ಕಾರ್ಮಿಕರ ಧ್ವನಿಯಾಗಲು ಅವರನ್ನು ಬೆಂಬಲಿಸಲು ಮನವಿ ಮಾಡಿದರು.

ರಾಜ್ಯದಲ್ಲಿ ಅನೈತಿಕ ದಾರಿಯಲ್ಲಿ ಕರ್ನಾಟಕದ ಜನಮತಗಣನೆಯನ್ನು ಧಿಕ್ಕರಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಆಡಳಿತ ಸಂಪೂರ್ಣ ಜನವಿರೋಧಿಯಾಗಿದೆ ಇದು 40% ಕಮಿಷನ್ ಸರಕಾರವಾಗಿದೆ ಎಲ್ಲಾ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದ ಸರ್ವಾಧಿಕಾರಿ ಸರಕಾರವಾಗಿದೆ. ಸರಕಾರದ ಎಲ್ಲಾ ಯಂತ್ರಗಳನ್ನು ದುರುಪಯೋಗ ಪಡಿಸಿದ್ದಲ್ಲದೆ ಕೋಮುವಾದಿಕರಣಗೊಳಿಸಿ ಕೋಮುಗಲಭೆಗಳಿಗೆ ರಾಜಕೀಯ ಬೇಳೆ ಬೇಯಿಸಿದ ಬಿಜೆಪಿ ಸರಕಾರವು ಬೆಲೆ ಏರಿಕೆ ನಿರುದ್ಯೋಗಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ವಾಧಿಕಾರಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕೆಂದು ಪಕ್ಷ ತೀರ್ಮಾನಿಸಲಾಗಿದೆ ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರದಡಿಯಲ್ಲಿ ಸಾರ್ವಜನಿಕ ಆಸ್ತಿಗಳನ್ನೆಲ್ಲಾ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಶ್ರೀಮಂತರ ಪರವಾದ ಧೋರಣೆಯನ್ನು ತಂದಿದೆ ಅಭಿವೃದ್ಧಿಗಿಂತ ಭಾವನಾತ್ಮಕ ವಿಷಯಗಳನ್ನು ಮುಂದೆ ತಂದು ರಾಜಕಾರಣ ಮಾಡುತ್ತಾ ಇದ್ದಾರೆ ಈ ಹಿನ್ನಲೆಯಲ್ಲಿ ಜನ ಸಮಾನ್ಯರು, ಬಡವರು ಬದುಕುವ ಹಕ್ಕುಗಳೆನ್ನೆಲ್ಲ ಕಸಿದುಕೊಂಡು ಸರ್ವಾಧಿಕಾರಿ ದೋರಣೆಯನ್ನು ಜಾರಿಗೊಳಿಸಿದೆ. ಇಂತಹ ಜನವಿರೋಧಿ ಆಡಳಿತದ ವಿರುದ್ದ ಪ್ರತಿರೋಧ ದಾಖಲಿಸಲು ಈ ಬಾರಿ ಬಿಜೆಪಿಯನ್ನು ಸೋಲಿಸಲು ತೊಡಗಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ನಯಾ ಪೈಸೆ ತರದ ಶಾಸಕರನ್ನು ಸೋಲಿಸಬೇಕು ಕೆಜಿಎಫ್ ಬಿಇಎಂಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟ ಬಿಜೆಪಿ ಆಡಳಿತವನ್ನು ತೊಲಗಿಸಬೇಕಾಗಿದೆ ಅನಿಟ್ಟಿನಲ್ಲಿ ಮತದಾರರು ಮತ ಹಾಕಲು ಮನವರಿಕೆ ಮಾಡಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿ.ಗೀತಾ, ಟಿ.ಎಂ ವೆಂಕಟೇಶ್, ಪಿ.ಆರ್ ಸೂರ್ಯನಾರಾಯಣ, ಸದಸ್ಯ ಪುಣ್ಯಹಳ್ಳಿ ಶಂಕರ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!