• Sat. Jul 27th, 2024

PLACE YOUR AD HERE AT LOWEST PRICE

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಎಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶ ಬಿ.ಪಿ.ದೇವಮಾನೆ ರವರು ಆರೋಪಿಗೆ ೨೦ ವರ್ಷ ಸಜೆ ತೀರ್ಪು ನೀಡಿದ್ದಾರೆ.

ಸದರಿ ಆರೋಪಿಯ ವಿರುದ್ದ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಎನ್.ಬೈರ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ಕಲಂ ೬ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸ್ಪೆಷಲ್ ಸಿ.(ಪೋಕ್ಸೋ) ೮೨/೨೦೨೨ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಎಚ್.ಎನ್.ವೆಂಕಟೇಶ್ ನಿಗೆ ಕಲಂ ೬ ಪೋಕ್ಸೋ ಕಾಯ್ದೆ ಅಡಿಯಲ್ಲಿ ೨೦ ವಷ ಸಜೆ ಜೊತೆಗೆ ರೂ.೨೫ ಸಾವಿರ ರೂ ದಂಡ ವಿಽಸಿ ದಂಡ ತೆರಲು ವಿಫಲರಾದಲ್ಲಿ ೬ ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.

ನೊಂದ ಬಾಲಕಿಗೆ ರೂ. ೪ ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!