PLACE YOUR AD HERE AT LOWEST PRICE
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಅವರಿಗೆ ಗ್ಲೋಬಲ್ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ದೆಹಲಿಯ ಆಂಧ್ರಪ್ರದೇಶ್ ಭವನದ ಡಾ.ಬಿ.ಆರ್.ಅಂಬೇಡ್ಕರ್ ಆಡಿಟೋರಿಯಂನಲ್ಲಿ ಮೇ.೨೭ ರಂದು ನಡೆದ ಕಾರ್ಯಕ್ರಮದಲ್ಲಿ ವಿವಿಯ ಸಂಸ್ಥಾಪಿಕ ಅಧ್ಯಕ್ಷರಾದ ಡಾ.ಪಿ.ಮನ್ಯುಲ್ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಡಾ.ರಾಮದಾಸ್ ಅಠವಾಳೆ ಅವರು ಡಾಕ್ಟರೇಟ್ ಗೌರವ ನೀಡಿದರು.
ಡಾಕ್ಟರೇಟ್ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಯ ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪ್ಮಾಹಕ್ಕೀಮ್, ವಿವಿಯ ಉಪಕುಲಪತಿ ಹಾಗೂ ತಮಿಳುನಾಡಿನ ನಿವೃತ್ತ ನ್ಯಾಯಾಶರಾದ ಡಾ.ಕೆ.ವೆಂಕಟೇಶನ್, ತಮಿಳುನಾಡು ಸರ್ಕಾರದ ನಿವೃತ್ತ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಂಪತ್ ಕುಮಾರ್ ಹಾಗೂ ಭಾರತ ವೃತ್ತಪತ್ರಿಕೆಗಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ವಿಪಿನ್ ಗೌರ್ ಮತ್ತಿತರರಿದ್ದು ಡಾಕ್ಟರೇಟ್ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಬಕಾರಿ ತೆರಿಗೆ ನಿವೃತ್ತ ಆಯುಕ್ತ ಎಂ.ಜಗನ್ನಾಥನ್, ಇಂಡಿಯನ್ ಇಂಪ್ರೋವ್‌ಮೆಂಟ್ ಟ್ರಸ್ಟಿ ಡಾ.ಕೆ.ವಾಲರಮತಿ, ಎಸ್‌ಎಸ್ ಮೀಡಿಯಾ ಪ್ರಾಡಕ್ಷನ್ಸ್ ಜಂಟಿ ನಿರ್ದೇಶಕ ಸುಭಾಸಿಶ್ ಸಹಾ, ವಿವಿಯ ಜಂಟಿ ನಿರ್ದೇಶಕ ಡಾ.ಎಂ.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.