PLACE YOUR AD HERE AT LOWEST PRICE
ಕೋಲಾರ, ಜುಲೈ. ೨೬ : ಉಗ್ರಗಾಮಿ ಹಾಗೂ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿದವರ, ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವುದು ಗಮನಿಸಿದರೆ ಉಗ್ರಗಾಮಿ ಸಂಘಟನೆ ಮುಖ್ಯಸ್ಥರಂತೆ ಕಾಣುತ್ತಿದ್ದಾರೆಂದು ಕೋಲಾರ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ ಡಾ.ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಹಾಗೂ ಯುದ್ಧ ಸ್ಮಾರಕ ಉದ್ಘಾಟನೆ ನೆರವೇರಿಸಿ ವರು ಮಾತನಾಡಿದರು. ದೇಶ ದ್ರೋಹಿಗಳ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ೮೦ ವರ್ಷಗಳಾದರೂ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರ ವಿರುದ್ಧ ಇದ್ದ ಕೇಸ್ ಇನ್ನೂ ವಾಪಸ್ ಆಗಿಲ್ಲ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಗಲಭೆ ನಡೆಸಿದವರ ರಕ್ಷಣೆಗೆ ಮುಂದಾಗಿರುವುದು ನಾಚಿಕೆಗೇಡು.
ದೇಶ ವಿರೋಧಿ ಚಟುವಟಿಕೆ ನಡೆಸಿದವರ ಪರ ಪತ್ರ ಬರೆದಿರುವ ತನ್ವೀರ್ ಸೇಠ್ ನೀವು ಭಾರತ ದೇಶದಲ್ಲಿ ಜೀವನ ನಡೆಸ್ತಿದ್ದೀರಾ ಎಂದು ಪ್ರಶ್ನಿಸಿದರು. ಸ್ವತಃ ತನ್ವೀರ್ ಸೇಠ್ ಅವರ ಮೇಲಿನ ಕೇಸ್‌ಗಳನ್ನ ಸರ್ಕಾರ ವಾಪಾಸ್ ಪಡೆದಿಲ್ಲ, ಅಷ್ಟೇ ಅಲ್ಲದೆ ಅವರದ್ದೆ ಸಂಘಟನೆಯವರು ಅವರನ್ನೇ ಕೊಲ್ಲಲು ಪ್ರಯತ್ನಿಸಿದ್ದಾರೆ, ಹಾಗಾಗಿ ಈಗ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತನ್ವೀರ್ ಸೇಠ್ ರವರು ಈ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.
ಯು.ಪಿ.ಎ. ಒಕ್ಕೂಟಕ್ಕೆ ಇಂಡಿಯಾ ಕೂಟ ಎಂಬ ಹೆಸರಿಟ್ಟಿರುವ ವಿಚಾರವನ್ನು ಪ್ರಸ್ತಾಪಿಸಿ, ಇವರು ಮಾಡಿಕೊಂಡಿರುವ ಈಸ್ಟ್ ಇಂಡಿಯಾ ಕಂಪನಿ ಅದೊಂದು “ಆಲಿ ಬಾಬಾ ಚಾಲೀಸ್ ಚೋರ್” ಎನ್ನುವ ಒಕ್ಕೂಟ ಎಂದು ವ್ಯಂಗ್ಯವಾಡಿದ ಅವರು, ಪಿ.ಎಫ್.ಐ. ಎಸ್.ಡಿ.ಪಿ.ಐ, ಇಂಡಿಯನ್ ಮುಜಾಹಿದ್ದೀನ್ ನಂತಹ ಉಗ್ರಗಾಮಿ ಸಂಘಟನೆ ಹೆಸರಿನಲ್ಲಿಯೂ ಇಂಡಿಯಾ ಎಂದು ಹಾಕಿಕೊಂಡಿದ್ದಾರೆ, ದೇಶ ವಿರೋಧಿ ಚಟುವಟಿಕೆ ನಡೆಸುವವರು ಇಂಡಿಯಾ ಪದ ಉಪಯೋಗಿಸಿದ್ದಾರೆ ಈ ಕೂಟದ ಸದಸ್ಯರು ದೇಶಕ್ಕೆ ಮಾರಕ ಇವರನ್ನು ಜನರು ನಂಬಲ್ಲ ಎಂದರು.