• Thu. Apr 25th, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾಗಿ ಎಂ.ವಿ.ರವೀಂದ್ರ ಸರ್ವಾನುಮತದಿಂದ ಆಯ್ಕೆಯಾದರು.

ಕೋಲಾರ ನಗರದ ಪತ್ರಕರ್ತ ಭವನದಲ್ಲಿ ಸೋಮವಾರ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಅವರು ಆಯ್ಕೆ ಆದರು.
ಈ ಸಂಧರ್ಭದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲೆಯ ಅಧ್ಯಕ್ಷರಾಗಿದ್ದ ಎಂ.ಎನ್.ಗುಂಡಪ್ಪ ನವರು ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಆಗುತ್ತಿದ್ದು, ಇನ್ನು ಮಂದೆ ಅವರು ಗೌರವ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ನೂತನ ಅಧ್ಯಕ್ಷರು ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಪ್ರಮುಖ ೧೦ ನೇಕಾರ ಸಮುದಾಯಗಳ ೬೦ ಲಕ್ಷ ಜನ ಇದ್ದು, ೮ ಜನ ಮಠಾಶರುಗಳು ಇದ್ದರೂ ಸಂಘಟನೆಯ ಕೊರತೆ ಇರುವುದರಿಂದ ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಸಂಘಟನೆಗೆ ಪ್ರಾಮುಖ್ಯತೆ ನೀಡಲಾಗಿದೆಯೆಂದು ತಿಳಿಸಿದರು.
ತಾವು ಅಧ್ಯಕ್ಷರಾದ ನಂತರ ಸಂಘಟನೆಗೆ ಒತ್ತು ನೀಡಿ ಪ್ರತಿ ಜಿಲ್ಲೆಯ ಅಧ್ಯಕ್ಷರುಗಳ ನೇಮಕ ಮಾಡುತ್ತಿದ್ದು, ರಾಜ್ಯದಲ್ಲಿ ಬೇರು ಮಟ್ಟದಿಂದ ಸಂಘಟನೆ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಸಮುದಾಯದ ಜನತೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು, ಒಕ್ಕೂಟದ ಮೂಲಕ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಜಿಲ್ಲಾ ಅಧ್ಯಕ್ಷರಾದವರ ಜವಾಬ್ದಾರಿ ಹೆಚ್ಚಾಗಿದ್ದು, ಸಮುದಾಯದ ಪ್ರಮುಖ ಜಾತಿಗಳ ಮುಖಂಡರುಗಳನ್ನು ಗುರುತಿಸಿ ಜಿಲ್ಲಾ ಮತ್ತು ತಾಲ್ಲೂಕು ಕಮಿಟಿಗಳನ್ನು ಮಾಡುವುದಲ್ಲದೆ, ಸಂಘಟನೆಗೆ ಒತ್ತು ನೀಡಿ ಸಮುದಾಯದ ಯಾವುದೇ ವ್ಯಕ್ತಿಯ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಒಕ್ಕೂಟದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಉಮಾ ಜಗದೀಶ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಕ್ಕೂಟದ ಮಹಿಳಾ ಘಟಕಗಳನ್ನು ಪ್ರಾರಂಭಿಸಿ ಒಕ್ಕೂಟದ ಮೂಲಕ ಸಮುದಾಯದ ಜನತೆಗೆ ಸರ್ಕಾರದ ಅನುದಾನ ಹಾಗೂ ಸೌಲಭ್ಯಗಳನ್ನು ತಲುಪಿಸಲಾಗುವುದು ಇದಕ್ಕೆ ಒಕ್ಕೂಟದ ಪುರುಷ ಪದಾಕಾರಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಒಕ್ಕೂಟದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ರವೀಂದ್ರ ಮಾತನಾಡಿ, ರಾಜ್ಯಾಧ್ಯಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿರುವುದನ್ನು ಜವಾಬ್ದಾರಿ ಎಂದು ಅರಿತು ಜಿಲ್ಲೆಯಲ್ಲಿ ಹಾಗೂ ತಾಲ್ಲೂಕುಗಳಲ್ಲಿ ಸಮುದಾಯದ ಮುಖಂಡರುಗಳ ವಿಶ್ವಾಸ ಪಡೆದು ಆದ್ಯತೆ ಮೇರೆಗೆ ಒಕ್ಕೂಟದ ಕಮಿಟಿಗಳನ್ನು ಮಾಡುವುದಲ್ಲದೆ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನಾಲ್ಕು ದಶಕಗಳಿಂದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಎಲ್ಲಾ ಇಲಾಖೆಗಳ ಸಂಪರ್ಕ ಇರುವುದರಿಂದ ಸಮುದಾಯದ ಯಾವುದೇ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.

ಒಕ್ಕೂಟದ ನಿರ್ಗಮಿತ ಜಿಲ್ಲಾ ಅಧ್ಯಕ್ಷ ಎಂ.ಎನ್.ಗುಂಡಪ್ಪನವರು ಪ್ರಾಸ್ತಾವಿಕವಾಗಿ ಮಾತಾಡುತ್ತಾ, ಕಳೆದ ೧೦ ವರ್ಷಗಳಿಂದ ನನ್ನ ಕೈಲಾದ ಸೇವೆಯನ್ನು ಸಮುದಾಯದ ಏಳಿಗೆಗೆ ಮಾಡಿದ್ದು, ನನ್ನ ವೈಯಕ್ತಿಕ ಕಾರಣಗಳಿಂದ ಜಿಲ್ಲಾ ಅಧ್ಯಕ್ಷ ಸ್ಥಾನ ತ್ಯಜಿಸುತ್ತಿದ್ದು, ಸಂಘಟನೆಯಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವೆಂದರು.

ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರುಗಳಾದ ಜಗದೀಶ್, ಕಂದ ಸ್ವಾಮಿ, ರಾಜ್ಯದ ಕಾರ್ಯದರ್ಶಿಗಳಾದ ದಯಾನಂದ್ ಶೆಟ್ಟಿಗಾರ್ ಮತ್ತು ಪಿಚ್ಚಂಡಿ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಲತ, ಉಪಾಧ್ಯಕ್ಷೆ ರೃಕ್ಮಣಿ ಸೋಮಶೇಖರ್, ಸಮುದಾಯದ ಮುಖಂಡ ಇರಗಸಂದ್ರ ಮಂಜುನಾಥ್, ಪದ್ಮಶಾಲಿ ಸಂಘದ ಮಾಲೂರು ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಸೆಂಗುಂಧರ್ ಮೊದಲಿಯಾರ್ ಸಂಘದ ಮಾಲೂರು ತಾಲೂಕು ಅಧ್ಯಕ್ಷ ಆನಂದ ಮೂರ್ತಿ ಮುಂತಾದವರು ಉಪಸ್ಥಿತರಿದ್ದು, ಸಭೆಯಲ್ಲಿ ಸಮುದಾಯದ ಎಲ್ಲಾ ಜಾತಿಗಳ ಮುಖಂಡರುಗಳು ಭಾಗವಹಿಸಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!