• Mon. May 13th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಹೊಸರಾಯಪ್ಪನವರೇ ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಪುರಸಭೆ ಸದ್ಯಸರಾದ ಚಂದ್ರಾರೆಡ್ಡಿ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿ ಪುರಸಭೆ ಸದಸ್ಯರ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಬಹಿರಂಗವಾಗಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿ ನಾಗರಾಜ್ ಸವಾಲ್ ಹಾಕಿದರು.

ಅವರು ಪಟ್ಟಣದ ಎಸ್.ಎನ್’ರೆಸಾರ್ಟ್ನಲ್ಲಿ ಬಳಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ  ಮಾತನಾಡುತ್ತಾ,ಚಂದ್ರರೆಡ್ಡಿ ಅವರು ನಿಮ್ಮ ಪಕ್ಷದ ಮುಖಂಡರು ಎಂದು ನೀನೇ ಹೇಳುತ್ತೀಯಾ ಹಾಗೂ ನಮ್ಮ ಪಕ್ಷಕ್ಕೆ ದುಡಿದಿದ್ದಾರೆ ಎಂದು ಹೇಳುತ್ತೀಯಾ ಹಾಗಾದರೆ ಕಾಂಗ್ರೆಸ್ ನಲ್ಲಿದ್ದಾಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಿಮ್ಮ ಪಕ್ಷದ ಮೇಲೆ ಘನತೆ ಗೌರವ ಏನಾದರೂ ಇದ್ದರೆ ಪುರಸಭೆಯ ಸದಸ್ಯರ ಸ್ಥಾನಕ್ಕೂ ರಾಜೀನಾಮೆ ಕೊಡಿಸಿ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಿ ಅದನ್ನು ಬಿಟ್ಟು ಕೋರ್ಟು ಮೊರೆ ಹೋಗುವುದು ಯಾವ ನ್ಯಾಯ. ಅಷ್ಟೊಂದು ಗೌರವ ಘನತೆ ಧೈರ್ಯ ಇದ್ದರೆ,ಚುನಾವಣೆಯಲ್ಲಿ ನಾವೇ ನಿಲ್ಲಿಸಿ ಗೆಲ್ಲಿಸುತ್ತೇವೆಂದು ಹೇಳಿದ್ದೀರಲ್ಲವ ಮೊದಲು ಆ ಕೆಲಸ ಮಾಡಿ ಎಂದು ಹೇಳಿದರು.

ನಮ್ಮ ಬಿಜೆಪಿ ಪಕ್ಷ ಬಂಗಾರಪೇಟೆಯಲ್ಲಿ ಸದೃಢವಾಗಿದೆ ಎಂದು ಹೇಳುತ್ತೀರಾ ಅಲ್ಲವೇ ಹಾಗಾದರೆ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ನಿಷ್ಠಾವಂತ ಪಕ್ಷದ ಕಾರ್ಯಕರ್ತರು ಮುಖಂಡರು ಎಲ್ಲಿ ಹೋಗಿದ್ದರು..? ನೀವೆಲ್ಲ ಎಲ್ಲಿ ಹೋಗಿದ್ರಿ ಒಬ್ಬರು ಸಹ ಏನು ಕ್ಷೇತ್ರದ 259 ಮತಗಟ್ಟೆಗಳಲ್ಲಿ ಒಂದೇ ಒಂದು ಟೇಬಲ್ ಸಹ ಹಾಕಲಿಲ್ಲ ಒಬ್ಬೇ ಒಬ್ಬ ಮುಖಂಡರು ಸಹ ಬಂದು ಬಿಜೆಪಿ ಪಕ್ಷಕ್ಕೆ ಮತವನ್ನು ನೀಡಿ ಎಂದು ಕೇಳಿದವರಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಒಂದು ಬೂತಿಗೆ ಸರಿಯಾಗಿ 10 ರಿಂದ 15 ವೋಟು ಸಹ ಇಲ್ಲ. ಹೊಸರಾಯಪ್ಪನವರೇ, ನೀವು ಹೇಳಿದ್ದೀರಾ ಗುಲ್ಲಹಳ್ಳಿ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆ 200 ಮತಗಳು ಹಿನ್ನಡೆಯಾಗಿದೆ ಅಂತ ಮೊದಲು ವಿಷಯ ತಿಳಿದುಕೊಳ್ಳಿ. ಎಷ್ಟು ಮತಗಳು ಮುಂದೆ ಇವೆ ಎಷ್ಟು ಮತಗಳು ಹಿಂದೆ ಇದೆ ಎಂದು ವಿಷಯ ತಿಳಿದುಕೊಂಡು ಮಾತನಾಡಬೇಕು ನಮ್ಮ ಪಂಚಾಯಿತಿಯಲ್ಲಿ ಕೇವಲ 28 ಮತಗಳು ಮಾತ್ರ ಜೆಡಿಎಸ್ ಗೆ ಮುಂದೆ ಇದೆ ಅಷ್ಟೇ. ಬಾಯಿಗೆ ಬಂದ ಹಾಗೆ ಮಾತನಾಡಬೇಡ ಎಂದು ಎಚ್ಚರಿಸಿದರು.

