• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ತಾಲೂಕು ಪಂಚಾಯಿತಿ ಎದುರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಯೋಜಿತ ವತಿಯಿಂದ ಅಕ್ಷರ ದಾಸೋಹ ಯೋಜನೆಯ  ಅಡುಗೆಯವರ ಸಮಸ್ಯೆ ಬೇಡಿಕೆಗಳ ೀಡೇರಿಕೆಗಾಗಿ ಪ್ರತಿಭಟಿಸಿ ಗತಾಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಎಂ ಜಯಲಕ್ಷ್ಮಿ ಮಾತನಾಡಿ, ಮಧ್ಯಾಹ್ನದ ಬಿಸಿ ಊಟ ಯೋಜನೆಯು ಪ್ರಾರಂಭವಾದಾಗಿನಿಂದಲೂ ನೌಕರರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ.

ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಟಿಕತೆ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ ೨೧ ವರ್ಷಗಳಿಂದ ೧ ಲಕ್ಷ ೧೭ ಸಾವಿರ ಮಹಿಳೆಯರು ೫೮ ಲಕ್ಷ ೩೯ ಸಾವಿರ ರೈತರ, ಕೃಷಿ ಕೂಲಿಗಾರರ, ದೀನ ದಲಿತ ಮಕ್ಕಳಿಗೆ ಬಿಸಿ ಅಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಚತೆ ಮಾಡುತ್ತಿದ್ದಾರೆ.

ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ಪರಿಶ್ರಮವಿದೆ. ದಿನಕ್ಕೆ ಸುಮಾರು ೬: ಗಂಟೆಗಳಿಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಪರಿಶ್ರಮ ಗುರುತಿಸಿ ಕನಿಷ್ಠ ಕೂಲಿ ೨೧ ಸಾವಿರ ನೀಡಬೇಕಿದೆ ಎಂದು ಒತ್ತಾಯಿಸಿದರು.

ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಇವರ ಸಂಯೋಜಿತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ ಎಂದು ಪ್ರತಿಭಟನಾಕಾರರು ೊತ್ತಾಯಿಸಿದರು.

೨೦೨೩ ರಾಜ್ಯ ಬಜೆಟ್ ನಲ್ಲಿಇಂದಿನ ಸರ್ಕಾರ ಬಿಸಿಯೂಟ ನೌಕರರಿಗೆ ರೂ.೧೦೦೦ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತು. ಆದರೆ ಈ ಘೋಷಣೆಯಾದ ಗೌರವದನದ ಬಿಡುಗಡೆ ಆದೇಶ ಇನ್ನೂ ನೀಡಿಲ್ಲ. ಕೂಡಲೇ ಆದೇಶ ಮಾಡಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಬೆಲೆ ಏರಿಕೆಯ ಆಧಾರದಲ್ಲಿ ವೇತನ ಹೆಚ್ಚಳಮಾಡಿ ೧೨ ಸಾವಿರ ನೀಡಬೇಕು. ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ ನಾಲ್ಕು ಗಂಟೆ ಕೆಲಸ ಮಾತ್ರವಿದ್ದು, ದಿನನಿತ್ಯ ಆರು ಗಂಟೆಗಳ ಕೆಲಸ ಮಾಡುತ್ತಾರೆ. ಆದರಿಂದ ಮಾರ್ಗದರ್ಶಿ  ಕೈಪಿಡಿಯಲ್ಲಿ ೬:೦೦ ಕೆಲಸ ಎಂದು ತಿದ್ದುಪಡಿ ಮಾಡಬೇಕು.

ರಾಜ್ಯದಲ್ಲಿ ೬೦ವರ್ಷ  ವಯಸ್ಸಾಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ಏನು ಪರಿಹಾರ ಕೊಡದೆ ಸುಮಾರು ೬,೦೦೦ ನೌಕರರನ್ನು ಕೆಲಸದಿಂದ ಕೈಬಿಟ್ಟಿದ್ದಾರೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ ಒಂದು ಲಕ್ಷ ಪರಿಹಾರ ನೀಡಲು ಆದೇಶಿಸಬೇಕು.

ಯೋಜನೆಯ ಪ್ರಾರಂಭದಿಂದಲೂ ಸಾದಿಲ್ವಾವಾರು ಜವಾಬ್ದಾರಿಯನ್ನು ಜಿಲ್ಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡಿಗೆಯವರು ನಿರ್ವಹಿಸಿಕೊಂಡು ಬಂದಿರುತ್ತಾರೆ. ಇಲಾಖೆಯ ಜವಾಬ್ದಾರಿ ಕೆಲಸವಾಗಿ ಯೋಜನೆಯ ಒಂದು ಭಾಗವಾಗಿ ಮುಖ್ಯ ಅಡಿಗೆಯವರು ಕೆಲಸ ನಿರ್ವಹಿಸುತ್ತಿದ್ದರು.

