• Mon. Apr 29th, 2024

ಎಂವಿಜೆ ಕಾಲೇಜಿನ ಆಡಳಿತ ಮಂಡಳಿ ಕಿರುಕುಳಕ್ಕೆ ಪ್ರತಿಭಾವಂತೆ ಬಲಿ ಘಟನೆ ಮರುಕಳಿಸದಂತೆ ಇಡೀ ಸಮಾಜ ಒತ್ತಡ ಹಾಕಲಿ-ನಾರಾಯಣಸ್ವಾಮಿ

PLACE YOUR AD HERE AT LOWEST PRICE

ಮೆರಿಟ್ ರ‍್ಯಾಂಕ್ ಗಳಿಸಿ ಉಚಿತವಾಗಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆದಿದ್ದ ಹಿಂದುಳಿದ ಯಾದವ ಸಮುದಾಯದ ವಿದ್ಯಾರ್ಥಿನಿ ದರ್ಶಿನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಮಾಜದ ಎಲ್ಲಾ ಸಮುದಾಯಗಳು ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ರಚನೆಗೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಹಿಂದುಳಿದ ಸಮಾಜಗಳ ಮಕ್ಕಳು ಸಾಧಕರಾಗಿ ಹೊರಹೊಮ್ಮುವುದು ಇಂದಿನ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಕಷ್ಟಸಾಧ್ಯವಾಗಿದೆ, ಇಂತಹ ಸಂದರ್ಭದಲ್ಲೂ ಮೆರಿಟ್ ಕೋಟಾದಡಿ ಉಚಿತ ವೈದ್ಯಕೀಯ ಸೀಟ್ ಪಡೆದ ಈ ವಿದ್ಯಾರ್ಥಿನಿ ಸಾಧನೆ ಮೆಚ್ಚುವಂತದ್ದು ಎಂದು ತಿಳಿಸಿದ್ದಾರೆ.

ಆದರೆ ಇಂದು ಓರ್ವ ಹಿಂದುಳಿದ ಕುಟುಂಬದ ಸಾಧಕಿಯ ಸಾಧನೆಯನ್ನು ಎಂವಿಜೆ ಕಾಲೇಜು ಆಡಳಿತ ಮಂಡಳಿಯ ಕಿರುಕುಳ ಹೊಸಕಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಇಂದು ಒಂದು ಸಮುದಾಯಕ್ಕೆ ಸೀಮಿತವಲ್ಲ, ಓರ್ವ ಪ್ರತಿಭೆಯ ಬಲಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಅಹಿಂದ ವರ್ಗ ಮಾತ್ರವಲ್ಲ ಸಮಾಜದ ಎಲ್ಲಾ ವರ್ಗಗಳು ಖಂಡಿಸಬೇಕಾಗಿದೆ, ಹಿಂದುಳಿದ ಕುಟುಂಬದಿಂದ ಬಂದ ಈ ಸಾಧಕಿ ಮುಂದಿನ ದಿನಗಳಲ್ಲಿ ಓರ್ವ ವೈದ್ಯೆಯಾಗಿ ಸಾವಿರಾರು ಮಂದಿಯ ಜೀವ ಉಳಿಸುವ ಕಾಯಕ ಆರಂಭಿಸುವ ಆಶಯ ಹೊಂದಿದ್ದರು ಎಂದು ತಿಳಿಸಿದ್ದಾರೆ.

ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಸಾಧಕಿ ದರ್ಶಿನಿಯನ್ನು ತಾಯಿಯೇ ಸಂಸ್ಕಾರ,ಓದು ಕಲಿಸಿ ಬೆಳೆಸಿದ್ದಾರೆ. ಸರ್ಕಾರಿ ಕೋಟಾದಡಿ ಉಚಿತ ಮೆಡಿಕಲ್ ಸೀಟ್ ಪಡೆಯಲು ಹೆಣಗಾಡುವ ಇಂದಿನ ದಿನಗಳಲ್ಲಿ ಈ ವಿದ್ಯಾರ್ಥಿನಿ ತನ್ನ ಪರಿಶ್ರಮದಿಂದ ಅವಕಾಶ ಪಡೆದುಕೊಂಡು ವೈದ್ಯಕೀಯ ಪದವಿ ಮುಗಿಸಿದ್ದಳು ಆದರೆ ಇಂದು ಕಿರುಕುಳಕ್ಕೆ ಬಲಿಯಾಗಿದ್ದಾರೆ.

ಇಂತಹ ಘಟನೆಗಳು ಮುಂದೆಂದು ಮರುಕಳಿಸಬಾರದು, ಪ್ರತಿಭಾನ್ವಿತ ಮಕ್ಕಳಿಗೆ ಇಂತಹ ಸಂಸ್ಥೆಗಳಲ್ಲಿ ರಕ್ಷಣೆ ಸಿಗುವ ಖಾತರಿ ಇರಬೇಕು, ಇದಕ್ಕೆ ಸರ್ಕಾರ ಪ್ರಬಲ ಕಾನೂನು ಜಾರಿಗೆ ತರಬೇಕು, ಕೇವಲ ಆಂತರಿಕ ಅಂಕಗಳ ಹೆಸರಿನಲ್ಲಿ ನಡೆಯುವ ಕಿರುಕುಳ, ಬ್ಲಾಕ್‌ಮೆಲ್ ತಂತ್ರಗಳು ಕೊನೆಯಾಗಲು ಸಮಾಜದ ಎಲ್ಲಾ ಸಮುದಾಯಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದ್ದಾರೆ.

ಈ ಪ್ರಕರಣದ ಸಂಬಂಧ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎಸ್ಪಿಯವರು ಕೈಗೊಂಡಿರುವ ಕ್ರಮವನ್ನು ಜಿಲ್ಲಾ ಯಾದವ ಸಂಘ ಸ್ವಾಗತಿಸುತ್ತದೆ ಎಂದಿರುವ ಅವರು, ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರತಿಭಾವಂತ ಮಕ್ಕಳ ಜೀವ ರಕ್ಷಣೆಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!