• Tue. Apr 30th, 2024

PLACE YOUR AD HERE AT LOWEST PRICE

ಗುಂತಕಲ್‌ ವಿಭಾಗ ವಾಪ್ತಿಯ ತಿರುಪತಿ ನಿಲ್ದಾಣದ ಪ್ಲಾಟ್‌ಫಾರಂ ನಂ-2 ಮತ್ತು ನಂ-3ರ ಹಳಿ ದುರಸ್ತಿ ಕಾಮಗಾರಿ ಸಲುವಾಗಿ ಜುಲೈ 12 ರಿಂದ ಆಗಸ್ಟ್‌ 10 ರವರೆಗೆ ಕೆಲವು ರೈಲುಗಳನ್ನು ರದ್ದು/ ಭಾಗಶಃ ರದ್ದು/ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೈಋತ್ಯ ರೈಲ್ವೆ, ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಜುಲೈ 12 ರಂದು ಎಂ.ಜಿ. ಆರ್‌. ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16203 ಎಂ.ಜಿ.ಆರ್‌.ಚೆನ್ನೈ ಸೆಂಟ್ರಲ್‌ – ತಿರುಪತಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್‌ 10 ರವರೆಗೆ ರದ್ದುಗೊಳಿಸಲಾಗುತ್ತಿದೆ.

ಜುಲೈ 12 ರಂದು ತಿರುಪತಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16204 ತಿರುಪತಿ – ಎಂ.ಜಿ.ಆರ್‌.ಚೆನ್ನೈ ಸೆಂಟ್ರಲ್‌ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್‌ 10 ರವರೆಗೆ ರದ್ದುಗೊಳಿಸಲಾಗುತ್ತಿದೆ.

ಜುಲೈ 11 ರಂದು ಚಾಮರಾಜನಗರದಿಂದ ಹೊರಡುವ ರೈಲು ಸಂಖ್ಯೆ 16219 ಚಾಮರಾಜನಗರ – ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್‌ 10 ರವರೆಗೆ ಪಕಲಾ – ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ಜುಲೈ 12 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 16220 ಚಾಮರಾಜನಗರ – ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್‌ 11 ರವರೆಗೆ ತಿರುಪತಿ – ಪಕಲಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ಜುಲೈ 11 ರಂದು ಕದ್ರಿದೇವರಪಲ್ಲಿಯಿಂದ ಹೊರಡುವ ರೈಲು ಸಂಖ್ಯೆ 07590 ಕದ್ರಿದೇವರಪಲ್ಲಿ – ತಿರುಪತಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್‌ 10 ರವರೆಗೆ ಪಕಲಾ – ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ಜುಲೈ 12 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 07657 ತಿರುಪತಿ – ಎಸ್.ಎಸ್‌.ಎಸ್. ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್‌ 10 ರವರೆಗೆ ತಿರುಪತಿ – ರೆಣಿಗುಂಟಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ಜುಲೈ 11 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 07658  ಎಸ್.ಎಸ್‌.ಎಸ್. ಹುಬ್ಬಳ್ಳಿ – ತಿರುಪತಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್‌ 10 ರವರೆಗೆ ರೆಣಿಗುಂಟಾ – ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ರೈಲುಗಳು ಮಾರ್ಗ ಬದಲಾವಣೆ.

ಜುಲೈ 15, 22, 29 ಆಗಸ್ಟ್‌ 5 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 18637 ಹಟಿಯಾ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು ಮೇಲ್ಪಕ್ಕಂ ನಿಲ್ದಾಣದ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ, ಪಕಲಾ ಮತ್ತು ಚಿತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ 11, 18, 25 ಆಗಸ್ಟ್‌ 1, 8 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 18638 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಹಟಿಯಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಮೇಲ್ಪಕ್ಕಂ ನಿಲ್ದಾಣದ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು, ಪಕಲಾ ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!