• Tue. Apr 30th, 2024

PLACE YOUR AD HERE AT LOWEST PRICE

ಮುಳಬಾಗಿಲು:ತಾಲೂಕಿನಲ್ಲಿ ಮೂಲಭೂತ ಸೌಲಬ್ಯಗಳಿಂದ ವಂಚಿತಗೊಂಡಿರುವ ಗುಡಿಸಲು ವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ರೂಟ್ಸ್ ಪಾರ್ ಪ್ರೀಡಂ ಸಂಘಟನೆ ಮತ್ತು ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ನಗರದ ತಾ.ಪಂ. ಕಚೇರಿ ಎದುರು ತಮಟೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು.

ರೂಟ್ಸ್ ಪಾರ್ ಪ್ರೀಡಂ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ವಿ.ಗೋಪಾಲ್ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದರೂ ಮುಳಬಾಗಿಲು ತಾಲೂಕಿನ ನೂರಾರು ಹಳ್ಳಿಗಳಲ್ಲಿ ವಾಸವಾಗಿರುವ ಜನರಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ದೊರೆಯದೇ ಪರದಾಡುವಂತಾಗಿದೆ.

ಮೂಲಭೂತ ಸೌಲಭ್ಯಗಳ ಕಲ್ಪಿಸಲು ಕೋಟ್ಯಾಂತರ ರೂಗಳ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದರೂ ಸದ್ಬಳಕೆ ಮಾಡುವಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು,

ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ರೂಟ್ಸ್ ಪಾರ್ ಪ್ರೀಡಂ ಸಂಘಟನೆಯು ತಾಲೂಕುವಾರು ತಂಡಗಳನ್ನು ರೂಪಿಸಿ ಎಲ್ಲಾ ಜನಾಂಗದ ನಿರ್ಗತಿಕರನ್ನು ಗುರುತಿಸಿ ಪಟ್ಟಿ ಮಾಡಿ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಗುಡಿಸಿಲು ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು, ಗ್ರಾ.ಪಂ ವ್ಯಾಪ್ತಿಯ ಎಲ್ಲಾ ದಲಿತ ಕಾಲೋನಿಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತೆ ಕಾರ್ಯ ಹಮ್ಮಿಕೊಳ್ಳಬೇಕು, ನಿವೇಶನ ಮತ್ತು ಮನೆ ಇಲ್ಲದಿರುವ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮನೆ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು.

ರೂಟ್ಸ್ ಪಾರ್ ಪ್ರೀಡಂ ಸಂಘಟನೆ ರಚನೆ ಮಾಡಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಎನ್.ಆರ್.ಎಲ್.ಎಂ ಹಾಗೂ ಇತರೆ ಇಲಾಖೆಗಳಿಂದ ಸಹಾಯ ಧನ ಮತ್ತು ಸಾಲ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾ.ಪಂ. ಇಓ ಡಾ.ಸರ್ವೇಶ್‌ಗೆ ಮನವಿ ಸಲ್ಲಿಸಿದರು.

ರೂಟ್ಸ್ ಪಾರ್ ಪ್ರೀಡಂನ ರಾಜ್ಯ ಮಹಿಳಾ ಸಂಚಾಲಕಿ ರತ್ನಮ್ಮ, ರಾಜ್ಯ ಸಂಘಟನಾ ಸಂಚಾಲಕ ಜೀವಿಕ ರಾಮಚಂದ್ರಪ್ಪ, ಜಿಲ್ಲಾ ಸಂಚಾಲಕ ರವೀಂದ್ರನಾಥ್, ತಾಲೂಕು ಸಂಚಾಲಕ ಕೆ.ಎಂ.ಆAಜನೇಯ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಪ್ಪ ಮತ್ತು ಚಂದ್ರಪ್ಪ, ಸದಸ್ಯರಾದ ಚೈತ್ರ, ಸವಿತಾ, ಪ್ರೇಮ, ಸುಬ್ರಮಣಿ, ಶ್ರೀನಾಥ್, ನಾರಾಯಣಸ್ವಾಮಿ, ನೀಲಮ್ಮ, ಹರೀಶ್, ಮಂಜಮ್ಮ, ಗಿರಿಜಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!