ಕೋಲಾರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶ್ರೀಲೇಖ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೨೫ಕ್ಕೆ ೬೨೩ ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ಕೋಲಾರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೋಲಾರ ಜಿಲ್ಲಾಪಂಚಾಯ್ತಿ ವಿಷಯ ನಿರ್ವಾಹಕ ಭೈರಪ್ಪ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮುದ್ದುಮಣಿ ಭೈರಪ್ಪ ದಂಪತಿಗಳ ಮಗಳಾದ ಶ್ರೀಲೇಖ ಚಿನ್ಮಯ ಶಾಲೆಯ ವಿದ್ಯಾರ್ಥಿಯಾಗಿದ್ದು, ಜಿಲ್ಲೆಗೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಸಮಾಜ ಸೇವಕ ಹಾಗೂ ಗುತ್ತಿಗೆದಾರ ಡಿ.ಮುನೇಶ್ ಹಾಗೂ ಕುಡಾ ಮಾಜಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ವಿದ್ಯಾರ್ಥಿಯನ್ನು ಅವರ ಮನೆಗೆ ತೆರಳಿ ಅಭಿನಂದಿಸಿದ್ದಾರೆ.
ನಗರದ ಪಾಲಸಂದ್ರ ಬಡಾವಣೆಯ ವಾಸಿ ಗುತ್ತಿಗೆದಾರ ಮದನಹಳ್ಳಿ ಶಿವಪ್ಪ ಹಾಗೂ ಶ್ರೀಮತಿ ಅನುರಾಧ ಶಿವಪ್ಪ ದಂಪತಿಗಳ ಪುತ್ರಿ ಗಾನವಿ.ಎಂ.ಎಸ್. ಇಲ್ಲಿನ ಗುಪ್ತಾಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೫೯೯ ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.
ಇನ್ನೂ ಗಾಂಧೀನಗರದ ನಿವಾಸಿ ಖಾಸಗೀ ಕಂಪನಿಯ ನೌಕರ ಸುಮನ್ ಹಾಗೂ ಶ್ರೀಮತಿ ಶಂಕರಮ್ಮ ದಂಪತಿಗಳ ಪುತ್ರ ಚಿರಾಂತ್.ಎಸ್. ನಗರದ ಶ್ರೀ.ಆರ್.ವಿ.ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಪರೀಕ್ಷೆಯಲ್ಲಿ ೫೮೦ ಅಂಕಗಳಿಸುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.