• Sun. May 5th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ಗ್ರಾಪಂಗಳ ಎರಡನೇ ಅವದಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಆಡಳಿತರೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧ್ಯಕ್ಷಗಾದಿಗೇರಲು ಭಾರಿ ಪೈಪೋಟಿ ಏರ್ಪಟ್ಟು ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಬಿಜೆಪಿಗೆ ಹಿನ್ನಡೆಯಾಗಿದೆ.

ತೊಪ್ಪನಹಳ್ಳಿ,ಯಳೇಸಂದ್ರ,ಬೂದಿಕೋಟೆ ಮತ್ತು ಮಾವಹಳ್ಳಿ ಪಂಚಾಯ್ತಿಗಳು ಕಾಂಗ್ರೆಸ್ ಕಾಂಗ್ರೇಸ್ ಪಕ್ಷದ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಮಾವಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಚುನಾವಣೆ ನಡೆದರೆ ಉಳಿದ ಮೂರು ಗ್ರಾಪಂಗಳಾದ ತೊಪ್ಪನಹಳ್ಳಿ,ಯಳೇಸಂದ್ರ ಮತ್ತು ಬೂದಿಕೋಟೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದಗಿದ್ದಾರೆ.

ತೊಪ್ಪನಹಳ್ಳಿಯಲ್ಲಿ ಅಧ್ಯಕ್ಷರಾಗಿ ಪ್ರಭಾಕರ್ ರೆಡ್ಡಿ ಉಪಾಧ್ಯಕ್ಷರಾಗಿ ಲಾವಣ್ಯ ಹಂಸಾನಂದ, ಯಳೇಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿ ಸಂಗೀತಾ ದೇವರಾಜ್,ಉಪಧ್ಯಕ್ಷರಾಗಿ ರಾಜಪ್ಪ,ಮತ್ತು ಬೂದಿಕೋಟೆ ಅಧ್ಯಕ್ಷರಾಗಿ ಬಿ.ವಿ.ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.

ಮಾವಹಳ್ಳಿ ಗ್ರಾಪಂಯಲ್ಲಿ ಮಾತ್ರ ಚುನಾವಣೆ ನಡೆಯಿತು. ಕಳೆದ ೧೫ವರ್ಷಗಳಿಂದ ಮಾವಹಳ್ಳಿ ಗ್ರಾಪಂ ಬಿಜೆಪಿ ವಶದಲ್ಲಿತ್ತು,ಈ ಬಾರಿಯೂ ಬಿಜೆಪಿ ಪಂಚಾಯಿತಿಯನ್ನು ಬಿಟ್ಟುಕೊಡದೆ ತನ್ನ ವಶದಲ್ಲೆ ಇರಿಸಿಕೊಳ್ಳಲು ನಾನಾ ಸಾಹಸ ಮಾಡಿತು, ಆದರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಧ್ಯೆ ಪ್ರವೇಶದಿಂದ ಆಪರೇಶನ್ ಹಸ್ತ ಮಾಡಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಭಾವುಟ ಹಾರಿಸಿದ್ದಾರೆ.

ಅಧ್ಯಕ್ಷರಾಗಿ ಸುಪ್ರಿಯಾ ಬಿಜೆಪಿ ಬೆಂಬಲಿತ ಮಂಜುನಾಥ್ ವಿರುದ್ದ ಒಂದು ಮತಗಳ ಅಂತರದಿಂದ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ೬ಗ್ರಾಪಂಗಳ ಪೈಕಿ ಕಾಂಗ್ರೆಸ್ ನಾಲ್ಕರಲ್ಲಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ‍್ಯಕರ್ತರು ವಿಜಯೋತ್ಸವ ಆಚರಿಸಿದರು. ಕೇತಗಾನಹಳ್ಳಿ ಮತ್ತು ಕೆಸರನಹಳ್ಳಿ ಗ್ರಾಪಂಗಳಲ್ಲಿ ಅದ್ಯಕ್ಷ ಉಪಾದ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!