• Tue. Apr 23rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಮಕ್ಕಳು ರಂಗ ಶಿಬಿರದಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯಾ ಹೇಳಿದರು.

ಅವರು ಪಟ್ಟಣದ ಸಂತೋಷ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅವಕಾಶ ಕಲ್ಪಿಸಿಕೊಟ್ಟಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಅಂತಹ ಒಂದು ಮಹತ್ ಕಾರ್ಯವನ್ನು ಬಂಗಾರಪೇಟೆಯಲ್ಲಿ ಸಮುದಾಯ ತಂಡವು ಮಾಡಿದೆ ಎಂದು ಶ್ಲಾಘಿಸಿದರು.

ಬಂಗಾರಪೇಟೆಯಲ್ಲಿ ಸಮುದಾಯ ತಂಡವು ನಡೆಸಿದ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭ ಮಕ್ಕಳ ನಾಟಕ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಇಪ್ಪತ್ತೈದು ದಿನಗಳ ಕಾಲ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ನಡೆಸಿ ಆ ಮಕ್ಕಳಲ್ಲಿ ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳನ್ನು ಮಾಡಿಸಲಾಗಿದೆ.

ರಂಗತರಭೇತಿಯನ್ನು ನೀಡಿ ಇವತ್ತು ಆ ಮಕ್ಕಳಿಗೆ ವೇದಿಕೆಯನ್ನು ಕೊಡುವುದರ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರಲು ಸಮುದಾಯದ ಜಗದೀಶ್ ನಾಯಕ್, ಕಾ.ಹು.ಚಾನ್‍ಪಾಷ,ರಾಮಮೂರ್ತಿಗಳಂತಹ ಹಲವಾರು ರಂಗಕರ್ಮಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಂತೋಷ್ ವಿದ್ಯಾಸಂಸ್ಥೆಯ ಆದಿಲ್ ಪಾಷ ಅವರು ಬೇಸಿಗೆ ರಜೆ ಬಂದ ಕೂಡಲೆ ಮಕ್ಕಳು, ಪೋಷಕರು ಊರೂರುಗಳೆಂದು ಸುತ್ತಾಡುವುದು, ಇಲ್ಲದಿದ್ದರೆ ಮೊಬೈಲ್‍ನಲ್ಲೇ ಕಾಲ ಕಳೆಯುವ ಮಕ್ಕಳಿಗೆ ರಂಗ ಶಿಬಿರದ ಮೂಲಕ ಅವರ ಪ್ರತಿಭೆಯನ್ನು ಹೊರತೆಗೆಯುವ ಕೆಲಸವನ್ನು ಸಮುದಾಯ ಮಾಡಿದೆ.

 

ಶಿಬಿರದ ಉದ್ದೇಶ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದು, ಮನುಷ್ಯ ಪ್ರೀತಿ ಹಂಚುವುದು. ಆ ನಿಟ್ಟಿನಲ್ಲಿ ಸಮುದಾಯದ ಮಿತ್ರರು ಮಕ್ಕಳಲ್ಲಿ ಆತ್ಮ ವಿಶ್ವಾಸ ಮತ್ತು ಶ್ರದ್ಧೆ ಬೆಳೆಸಲು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಮುದಾಯದ ರಾಜ್ಯಾಧ್ಯಕ್ಷರಾದ ಅಚ್ಯುತ್ ಅವರು ಮಾತನಾಡುತ್ತ ನಮ್ಮ ಸಮುದಾಯ ತಂಡದವತಿಯಿಂದ ಕಳೆದ ಬಾರಿಯೂ ಆದಿಲ್ ಪಾಷ ಅವರ ಸಹಕಾರದೊಂದಿಗೆ ಮಕ್ಕಳ ರಂಗ ಶಿಬಿರ ಅರ್ಥಪೂರ್ಣವಾಗಿ ನಡೆಯಿತು.

ಈ ಬಾರಿಯು ಸಹ ಶಿಬಿರಕ್ಕೆ ಅವರ ಪ್ರೋತ್ಸಾಹವಿದೆ.ಇವರ ತಂದೆ ಅಬ್ದುಲ್ ಸತ್ತಾರ್ ಅವರ ಕಾಲದಿಂದಲೂ ಈ ಸಂತೋಷ್ ಶಾಲೆ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಜಿ.ನಾಗರಾಜ್ ಅವರು ಮಾತನಾಡುತ್ತ ಎಲ್ಲಾ ಜನಾಂಗದವರು ಸಮುದಾಯದವರು ಎಲ್ಲಾ ಭಾಷೆಗಳವರು ಸೇರಿ ಮೂಡುವುದೇ ಬಹುತ್ವ ಭಾರತ. ಬಹುತ್ವದ ಪರಿಕಲ್ಪನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾದಿ ಮಾಡಿಕೊಟ್ಟಿದ್ದು, ಸಮುದಾಯದ ಆಶಯಗಳು ಇವತ್ತು ಇಂತಹ ರಂಗ ಶಿಬಿರಗಳ ಮೂಲಕ ಮೂರ್ತರೂಪ ಪಡೆಯುತ್ತಿದೆ ಎಂದರು.

ಮುಖ್ಯ ಅತಿಥಿಗಳಾದ ಪುರಸಭೆ ಸದಸ್ಯ ರಾಕೇಶ್ ಗೌಡ, ಎಂ.ಎಸ್.ರಾಮಪ್ರಸಾದ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಮೈ.ಸತೀಶ್ ಕುಮಾರ್ ಅವರಿಂದ ನಿರೂಪಣೆ, ವೆಂಕೋಬರಾವ್ ಪಡತಾರೆ ಸ್ವಾಗತ, ಕಾ.ಹು.ಚಾನ್‍ಪಾಷ ಅವರಿಂದ ವಂದನಾರ್ಪಣೆ ನಡೆಯಿತು.

ಈ ವೇಳೆ ಜನಾರ್ಧನ್, ರಾಮಮೂರ್ತಿ, ಅಲಿಕ್, ಅನಿತ, ಸುಮ, ರವೀಂದ್ರ, ಚಿತ್ರ, ರಾಜೇಶ್ವರಿ, ಅಶ್ವಥ್, ಉಮೇಶ್, ಜಗದೀಶ್, ಸನಾವುಲ್ಲಾಮೊದಲಾದವರು ಉಪಸ್ಥಿತಿ ಇದ್ದರು.

Related Post

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Leave a Reply

Your email address will not be published. Required fields are marked *

You missed

error: Content is protected !!