• Sat. Apr 20th, 2024

PLACE YOUR AD HERE AT LOWEST PRICE

ಕೋಲಾರ, ಮೇ 02 : ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಚುನಾವಣಾ ಆಯೋಗ ಬಿರುಸಿನ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೇ 10 ರಂದು ನಡೆಯುವ ಮತದಾನದ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡಲು ಜನರಲ್ಲಿ ಅರಿವು ಮೂಡಿಸಲು ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ತಿಳಿಸಿದ್ದಾರೆ.

ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಿಲ್ಲಾದ್ಯಂತ ಸಖಿ ಪಿಂಕ್ ಬೂತ್ಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಬೇರೆ ಮತಗಟ್ಟೆಗಳಿಗಿಂತ ಬಿನ್ನವಾಗಿ ಸಿಂಗರಿಸಲ್ಪಟ್ಟು, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವಂತೆ ನಿರ್ಮಿಸಲಾಗಿದ್ದು, ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕ ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ ಎಂದು ತಿಳಿಸಿದರು.

ಸಖಿ ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮಾಡಿಸುವ ಘೋಷಣೆಗಳನ್ನು ಬರೆಸಲಾಗಿದೆ. . ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ ಮತಗಟ್ಟೆಯಲ್ಲಿನ ಚಿತ್ತಾರಗಳು ಚಿತ್ತಾಕರ್ಷಕವಾಗಿ ಮೂಡಿಬಂದಿವೆ ಮತ್ತು ಮತದಾರರನ್ನು ಆಕರ್ಷಸುತ್ತಿವೆ. ಆಕರ್ಷಕ ಬಳ್ಳಿಗಳು ಹಾಗೂ ಈ ಮತಗಟ್ಟೆಗಳು ಗುಲಾಬಿ ಬಣ್ಣದಿಂದ ಮೂಡಿದ್ದು, ಮಹಿಳೆಯರ ಆಕರ್ಷಣೆಯ ಕೇಂದ್ರವಾಗಲಿದೆ. ಈ ಮತ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಲಭ್ಯವಿರುವಂತೆ ಖಾತ್ರಿ ಪಡಿಸಿಕೊಳ್ಳಲಾಗಿದೆ.

ಈ ಬಾರಿ ರಾಜ್ಯಾದ್ಯಂತ 1320 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೋಲಾರ ಜಿಲ್ಲೆಯ 30 ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿವೆ. ಮತದಾನದ ದಿನದಂದು ಅರ್ಹ ಮತದಾರರೆಲ್ಲರೂ ತಪ್ಪದೇ ಮತದಾನ ಮಾಡಿದರೆ, ಈವರೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಪಟ್ಟಿರುವ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ. ಶೇ.100% ರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಉತ್ತುಂಗಕ್ಕೆ ಏರುಸುವಲ್ಲಿ ಮತದಾತರ ಸಹಕಾರ ಅತ್ಯಗತ್ಯ ಎಂದರು.

ತಾಲ್ಲೂಕುವಾರು ಸಖಿ ಪಿಂಕ್ ಮತಗಟ್ಟೆಗಳು:-

144- ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ-101 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಂಬಾಲ, 141-ಸರ್ಕಾರಿ ಪ್ರೌಢ ಶಾಲೆ ಸರೋಜಿನಿ ರಸ್ತೆ ಶ್ರೀನಿವಾಸಪುರ, 140-ತ್ಯಾಗರಾಜು ಬಡಾವಣೆ ಶ್ರೀನಿವಾಸಪುರ, 48-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಂಕಲವಾರಿಪಲ್ಲಿ, ರಾಯಲಪಾಡು ಹಾಗೂ 39-ಸರ್ಕಾರಿ ಜ್ಯೂನಿಯರ್ ಕಾಲೇಜು ಗೌನಿಪಲ್ಲಿ, ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

145- ಮುಳಬಾಗಿಲು ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: 144-ಹಿರಿಯ ಪ್ರಾಥಮಿಕ ಶಾಲೆ, ಪಳ್ಳಿಗರ ಪಾಳ್ಯ, 225- ಹಿರಿಯ ಪ್ರಾಥಮಿಕ ಶಾಲೆ, ಎಮ್ಮೆನತ್ತ 58- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಯನೂರು 166- ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸೊನ್ನವಾಡಿ 132-ತೋಟಗಾರಿಕಾ ಇಲಾಖೆ, ಮುಳಬಾಗಿಲು ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

146- ಕೆ.ಜಿ.ಎಫ್ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: 83 ಬೆಮೆಲ್ ಪ್ರೆöÊಮರಿ ಶಾಲೆ, 37- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮ್ಮಸಂದ್ರ, 158- ಪುರಸಭಾ ವಾಚನಾಲಯ ಕೆ.ಜಿ.ಎಫ್, 4- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಡಮಾಕನಹಳ್ಳಿ, 12- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಟ್ಟಹಳ್ಳಿ. ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

147- ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: 114 ಐ ಬಿ ಎಂ ಕಾಲೇಜು ಬಂಗಾರಪೇಟೆ, 162-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೀಲುಕೊಪ್ಪ, 60-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದಮುತ್ತನಹಳ್ಳಿ, 85- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಮಂಗಲ, 130- ಬಿ ಇ ಓ ಕಚೇರಿ ಬಂಗಾರಪೇಟೆ ಇಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.

148-ಕೋಲಾರ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: 259- ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ, 261- ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ, 127- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇಟೆ ಚಾಮನಹಳ್ಳಿ, 57- ಸರ್ಕಾರಿ ಜ್ಯೂನಿಯರ್ ಕಾಲೇಜು ಕೊಠಡಿ ಸಂಖ್ಯೆ-2 ವೇಮ್ಗಲ್, 141- ಕೊಠಡಿ ಸಂಖ್ಯೆ-1 ಬಿ.ಇ.ಓ ಕಚೇರಿ ಕೋಲಾರ, ಇಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.

149- ಮಾಲೂರು ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: 73-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಕ್ತಿನಗರ, 30-ಸರ್ಕಾರಿ ಪ್ರೌಢಶಾಲೆ ದೊಡ್ಡಶಿವಾರ, 68-ಜಿ.ಜಿ.ಪಿ.ಎಸ್ ಮಾಲೂರು, 215-ಕಿರಿಯ ಪ್ರಾಥಮಿಕ ಶಾಲೆ ಕಲ್ಕೆರೆ, 132- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಚ್ ಹೊಸಕೋಟೆ, ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!