• Sun. May 5th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ತೀವ್ರ ಪ್ರತಿಷ್ಟೆಯ ಕಣವಾಗಿದ್ದ ಮತ್ತು ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದ್ದ ಕೆಸರನಹಳ್ಳಿ ಹಾಗೂ ಕೇತಗಾನಹಳ್ಳಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಗ್ರಾಪಂಗಳು ಬಿಜೆಪಿ ವಶವಾಗಿದ್ದು, ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.

ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಲಲಿತಾ ಕಪಾಲಿಶಂಕರ್ ಹಾಗೂ ಉಪಾಧ್ಯಕ್ಷರಾಗಿ ಸತ್ಯ ಗೋವಿಂದರಾಜು ರವರು ಚುನಾಯಿತರಾಗಿದ್ದಾರೆ. ಕಳೆದ ಎರಡೂ ವರೆ ವರ್ಷಗಳ ಅವಧಿಯಲ್ಲಿ ಕೆಸರನಹಳ್ಳಿ ಗ್ರಾಪಂ ಕಾಂಗ್ರೆಸ್ ವಶದಲ್ಲಿತ್ತು, ಈ ಬಾರಿಯೂ ಕಾಂಗ್ರೆಸ್ ತನ್ನ ವಶಕ್ಕೆ ಪಡೆಯಲು ನಾನಾ ಕಸರತ್ತು ಮಾಡಿತ್ತು.

ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಲಲಿತಾ ಕಪಾಲಿಶಂಖರ್ ಹಾಗೂ ಸತ್ಯ ಗೋವಿಂದರಾಜು ತಮ್ಮ ಎದುರಾಳಿಗಳಾದ ಮಮತಾ ಅಂಬರೀಶ್ ಹಾಗೂ ಪ್ರದೀತ್‌ರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ. ಕೆಸರನಹಳ್ಳಿ ಗ್ರಾಪಂಗೆ ನೂತನವಾಗಿ ಆಯ್ಕೆಯಾಗಿರುವ ಅದ್ಯಕ್ಷರ ಪತಿ ಕಪಾಲಿಶಂಕರ್ ಪುರಸಭೆ ಸದಸ್ಯರಾದರೆ ಪತ್ನಿ ಲಲಿತಾ ಗ್ರಾಪಂ ಅಧ್ಯಕ್ಷೆಯಾಗಿರುವುದು ವಿಶೇಷವಾಗಿದೆ.

ಇದೇ ರೀತಿ ಕೇತಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸಹ ಕಾಂಗ್ರೆಸ್ ಪಾರುಪತ್ಯ ಸಾಧಿಸಲು ಮುಂದಾಗಿತ್ತು, ಆದರೆ ಬಿಜೆಪಿ ಬೆಂಬಲಿತ ೧೧ ಸದಸ್ಯರು ಒಂದಾಗಿದ್ದರಿಂದ ಕಾಂಗ್ರೆಸ್‌ಗೆ ಸೋಲು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಂದಾಗದ ಕಾರಣ ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಕೆ.ವಿ.ಮಂಜುಳಾಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ರಾಧಮ್ಮ ರಾಮಪ್ಪ ಅವಿರೋಧವಾಗಿ ಆಯ್ಕೆಯಾದರು.

ಕೇತಗಾನಹಳ್ಳಿ ನೂತನ ಅದ್ಯಕ್ಷೆ ಮಂಜುಳ ಶ್ರೀನಿವಾಸ್ ಮಾತನಾಡಿ, ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ ಅವಿರೋಧ ಆಯ್ಕೆಗೆ ಕಾರಣದಾದ ಪುರಸಭೆ ಮಾಜಿ ಅದ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ, ಮುಖಂಡರಾದ ಬೋಯನಹಳ್ಳಿ ಕೃಷ್ಣಪ್ಪ ಮತ್ತು ಬತ್ತಲಹಳ್ಳಿ ಮಂಜುನಾಥ್ ರವರಿಗೆ ಅಭಿನಂದನೆ ಸಲ್ಲಿಸಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ಕೆಸರನಹಳ್ಳಿ ಗ್ರಾಪಂ ಬಿಜೆಪಿ ಭದ್ರಕೋಟೆ, ಆದರೆ ಕಳೆದ ಎಡರೂವರೆ ವರ್ಷ ಕಾಲ ಕಾಂಗ್ರೆಸ್ ವಶವಾಗಿತ್ತು, ಈಗ ಮತ್ತೆ ಬಿಜೆಪಿ ವಶವಾಗಿದೆ. ಕೇತಗಾನಹಳ್ಳಿಯಲ್ಲೂ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇದರಿಂದ ಮುಂದೆ ಬರುವಂತಹ ಜಿಪಂ ಹಾಗೂ ತಾಪಂ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳನ್ನು ತಂದು ಕೊಡಲು ಸಹಕಾರಿಯಾಗಲಿದೆ ಎಂದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!