• Sat. Jul 13th, 2024

ತಂದೆಯಿಲ್ಲದ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಗ ಪೃಥ್ವಿರಾಜ್

PLACE YOUR AD HERE AT LOWEST PRICE

ಕೋಲಾರ ನಗರದ ಶಾಂತಿನಗರದಲ್ಲಿ ವಾಸವಾಗಿರುವ ತಂದೆ ಇಲ್ಲದ ಇಬ್ಬರು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಲಾರ ಶಾಸಕರಾದ ಕೊತ್ತೂರು ಮಂಜುನಾಥ ಅವರ ಮಗ ಪೃಥ್ವಿರಾಜ್ ಒಂದು ವಷದ ಸಂಪೂರ್ಣ ಶಾಲಾ ಶುಲ್ಕವನ್ನು ಚೆಕ್ ನೀಡುವ ಮುಖಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರು.

ಪೃಥ್ವಿರಾಜ್ ಕೊತ್ತೂರು ಮಂಜುನಾಥ್ ಮಾತನಾಡಿ, ಒಂದು ವರ್ಷದ ಹಿಂದೆ ಹತ್ಯೆ ಯಾಗಿದ್ದ ಚರಣ್ ರಾಜ್‌ರ ಇಬ್ಬರು ಹೆಣ್ಣು ಮಕ್ಕಳು ಆರ್ಥಿಕ ಸಮಸ್ಯೆಯಾಗಿ ಶಿಕ್ಷಣದಿಂದ ದೂರ ಉಳಿದಿದ್ದರು.

ಕೋಲಾರ ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್‌ರ ಸಹೋದರ ಶಬರೀಶ್ ಕೊತ್ತೂರು ರವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೆಜಿಎಂ ಬ್ರಿಗೇಡ್ ವತಿಯಿಂದ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದ್ದರು.

ಅವರು ಕೊಟ್ಟ ಮಾತಿನಂತೆಯೇ ಇಂದು ನಾನು ತಾಲೂಕಿನ ಚೌಡದೇನಹಳ್ಳಿ ಎಸ್‌ಬಿಎಸ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಇಬ್ಬರು ಹೆಣ್ಣು ಮಕ್ಕಳಾದ ಲೇಖನ ಹಾಗೂ ತೇಜಸ್ವಿನಿ ರನ್ನು ಶಾಲೆಗೆ ದಾಖಲಿಸಿ ಶಾಲೆಯ ಒಂದು ವಷದ ಸಂಪೂರ್ಣ ಶಾಲಾ ಶುಲ್ಕ, ಸಮವಸ್ತ್ರ, ಬಸ್ ಶುಲ್ಕ, ಪಠ್ಯಪುಸ್ತಕಗಳ ಒಟ್ಟು ಶುಲ್ಕವನ್ನು ಚೆಕ್ ಮುಖಾಂತರ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ದಿವಂಗತ ಚರಣ್ ರಾಜ್ ಪತ್ನಿ ರತ್ನಮ್ಮ ಹಾಗೂ ಶಾಲಾ ಮುಖ್ಯಶಿಕ್ಷಕ ಸಂಗಮೇಶ್, ಕೆಜಿಎಂ ಬ್ರಿಗೇಡ್ ಮುಖಂಡರಾದ ಚೇತನ್, ಶಶಾಂಕ್ ಮಂಜುನಾಥ್, ಹಾರೋಹಳ್ಳಿ ಶಬರೀಶ್ ಮುಂತಾದವರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!