• Sat. Mar 2nd, 2024

PLACE YOUR AD HERE AT LOWEST PRICE

ಕೋಲಾರ ಚಿನ್ನದ ಗಣಿ ಪ್ರದೇಶ (KGF) ಅದೆಷ್ಟೋ ಕೌತುಕ ಗಳನ್ನು ತನ್ನ ಒಡಲಲ್ಲಿಟ್ಟು ಕೊಂಡು ಪೊರೆಯುತ್ತಿದೆಯೋ ಗೊತ್ತಿಲ್ಲ!? ಗಣಿ ಕತ್ತಲ ಸುರಂಗಗಳಲ್ಲಿ ಟನ್ ಗಟ್ಟಲೆ ಚಿನ್ನ ಬಗೆದ ನೂರಾರು ಕಾರ್ಮಿಕರಿಗೆ ಮೇಸ್ತ್ರಿಯಾಗಿದ್ದ ಅಸ್ಪೃಶ್ಯನೊಬ್ಬನ ಐತಿಹಾಸಿಕ ಜೀವನಗಾಥೆಯನ್ನು ಮೊಟ್ಟಮೊದಲ ಬಾರಿಗೆ ಇತಿಹಾಸ ಗರ್ಭದಿಂದ ಹೆಕ್ಕಿ ತೆಗದು ಅಚ್ಚರಿ ಚರಿತ್ರೆಯನ್ನು ಬಿಚ್ಚಿಡುತ್ತಿದ್ದೇನೆ.

ಚಿನ್ನದ ನಗರಿ ಕೆಜಿಎಫ್ ನಗರಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಗೌಡ ಗಿಡ್ಡನಹಳ್ಳಿ ಎಂಬ ಕುಗ್ರಾಮವಿದೆ.ಆ ಗ್ರಾಮದಲ್ಲಿ 25 ಕುಟುಂಬಗಳಿಗೆ.ಇಲ್ಲಿ ಬಹುತೇಕ ದಲಿತರು ವಾಸಿಸುತ್ತಿದ್ದಾರೆ. ಅಲ್ಲೊಂದು ಅದ್ಭುತ ಬಂಗಲೆ ಇದೆ.ಅದು ನಿರ್ಮಾಣಗೊಂಡಿರುವುದು ಒಂದು ಶತಮಾನದ ಹಿಂದೆ.ಅದಕ್ಕೆ ಬರೋಬ್ಬರಿ 113 ವರ್ಷಗಳ ಇತಿಹಾಸವಿದೆ. ಅಚ್ಚರ್ಯ, ದಲಿತನೊಬ್ಬ ಊಹಿಸಲು ಅಸಾಧ್ಯ ರೀತಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದ! ಕೆಜಿಎಫ್ ನಗರಕ್ಕೆ ಏಷಿಯಾದಲ್ಲಿ ಪ್ರಥಮ ಬಾರಿ ವಿದ್ಯುತ್ ಸಂಪರ್ಕ ಸಿಕ್ಕಿತ್ತು. ಬಹುಜನರ ದ್ವನಿಯಾಗಿ ಆಗಷ್ಟೇ ರೂಪಗೊಂಡಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತೀಯ ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೆ ಪಾದರ್ಪಣೆ ಮಾಡುತ್ತಿದ್ದ(22ವರ್ಷ) ವೇಳೆಗಾಗಲೇ ದಲಿತನೊಬ್ಬ ಐಷಾರಾಮಿ ಬಂಗಲೆ ನಿರ್ಮಿಸಿ ಬದುಕಿದ್ದ ಎಂಬುದೇ ಎಲ್ಲರ ಹುಬ್ಬೇರುಸುತ್ತಿದೆ.

ಹೀಗಿತ್ತು ಮಹಲ್ : 

