• Thu. Apr 25th, 2024

PLACE YOUR AD HERE AT LOWEST PRICE

ಕೆಜಿಎಫ್:ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿಯೂ ಬೇತಮಂಗಲದಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.

ಬೇತಮಂಗಲ ಗ್ರಾಮದ ಪಾಲಾರ್ ಕೆರೆಯ ದಡದಲ್ಲಿ ನೆಲೆಸಿರುವ ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದ ಅವರಣದಲ್ಲಿ ಪುಪ್ಪ ಪಲ್ಲಕ್ಕಿಗಳಿಗೆ ಸಮೂಹಿಕವಾಗಿ ಸಮುದಾಯದ ಮುಖಂಡರಿಂದ ಚಾಲನೆ ನೀಡಲಾಯಿತು.

ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದ ಅವರಣದಿಂದ ಪ್ರಾರಂಭವಾದ ಪುಪ್ಪ ಪಲ್ಲಕ್ಕಿಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಬಸ್ ನಿಲ್ಧಾಣದಲ್ಲಿ ಪುಪ್ಪ ಪಲ್ಲಕ್ಕಿಗಳ ಪ್ರದರ್ಶನ ಹಾಗೂ ವಿವಿಧ ಕಲಾ ತಂಡಗಳಿಂದ ಪ್ರತಿಭೆಯನ್ನು ಪ್ರದರ್ಶಿಸಲಾಯಿತು, ಬಸ್ ನಿಲ್ಧಾಣದಲ್ಲಿ ಕೆಂಪೇಗೌಡ ಆಚರಣಾ ಸಮಿತಿಯಿಂದ ಪಟಾಕಿ ಹೊಡೆಯಲಾಯಿತು.

ಕೆಂಪೇಗೌಡ ಆಚರಣಾ ಸಮಿತಿಯಿಂದ ಆಕರ್ಷಕ ಪುಪ್ಪ ಪಲ್ಲಕ್ಕಿಯನ್ನು ಮಾಡಿಸಲಾಗಿತು, ಜತೆಗೆ ಬೇತಮಂಗಲ, ಜಯಮಂಗಲ, ತಂಬರ‍್ಲಹಳ್ಳಿ, ಕಂಗಾನಲ್ಲೂರು, ನತ್ತ, ಕಳ್ಳಿಕುಪ್ಪ, ಕೋಗಿಲಹಳ್ಳಿ, ನಲ್ಲೂರು, ಅಂಕತಟ್ಟಹಳ್ಳಿ, ಕಮ್ಮಸಂದ್ರ, ಕೆಜಿಎಫ್ ಒಕ್ಕಲಿಗರ ಸಂಘ, ಕರಡಗೂರು ಗ್ರಾಮಗಳನ್ನು ಒಳಗೊಂಡಂತೆ ಸುಮಾರು ೧೩ಕ್ಕೂ ಹೆಚ್ಚು ಪುಪ್ಪ ಪಲ್ಲಕ್ಕಿ ಹಾಗೂ ಬೆಳ್ಳಿ ಪಲ್ಲಕ್ಕಿಗಳು ಭಾಗವಹಿಸಿದ್ದರು.

ಕೆಂಪೇಗೌಡ ಜಯಂತಿಗೆ ಭೇಟಿ ನೀಡಿದ ಸಾವಿರಾರೂ ಮಂದಿಗೆ ಮದ್ಯಾಹ್ನದ ಊಟವಾಗಿ ಬಿರಿಯಾನಿ ಮಾಡಿಸಲಾಗಿತು, ತಂಪು ಪಾನಿಯ ಮಜ್ಜಿಗೆಯನ್ನು ಸಹ ವಿತರಿಸಲಾಯಿತು. ನಾಡಪ್ರಭು ಕೆಂಪೇಗೌಡರ ಜಯಂತಿಯ ಆಚರಣಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸ್ಥಳೀಯ ಶಾಸಕಿ ರೂಪಕಲಾ ಶಶಿಧರ್ ದೇವರ ದರ್ಶನ ಪಡೆದರು.

ಸಮುದಾಯದ ಹಿರಿಯ ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ್, ಗುತ್ತಿಗೆದಾರ ಗೊಲ್ಲಹಳ್ಳಿ ಚಂದ್ರಶೇಖರ್ ರೆಡ್ಡಿ, ವಕೀಲ ರಾಜಗೋಪಾಲ್ ಗೌಡ, ವೃತ್ತ ನಿರೀಕ್ಷಕ ಸುರೇಶ್ ರಾಜು, ಪಿಎಸೈ ಸತೀಶ್, ಕನ್ನಡ ಸಾಹಿತ್ಯ ಪರಿಷತ್ ಶ್ರೀಹರಿ, ಕಳ್ಳಿಕುಪ್ಪ ವೆಂಕಟಾಚಲಪತಿ, ಸಾಹಿತ್ಯ ಪರಿಷತ್ ಸಮೇಳಾಧ್ಯಕ್ಷ ವೆಂಕಟರವಣ, ಕೆಪಿಸಿಸಿ ದುರ್ಗಾಪ್ರಸಾದ್, ಪೇಟ್ರೋಲ್ ಬಂಕ್ ಮಂಜು ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೆಂಪೇಗೌಡ ಜಯಂತಿ ಆಚರಣೆ ಸಲುವಾಗಿ ಗ್ರಾಮದ ಬಸ್ ನಿಲ್ಧಾಣದಲ್ಲಿ ಮಜರಂಜನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಅತ್ಯುತ್ತಮ ಪುಪ್ಪ ಪಲ್ಲಕ್ಕಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಂಪೇಗೌಡ ಸಮಿತಿಯ ನಲ್ಲೂರು ರವಿ, ವಿಜೇಂದ್ರ, ಸುಭಾಷ್ ಚಂದ್ರ ಗೌಡ, ಲಕ್ಷ್ಮೀಪತಿ, ಲಕ್ಷ್ಮೀನಾರಾಯಣ್, ಬೇಟೇಗೌಡ, ಪ್ರಶಾಂತ್, ಮುರಳಿ, ಅಂಬರೀಶ್, ವಿಶ್ವನಾಥ್, ಸಂಪತ್ ಕುಮಾರ್, ಡೈರಿ ಮಂಜುನಾಥ್, ನ್ಯೂಟೌನ್ ರಮೇಶ್ ಬಾಬು, ವಕೀಲ ವೆಂಕಟೇಗೌಡ, ಕಾರಿ ಪ್ರಸನ್ನ, ನಲ್ಲೂರು ಶಂಕರ್, ಸುರೇಂದ್ರ ಗೌಡ, ಉದಯ್ ಕುಮಾರ್, ನವೀನ್, ನಂದೀಶ್, ಸುರೇಂದ್ರ ಗೌಡ, ಸೀನಪ್ಪ ಮೊದಲಾದವರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!