ಆದರೆ ಇತ್ತೀಚಿಗೆ ಈ ಜವಾಬ್ದಾರಿಯನ್ನು ಮುಖ್ಯ ಅಡಿಗೆಯವರಿಂದ ಎಸ್ ಡಿ ಎಂ ಸಿ ಸಮಿತಿಯ ಅಧ್ಯಕ್ಷರಿಗೆ ವರ್ಗಾವಣೆ ಮಾಡಿ ಮುಖ್ಯ ಅಡಿಗೆ ನೌಕರರಿಗೆ ಇರುವ ಹಕ್ಕನ್ನು ಕಿತ್ತುಕೊಂಡಿದೆ. ಇದನ್ನು ಬದಲಿಸಿ ಹಿಂದೆ ಇದ್ದ ಹಾಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು.

ಮಹಿಳೆಯರು ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ಕುಟುಂಬದಲ್ಲಿ ಇರುವವರಿಗೆ ಈ ಕೆಲಸ ನೀಡಲು ಆದೇಶ ನೀಡಬೇಕು. ದಸರಾ ರಜಾ ಅಕ್ಟೋಬರ್ ತಿಂಗಳ ವೇತನ ನೀಡುವುದಿಲ್ಲ. ಈ ವೇತನ ನೀಡಬೇಕು.

ಅಡುಗೆ ನೌಕರರನ್ನು ಮಾರ್ಚ್ ೩೧ಕ್ಕೆ ಅಧಿಕೃತವಾಗಿ ಇಲಾಖೆಯ ಆದೇಶದಂತೆ ಬಿಡುಗಡೆ ಮಾಡುತ್ತಾರೆ. ಆದರೆ ಏಪ್ರಿಲ್ ೧೦ರವರೆಗೆ ಕೆಲಸ ಮಾಡಿಸುತ್ತಾರೆ. ಇವರು ಕರ್ತವ್ಯ ನಿರ್ವಹಿಸುವ  ಹಾಗೆ ಮಾರ್ಚ್ ೩೧ರ ಬದಲು ಆದರೆ ಏಪ್ರಿಲ್ ೧೦ ಎಂದು ಆದೇಶ ವಾಗಬೇಕು.

ಯೋಜನೆಯ ಯಾವುದೇ ಸ್ವರೂಪದ ಜವಾಬ್ದಾರಿಯನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ನೀಡದೆ ಸರ್ಕಾರದ ಅದೀನದಲ್ಲಿಯೇ ನಿರ್ವಹಿಸಬೇಕು. ಒಂದು ಶಾಲೆಯಲ್ಲಿ ಅಡಿಗೆ ಕೆಲಸ ನಿರ್ವಹಿಸಬೇಕಾದರೆ ಎಲ್ಲಾ ಕೆಲಸವನ್ನು ಒಬ್ಬರೇ ನಿರ್ವಹಿಸುವುದು ಕಷ್ಟಕರ. ಅನಾರೋಗ್ಯ ಅಥವಾ ಅನಿವಾರ‍್ಯತೆ ಇದ್ದಾಗ ಕೆಲಸ ನರ‍್ವಹಿಸಲು ಕಷ್ಟಕರ ಆದ್ದರಿಂದ ಪ್ರತಿ ಶಾಲೆಯಲ್ಲಿ ಎರಡು ಜನ ಅಡುಗೆಯವರು ಕೆಲಸ ನರ‍್ವಹಿಸಲು ಅನುಕೂಲ ಮಾಡಿಕೊಡಬೇಕು.

ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಚತೆ ,ಕೈತೋಟ ನರ‍್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸಗಳ ಚಾಚು ತಪ್ಪದೇ ಮಾಡುತ್ತಾರೆ. ಶಾಲೆಯಲ್ಲಿ ಈ ಕೆಲಸವನ್ನು ಇವರೇ ಮಾಡುವುದರಿಂದ ಈ ನೌಕರರನ್ನು ಡಿ ಗ್ರೂಪ್ ನೌಕರನಾಗಿ ಪರಿಗಣಿಸಬೇಕು ಎಂದು  ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಆರ್.ಮಂಜುಳಾ, ಸಂಘಟನಾ ಕಾರ್ಯದರ್ಶಿ ಸವಿತಾ ಶೇಖರಪ್ಪ, ಉಪಾಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷರಾದ ಕೂಳೂರು ಮಂಜುಳಾ, ಪದ್ಮಾವತಿ, ಗುಣಮಣಿ, ರತ್ನಮ್ಮ ,ಸಹ ಕಾರ್ಯದರ್ಶಿ ಭಾರತಿ, ಗೌರಮ್ಮ, ನೀಲಮ್ಮ ಮುಂತಾದವರು ಭಾಗವಹಿಸಿದ್ದರು.

ಈ ಸಂರ‍್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಯುವರಾಜ್, ಪಿಡಿಒ ನಾರಾಯಣಪ್ಪ ಹಾಗೂ ಇನ್ನು ಮುಂತಾದವರು ಮನವಿಪತ್ರ ಸ್ವೀಕರಿಸಿದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!