ಸುಮಾರು 10 ಅಡಿ ಅಡಿಪಾಯದಲ್ಲಿ, 51×51 ವಿಸ್ತೀರ್ಣದ, ಬ್ರಿಟಿಷರಿಂದ ವಿನ್ಯಾಸಸಲ್ಪಟ್ಟ,ಹಸ್ತ ಕೌಶಲ್ಯ ಹೊಂದಿದ ಹೊಸ್ತಿಲು,ದೈತ್ಯ ಗಾತ್ರದ ಹೆಬ್ಬಾಗಿಲು, ಅಪಾರ ಬೆಲೆ-ಬಾಳುವ ಮರ-ಮುಟ್ಟುಗಳಿಂದ ವಿಶಿಷ್ಟ ಶೈಲಿಯಲ್ಲಿ ತಯಾರಿಸಲಾದ ಒಟ್ಟು 12 ಕಂಬಗಳ,ಸುತ್ತಲೂ 8 ಕಿಟಿಕಿಗಳುಳ್ಳ ವಿಶಾಲ ಹಾಲ್, ಅದಕ್ಕೆ ಹೊಂದಿದ 6 ಉಪ ಬಾಗಿಲಿನ 5 ಒಳಪ್ರತ್ಯೇಕ ಕೊಣೆಗಳು,ಮಹಡಿ ಪ್ರವೇಶಿಸಲು ಒಳಗೆಯೇ ಪಾವಟಿಗೆಗಳು, ಮೇಲೆ ಅತಿಥಿಗಳಿಗಾಗಿಯೇ  2 ದೊಡ್ಡ ಕೊಣೆ, ಒಳಗಡೆ 113 ವರ್ಷಗಳ ಆಹಾರ ಪದಾರ್ಥ ಸಂಗ್ರಹಿಸಲ್ಪಡುತ್ತಿದ್ದ ‘ಕಣಜ’ಈಗಲೂ ಸುರಕ್ಷಿತವಾಗಿದೆ. ಅಸಲಿಗೆ ಇಂಥದೊಂದು”ಸುವರ್ಣ ಬಂಗಲೆ”ನಿರ್ಮಾತನ ಹೆಸರು ಕುಟ್ಟ್ಯಪ್ಪ!ಅಲಿಯಾಸ್ ದಂಡು ಮೇಸ್ತ್ರಿ!!ಇವತ್ತಿಗೂ ದಲಿತನೊಬ್ಬ ಕಣ್ಣಿಗೆ ತಂಪು ಛಷ್ಮಾಕಾಲಿಗೆ ಬೂಟ್ ದರಿಸಿದರೆ ಸಹಿಸದ ಕಾಲದಲ್ಲಿ ,ಅಪವಾದ ಎಂಬಂತೆ ,ಒಂದು ಶತಮಾನದ ಹಿಂದೆಯೇ ನಿರ್ಭಯವಾವಾಗಿ ಮೋಹಕ ಮಹಲ್ ನಿರ್ಮಿಸಿದ ದಂಡು ಮೇಸ್ತ್ರಿಯ ಜೀವನ ಪರಿ ವಿಸ್ಮಯ, ಅಚ್ಚರಿ ಸಂಗತಿ.


ಪ್ರಥಮ ಗುತ್ತಿಗೆದಾರ :

ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಪೃಶ್ಯರ ಜೀವನಗಳ ಕಥೆ ಅಂತ್ಯತ ಯಾತನಮಯ, ದುರ್ಬರವಾಗಿದ್ದವು. ಅಂತಹದುರಿತ ಕಾಲದಲ್ಲಿ ಅಸ್ಪೃಶ್ಯ ದಂಡು ಮೇಸ್ತ್ರಿಗೆ ಮಹಲ್ ನಿರ್ಮಿಸಲು ಹಣ ಎಲ್ಲಿ ಹೊಂದಿಸಿರಬಹುದೆಂಬ ಅನುಮಾನ ಕಾಡದಿರದು? ಬ್ರಿಟಿಷರ ಒಡೆತನದ ಬಿ.ಜಿ. ಎಂ. ಎಲ್. ಚಿನ್ನ ಹೆಕ್ಕಿ ತೆಗೆಯಲು ನೂರಾರು ಕಾರ್ಮಿಕರನ್ನು ಒದಗಿಸುತ್ತಿದ್ದ ಮಾನವ ಸಂಪನ್ಮೂಲ ಗುತ್ತಿಗೆದಾರನಾಗಿದ್ದ!ಬಹುಶಃ ಭಾರತದ ಪ್ರಥಮ ಗುತ್ತಿಗೆದಾರ!!.ಬ್ರಿಟಿಷರ ದಟ್ಟ ಪ್ರಭಾವ, ಅವರ ಜೀವನ ಪದ್ಧತಿ , ದಂಡು ಮೇಸ್ತ್ರಿಯ ಮೇಲೆ ಬಹುವಾಗಿ ಪ್ರಭಾವ ಬೀರಿರಬಹುದು? ಅದ್ದರಿಂದಲೇ ಬ್ರಿಟಿಷರ ಶೈಲಿಯ ಬಂಗಲೆ ನಿರ್ಮಾಣಕ್ಕೆ ಕೈ ಹಾಕಿರುವ ಸಾದ್ಯತೆ  ತಳ್ಳಿ ಹಾಕುವಂತಿಲ್ಲ.