ಹೊಸರಾಯನಪ್ಪನವರೇ ನಿಮ್ಮ ಪಂಚಾಯಿತಿಯಲ್ಲಿ ಎಷ್ಟು ವೋಟು, ನಿಮ್ಮ ಮತಗಟ್ಟೆಯಲ್ಲಿ ಯಾಕೆ ಹೆಚ್ಚು ಮತಗಳು ಬರಲಿಲ್ಲ, ನಮ್ಮ ಗುಲ್ಲಹಳ್ಳಿ ಬೂತ್ ಒಂದರಲ್ಲಿ 80 ಮತಗಳು ಹೆಚ್ಚು ಬಂದಿದೆ, ನಿನ್ನ ಬೂತಿನಲ್ಲಿ ಎಷ್ಟು ಬಂದಿದೆ ನೀನೊಬ್ಬ ಪ್ರಮಾಣಿಕ ಕಾರ್ಯಕರ್ತನಲ್ಲವೇ ನಿನ್ನ ಬಂಡವಾಳ ನಿನ್ನ ಆಟಗಳು ನನಗೆ ಗೊತ್ತಿಲ್ಲವೇ.

ಬಿಜೆಪಿ ಪಕ್ಷದಲ್ಲಿದ್ದಾಗ ನನಗೆ ಬಿ ಫಾರಂ ಕೊಟ್ಟಿಲ್ಲವೆಂದು ಕಾಂಗ್ರೆಸ್ ಗೆ  ಬಂದ ಮಹಾನುಭಾವ ನೀನು ನಮ್ಮ ಶಾಸಕರ ಬಳಿ ಸಹಾಯ ಪಡೆದಿಲ್ಲವೇ, ನೀನು ಆಸ್ಪತ್ರೆಯಲ್ಲಿದ್ದಾಗ ನಿನಗೆ ಯಾರು ಸಹಾಯ ಮಾಡಿದರು.? ಅವತ್ತು ಕಾಂಗ್ರೆಸ್ ಪಕ್ಷ ನಿನಗೆ ಬೇಕಾಗಿತ್ತು ಈಗ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳನ್ನು ಮಾಡುತ್ತೀಯಾ, ಸರಿ ನಿನ್ನ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಂದಿದೆ ನಿಮ್ಮ ಪಕ್ಷ ಏಕೆ ಮುಂದೆ ಬಂದಿಲ್ಲ ಪ್ರಶ್ನಿಸಿದರು.

ನಿಮ್ಮ ಸಂಸದರೇ ಹೇಳಿದ್ದಾರೆ ಬಿಜೆಪಿ ಮುಖಂಡರೆಲ್ಲಾ ಜೆಡಿಎಸ್ ಪಕ್ಷಕ್ಕೆ ಮಾರಾಟವಾಗಿ ಬೆಂಬಲ ನೀಡಿದ್ದಾರೆ ಎಂದು ಅಭ್ಯರ್ಥಿ ಸಹ ಜೆಡಿಎಸ್ ಪಕ್ಷಕ್ಕೆ ಮಾರಾಟವಾಗಿದ್ದಾರೆ ಎಂದು ಹೇಳಿದ್ದಾರೆ. ಸಂಸದರು ಹೇಳಿದ ಮೇಲೆನೇ ನಾವು ನಿಮ್ಮ ಪಕ್ಷದವರ ಮೇಲೆ ಮಾತನಾಡಿರುವುದು ನೀವು ನೇರವಾಗಿ ನಿಮ್ಮ ಸಂಸದರ ಬಳಿ ಹೋಗಿ ಪ್ರಶ್ನೆ ಮಾಡಿ ಕೇಳಿ ನಿಮ್ಮ ಪಕ್ಷ ಬಲಿಷ್ಠ ಪಕ್ಷವಾಗಿದೆ ಅಲ್ಲವೇ ಸಂಸದರನ್ನೇ ಕೇಳಿ ಎಂದು ಹೇಳಿದರು.

ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತವನ್ನು ಹಾಕಿಸಿದ್ದಾರೆ ಅಂತ ಹೇಳಿದ್ದೀಯಾ. ನಿನಗೆ ಮಾನ ಮರ್ಯಾದೆ ಏನಾದರೂ ಇದೆಯಾ ಹೊಸರಾಯಪ್ಪ ನಮ್ಮ ಶಾಸಕರು ಎಲ್ಲಾದರೂ ಬಿಜೆಪಿ ಪಕ್ಷಕ್ಕೆ ಮತವನ್ನು ಹಾಕಿ ಅಂತ ಹೇಳಿರುವುದನ್ನು ಸಾಬೀತುಪಡಿಸು.

ಎಲ್ಲಾದರೂ ಒಂದು ವೋಟು ಮುನಿಸ್ವಾಮಿ ರವರಿಗೆ ಹಾಕಿ ಅಂತ್ತ ಹೇಳಿದ್ದಾರಾ ತೋರಿಸು, ಹಾಗಾದರೆ ಕಾಂಗ್ರೆಸ್ ಬಂದ 50 ಸಾವಿರ ಮತಗಳು ಯಾವುದು. ನಾವೆಲ್ಲರೂ ಸಹ ಲೋಕಸಭಾ ಚುನಾವಣೆಯಲ್ಲಿ ಕೆಎಚ್ ಮುನಿಯಪ್ಪನವರಿಗೆ ಮತವನ್ನು ಹಾಕಿದ್ದೇವೆ  ನೀನು ಶಾಸಕರು ಬಿಜೆಪಿ ಪಕ್ಷಕ್ಕೆ ಮತ ಕೇಳಿರುವುದನ್ನು ಸಾಬೀತುಪಡಿಸು ಆಗ ನಿನ್ನ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪ್ಪ, ಮುಖಂಡರಾದ ಅಂಬರೀಶ್, ಸುಹೇಲ್, ಸಮಾಜ ಸೇವಕ  ಮುನಿರಾಜು ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!