• Fri. Oct 18th, 2024

ಅರಸು ನರ್ಸಿಂಗ್ ಕಾಲೇಜು ವತಿಯಿಂದ ಶೈಕ್ಷಣಿಕ ಎಕ್ಸ್ಪೋ ೨೦೨೩ ಕ್ಕೆ ಚಾಲನೆ ವೈದ್ಯಕೀಯ ಪೂರಕ ಕೋರ್ಸ್‌ಗಳಲ್ಲಿ ವ್ಯಾಸಾಂಗ ಮಾಡಿ – ಡಾ.ಡಿ.ವಿ.ಎಲ್.ಎನ್.ಪ್ರಸಾದ್

PLACE YOUR AD HERE AT LOWEST PRICE

ಮನುಷ್ಯನ ಜೀವ ಉಳಿಸುವಲ್ಲಿ ನೆರವಾಗುವ ವೈದ್ಯಕೀಯ ಪೂರಕ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ಜೀವನದ ಗುರಿ ಸಾಽಸಿಕೊಂಡು ಸಾರ್ಥಕತೆ ಪಡೆದುಕೊಳ್ಳಬೇಕೆಂದು ದೇವರಾಜ ಅರಸು ವೈದ್ಯಕೀಯ ಸಂಸ್ಥೆಯ ರಿಜಿಸ್ಟ್ರಾರ್ ಮತ್ತು ಉಪ ಕುಲಪತಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್ ಹೇಳಿದರು.

ಕೋಲಾರ ನಗರದ ಜಾಲಪ್ಪಆಸ್ಪತ್ರೆಯ ಘಟಕದಲ್ಲಿ ಶನಿವಾರ ಜಾಲಪ್ಪ ನರ್ಸಿಂಗ್ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ನಂತರ ಮತ್ತೇನು ಎಂಬ ಶೈಕ್ಷಣಿಕ ಎಕ್ಸ್ಪೋ ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ ಎನ್ನುವುದು ಪ್ರಗತಿಯ ಸಂಕೇತ ಮತ್ತು ಸ್ವಾತಂತ್ರ್ಯ ಸುರಕ್ಷತೆಯ ಸಾಧನವಾಗಿದ್ದು, ಪ್ರತಿಯೊಬ್ಬರು ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ಕಾನೂನು, ಸಾಮಾನ್ಯ ಪದವಿ ವ್ಯಾಸಾಂಗಕ್ಕೆ ಮಾತ್ರ ಗಮನ ಹರಿಸದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆ ಇರುವ ವೈದ್ಯಕೀಯ ಪೂರಕ ಕೋರ್ಸುಗಳನ್ನು ವ್ಯಾಸಾಂಗ ಮಾಡಿ ಸುಲಭವಾಗಿ ಉದ್ಯೋಗ ಗಳಿಸಲು ಸಾಧ್ಯವಾಗುತ್ತದೆಯೆಂದು ವಿವರಿಸಿದರು.

ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್ ಮಾತನಾಡಿ, ದೇವರಾಜ ಅರಸು ಕಾಲೇಜಿನ ಸಂಸ್ಥಾಪಕ ದಿವಂಗತ ಆರ್.ಎಲ್.ಜಾಲಪ್ಪ ಅವರ ದೂರದೃಷ್ಠಿ ಚಿಂತನೆಯ ಫಲವಾಗಿ ಗ್ರಾಮಾಂತರ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕೋಲಾರ ಮತ್ತು ಸುತ್ತಮುತ್ತಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ದೇಶ ವಿದೇಶಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವುದು ಈ ವೈದ್ಯಕೀಯ ಪೂರಕ ಕೋರ್ಸುಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆಯೆಂದರು.

ಜಾಲಪ್ಪ ಆಸ್ಪತ್ರೆಯ ವೈದ್ಯಾಽಕಾರಿ ಡಾ.ಕೃಷ್ಣಪ್ಪ ಮಾತನಾಡಿ, ದ್ವಿತೀಯ ಪಿಯುಸಿ ಮುಂದೇನು ಎಂಬುದರ ಚಿಂತನೆ ಗೊಂದಲದಲ್ಲಿರುವ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಅರಸು ನರ್ಸಿಂಗ್ ಕಾಲೇಜಿನವತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಉತ್ತಮ ಆಯ್ಕೆಯನಂತರ ಗುರಿ ಸಾಧಿಸುವ ಛಲದಿಂದ ಮುಂದುವರೆಯಿರಿ ಎಂದರು.

ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಸಲಹೆಗಾರ ಮತ್ತು ನರ್ಸಿಂಗ್ ಕಾಲೇಜಿನ ಆಡಳಿತಾಽಕಾರಿ ಹನುಮಂತರಾವ್ ಮಾತನಾಡಿ, ಹೆಚ್ಚು ಅಂಕಗಳಿಸಿದವರು ಅಥವಾ ಹೆಚ್ಚು ದುಡ್ಡು ಇದ್ದವರು ವೈದ್ಯಕೀಯ ಓದುತ್ತಿದ್ದಾರೆ, ಆದರೆ, ಗ್ರಾಮಾಂತರ ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಪದವಿ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡದೆ, ಜಾಲಪ್ಪ ವಿದ್ಯಾಸಂಸ್ಥೆಗಳಲ್ಲಿ ಲಭ್ಯವಿರುವ ೨೨ ವೈದ್ಯಕೀಯ ಪೂರಕ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಮೂಲಕ ವೈದ್ಯರ ಜೊತೆಗೆ ಕೆಲಸ ಮಾಡಿ ಭವಿಷ್ಯವನ್ನು ರೂಪಿಸಿಕೊಂಡು ಪ್ರಗತಿಹೊಂದಬೇಕೆಂದರು.

ಪಿಸಿಯೋಥೆರಪಿ ಪ್ರೊಫೆಸರ್ ಡಾ.ರಮೇಶ್ ಮಾತನಾಡಿ, ಹುಟ್ಟಿನಿಂದ ಸಾಯುವ ತನಕ ಅಗತ್ಯವಿರುವ ವೈದ್ಯಕೀಯ ಹಾಗೂ ಪೂರಕ ಚಿಕಿತ್ಸೆ ಕೋರ್ಸುಗಳಲ್ಲಿ ಕಲಿತವರು ಈಗ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದರೆ ವೈದ್ಯಕೀಯ ಪೂರಕ ಕೋರ್ಸುಗಳ ಬೇಡಿಕೆ ಎಂತದ್ದೆನ್ನುವುದು ಅರಿವಾಗುತ್ತದೆಯೆಂದರು.

ದೇವರಾಜ ಅರಸು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಲಕ್ಷ್ಮಿ ಮಾತನಾಡಿ, ದ್ವಿತೀಯ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಮತ್ತು ವೈವಿಧ್ಯಮ ಕೋರ್ಸುಗಳ ಆಯ್ಕೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿ ಪ್ರೇರೇಪಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ವಿವರಿಸಿ, ಕಾರ್ಯಕ್ರಮಕ್ಕೆ ನೆರವು ನೀಡಿ ಯಶಸ್ಸಿಗೆ ಕೈಜೋಡಿಸಿದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರತಿನಿಽಗಳಿಗೆ ಧನ್ಯವಾದ ಅರ್ಪಿಸಿದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ತಮ್ಮ ಕಾಲೇಜಿನಲ್ಲಿರುವ ಕೋರ್ಸುಗಳು ಮತ್ತು ಅದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಮಂಜುಳ ನಿರೂಪಿಸಿ, ನರ್ಸಿಂಗ್ ವಿದ್ಯಾರ್ಥಿನಿಯರಾದ ಕೀರ್ತಿ, ಕೃಪ ಮತ್ತು ನಯನ ಪ್ರಾರ್ಥಿಸಿ, ನರ್ಸಿಂಗ್ ಕಾಲೇಜಿನ ಪ್ರೊಫೆಸರ್ ಗಾಯಿತ್ರಿ ವಂದಿಸಿದರು.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ನಂತರ ಮತ್ತೇನು ಎಂಬ ವಿಷಯ ಅರಿತುಕೊಳ್ಳಲು ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Related Post

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ

Leave a Reply

Your email address will not be published. Required fields are marked *

You missed

error: Content is protected !!