ಪ್ರತಿ ಭಾನುವಾರ ನೂರಾರು ಗಣಿ ಕಾರ್ಮಿಕರಿಗೆ ಇದೇ ದಂಡು ಮೇಸ್ತ್ರಿ ತನ್ನ ಮಹಲ್ ಮುಂದೆಯೇ ಈಚಲು ಮರದಲ್ಲಿ ತೂತು ನಾಣ್ಯ(ಹಣ)ತುಂಬಿಕೊಂಡು ಏಣಿಸಿ-ಏಣಿಸಿ ವೇತನ ಪಾವತಿ ಮಾಡುತ್ತಿದ್ದ.ತನ್ನ ಓಡಾಟಕ್ಕೆ ಸದಾದಂಡು ಮೇಸ್ತ್ರಿ ಕುದುರೆಗಳನ್ನು ಬಳಸುತ್ತಿದ್ದ.ಕುದುರೆಗಳಿಗಾಗಿಯೇ ತಮ್ಮ ಬಂಗಲೆ ಮುಂದೆ ‘ಲಾಯ’ಕಟ್ಟಿಸಿದ್ದ. ಅದು ಈಗಲೂ ಅನಾಥವಾಗಿ ನಿಂತಿದೆ.

ದಂಡು ಕುಟುಂಬ:

ಕುಟ್ಟ್ಯಪ್ಪ ತಂದೆ ಹೆಸರು ದಂಡು ಮೇಸ್ತ್ರಿ. ಆತನ ಮೂಲ ಹೆಸರು ಮರೆಯಾಗಿದೆ. ದಂಡು ಎಂದರೆ ಹಿಂಡು ಎಂಬರ್ಥ.ಆತ ಅನೇಕ ಕಾರ್ಮಿಕರಿಗೆ ಮೇಸ್ತ್ರಿಯಾಗಿದ್ದರಿಂದಲೇ “ದಂಡು ಮೇಸ್ತ್ರಿ” ಎಂಬ ನಾಮಾಂಕಿತ ಪ್ರಚಲಿತವಾಗಿರಬಹುದು. ಅರ್ಥಾರ್ಥ, ಬಿಜಿಎಂಎಲ್ ಚಿನ್ನ ಬಗೆದ ಕಾರ್ಮಿಕರ ನಾಯಕನಾಗಿದ್ದ. ಅವರ ಮಗನೇ ಈ ಬಂಗಲೆ ನಿರ್ಮಾತ. ಬಹುಶಃ ಈ ಕುಟುಂಬವೇ ದಲಿತರ ಪೈಕಿ ಕೋಲಾರ ಜಿಲ್ಲೆಯ ಮೊದಲ ಅಗರ್ಭ ಶ್ರೀಮಂತರಿರಬಹುದು!?.

ಇವರೊಂದಿಗೆ ನಾಲ್ವರು ಸಹೋದರರಿದ್ದರು. ಇವರಲ್ಲಿ 95 ವರ್ಷದ ವೃದ್ಧ ಆದ್ಯಪ್ಪ ಜೀವಂತವಿದ್ದಾರೆ. ಕುಟ್ಟ್ಯಪ್ಪ ದಂಡು ಮೇಸ್ತ್ರಿ ಬಹು ಪತ್ನಿತ್ವದವನು.ಅದಿಕೃತವಾಗಿ ಇಬ್ಬರು ಹೆಂಡತಿಯರಿದ್ದರು. ಒರ್ವಳು ಗೌಡ ಗಿಡ್ಡನ ಹಳ್ಳಿ ಮತ್ತೊಬ್ಬಳು ತಮಿಳುನಾಡಿನ ವೇಪನಪಲ್ಲಿಯ ವಾಸಿ.ಇವರ ಕುಟುಂಬ ಕೋಲಾರಜಿಲ್ಲೆ, ಬೆಂಗಳೂರು, ತಮಿಳುನಾಡಿನ ಹಲವು ಭಾಗಗಳಲ್ಲಿ ಸಂತತಿ ಹರಡಿದೆಇವರ ಕುಟುಂಬದಲ್ಲಿ ಮೊದಲ ಅಕ್ಷರಸ್ಥ ಡಿಚ್ಚಿ ಕೃಷ್ಣಪ್ಪ. ಇತ್ತೀಚಿಗಷ್ಟೆ ಸಹಾಯಕ ಪೋಲೀಸ್ ಸಬ್ ಇನ್ಸ್ ಪಂಕ್ಚರ್ ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ.


ದಂಡು ಮೇಸ್ತ್ರಿ ಮಹಲ್ ದುಸ್ಥಿತಿ:

ಜೂನಿಯರ್ ದಂಡು ಮೇಸ್ತ್ರಿ(ಕುಟ್ಟ್ಯಪ್ಪ ) ನಿರ್ಮಿತ ಬಂಗಲೆ ಇವತ್ತು ಅವಸಾನ ಅಂಚಿಗೆ ತಲುಪಿದೆ. ಈ ನತದೃಷ್ಟ ಬಂಗಲೆ ಸದ್ಯ ಮನುಷ್ಯರು ವಾಸಿಸುತ್ತಿದ್ದ. ಬದಲಿಗೆ,ಕುರಿ,ಎಮ್ಮೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಹೀಗೆ,ಇತಿಹಾಸ ಸಾರಬೇಕಿದ್ದ ದಲಿತನೊಬ್ಬನ “ಸುವರ್ಣ ಮಹಲ್”ಭಗ್ನಗೊಂಡು ನಿಂತಿರುವುದು ದುರಂತ. ಮಹಲಿನ ಮುಂದಿನ ಭಾಗ ಕುಸಿದಿದೆ. ಛಾವಣಿ ವಿರೂಪಗೊಂಡಿದೆ. ಪಾರಂಪರಿಕ ಕಟ್ಟಡಕ್ಕೆ ಭಾಗಶಃ ಧಕ್ಕೆಯಾಗಿದೆ. ಶತಮಾನ ಪೂರೈಸಿದ ಕಟ್ಟಡ ರಕ್ಷಣೆಗಾಗಿ ಪುರಾತತ್ವ ಇಲಾಖೆಯತ್ತ ಎದುರು ನೋಡುತ್ತಿದೆ. ಕುಟ್ಟ್ಯಪ್ಪ ಮತ್ತುಆತನ ಪತ್ನಿ ಸಮಾಧಿ ಊರ ಹೊರಗೆ ಶಿಥಿಲಗೊಂಡ ಪಾಳು ಬಿದ್ದಿವೆ. ಈ ಬಗ್ಗೆ ಜೂನಿಯರ್ ದಂಡು ಮೇಸ್ತ್ರಿ ಮೊಮ್ಮಗ ಪ್ರಹ್ಲಾದ ರನ್ನು ವಿಚಾರಿಸಿದರೆ, ತಮ್ಮ ಬಡತನ ನೆನದು ಗಗ್ಗದಿತರಾಗುತ್ತಾರೆ. ಹಿರಿಕರ ವೈಬೋವಪೈತ ಜೀವನವೇ ನಮಗೆ ಶಾಪವೆಂದು ಮರುಗುತ್ತಾರೆ.

ಸರ್ಕಾರ ವಶಕ್ಕೆ: 

ಶತಮಾನದ ಹಿಂದಿನ ದಲಿತನೊರ್ವನಿಂದ ನಿರ್ಮಿತ ಐತಿಹಾಸಿಕ ಕಟ್ಟಡವನ್ನು ರಾಜ್ಯ ಸರ್ಕಾರ ಆಸ್ಥೆ ವಹಿಸಿ ಸಂರಕ್ಷಣೆ  ಮಾಡುವುದು ತುರ್ತು ಅಗತ್ಯ .ಬಂಗಲೆ ಸುತ್ತ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ,200 ಮೀಟರ್ ವ್ಯಾಪ್ತಿಯ ನ್ನು ರಕ್ಷಿತ ಪ್ರದೇಶವೆಂದು ಕೋಲಾರ ಜಿಲ್ಲಾಡಳಿತ ಷೋಷಿಸಿ,ಕಟ್ಟಡ ಪುನರ್  ಜ್ಹೀವನಗೊಳಿಸಲು ಆಸಕ್ತಿ ತೋರಿ, ಪ್ರವಾಸಿತಾಣವಾಗಿ ಮಾರ್ಪಡಸಲಿ. ಆ ಮೂಲಕ ದಂಡು ಮೇಸ್ತ್ರಿ ಬಂಗಲೆ ಇತಿಹಾಸಕ್ಕೆ ಸೇರಲಿ.

ಒಕ್ಕಣೆ ಬರಹ:
(ಕೆ.ಸಿ.ರಾಜಣ್ಣ)
ಸಾಮಾಜಿಕ ಕಾರ್ಯಕರ್ತ
ಕೋಲಾರ
ಮೊ.7259880948.

Leave a Reply

Your email address will not be published. Required fields are marked *

You missed

error: Content is protected !!