• Thu. Apr 25th, 2024

ಕೋಚಿಮುಲ್ ವಾರ್ಷಿಕ ಸಾಮಾನ್ಯ ಸಭೆ, ಕೋಚಿಮುಲ್ ವಿಭಜನೆಗೆ ಆಗ್ರಹಿಸಿ ಗದ್ದಲ ಎಂಪಿಸಿಎಸ್ ಅಧ್ಯಕ್ಷರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದ ಅಧ್ಯಕ್ಷ ಕೆ.ವೈ. ನಂಜೇಗೌಡ

PLACE YOUR AD HERE AT LOWEST PRICE

ಕೋಲಾರ,: ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕೋಚಿಮುಲ್ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ಆರಂಭದಲ್ಲೇ, ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟದ ವಿಭಜನೆಗೆ ಕೇಳಿಬಂದ ಕೂಗು ಸಾಕಷ್ಟು ಗದ್ದಲವನ್ನುಂಟು ಮಾಡಿತು.

ಸಭೆಯು ಆರಂಭವಾಗುತ್ತಿದ್ದoತೆಯೇ ಚಿಕ್ಕಬಳ್ಳಾಪುರ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಎದ್ದು ನಿಂತು, ಕೋಚಿಮುಲ್ ಅನ್ನು ಕೂಡಲೇ ವಿಭಜನೆ ಮಾಡಬೇಕು. ಜತೆಗೆ ಆಡಳಿತ ಮಂಡಳಿಯ ಮತಕ್ಷೇತ್ರ ವಿಂಗಡಣೆ ಬಗ್ಗೆ ಸಮರ್ಪಕವಾಗಿ ಚರ್ಚೆ ಮೂಲಕ ನ್ಯಾಯ ಒದಗಿಸಲು, ಸಭೆಯಲ್ಲೇ ನಿರ್ಣಯ ಕೈಗೊಳ್ಳುವಂತೆ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರನ್ನು ಪಟ್ಟು ಹಿಡಿದರು.

ಕೋಚಿಮುಲ್ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಅನಾಥವಾಗಿದ್ದು, ನಿರ್ದೇಶಕರು ಯಾರೂ ಸಹ ಈ ಬಗ್ಗೆ ಮಾತನಾಡುತ್ತಿಲ್ಲ. ಭೌಗೋಳಿಕವಾಗಿ ವಿಭಜನೆಗೆ ಸರಕಾರ ಮುಂದಾಗಿದ್ದರೂ ಸಹ ತಡೆಯಾಜ್ಞೆ ತಂದು ಈ ದಿನ ಅನ್ಯಾಯ ಮಾಡಲಾಗಿದೆ. ಕೂಡಲೇ ಸರಕಾರವು ವಿಭಜನೆ ಮಾಡಿ, ಪ್ರತ್ಯೇಕ ಒಕ್ಕೂಟ ರಚನೆ ಮಾಡಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಕೋಚಿಮುಲ್ ಮಾಜಿ ಅಧ್ಯಕ್ಷ, ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್ ಒಕ್ಕೂಟ ವಿಭಜನೆಯ ಕುರಿತು ಮತ್ತೊಂದು ಬಾರಿ ಚರ್ಚಿಸಲು ಮುಂದಾದಾಗ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೋಹನ್‌ರೆಡ್ಡಿ ಹಾಗೂ ಕೋಮುಲ್ ನಿರ್ದೇಶಕ ವೆಂಕಟೇಶ್ ತಿರುಗಿಬಿದ್ದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳು ವೇದಿಕೆ ಮುಂಭಾಗವೇ ಏರುಧ್ವನಿಯಲ್ಲಿ ನಡೆದವು.

ಈ ವೇಳೆ ಪ್ರತಿಭಟನಾನಿರತ ಅಧ್ಯಕ್ಷರುಗಳನ್ನು ಸಮಾಧಾನಪಡಿಸಿ ಮಾತನಾಡಿದ ಕೆ.ವೈ.ನಂಜೇಗೌಡ, ಸಮರ್ಪಕವಾಗಿ ವಿಭಜನೆಯ ನಿಯಮಗಳನ್ನು ಅನುಸರಿಸಿಲ್ಲವೆಂದು ನ್ಯಾಯಾಲಯವು ತೀರ್ಪು ನೀಡಿದ್ದು, ಅದನ್ನು ನಾವ್ಯಾರು ಸಹ ಪ್ರಶ್ನೆ ಮಾಡುವ ಹಕ್ಕು ಹೊಂದಿಲ್ಲ ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿರಬೇಕು. ಎಂಪಿಸಿಎಸ್‌ಗಳಿಗೆ ಅನುಗುಣವಾಗಿ ಮತ ಕ್ಷೇತ್ರ ವಿಂಗಡಣೆಯಾಗಿದ್ದು, ಭೌಗೋಳಿಕವಾಗಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಸಭೆಯಲ್ಲಿ ನೀವು ಇಟ್ಟಿರುವ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.

ಇದಾದ ಬಳಿಕ ಕೋಚಿಮುಲ್ ಹಾಲಿ ಅಧ್ಯಕ್ಷ ಕೆ.ನಂಜೇಗೌಡ ಮತ್ತು ಮಾಜಿ ಅಧ್ಯಕ್ಷ ಪ್ರಸನ್ನರ ನಡುವೆ ಮಾತಿನ ಚಕಮಕಿಗಳು ಆರಂಭಗೊoಡಿದ್ದು, ಕೆಲ ಕಾಲ ಗದ್ದಲದ ವಾತಾವರಣ ಉಂಟಾಗಿತ್ತು.

ವಿವಿಧ ಎಂಪಿಸಿಎಸ್ ಅಧ್ಯಕ್ಷರುಗಳು ಮಾತನಾಡಿ, ಹಾಲಿನ ಧರವನ್ನು ಸರಕಾರವು ೩ರೂ ಏರಿಕೆ ಮಾಡಿದ್ದರೂ ನೀವು ೨.೫೦ರೂ ಕಡಿತ ಮಾಡಿದ್ದು, ಉತ್ಪಾದಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಹಾಲು ಉತ್ಪಾದಕರ ಖರೀದಿ ಧರ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು ಹಾಲು ಉತ್ಪಾದಕರನ್ನು ಪ್ರವಾಸಕ್ಕೆ ಕಳುಹಿಸುತ್ತೀರಿ. ಅದಕ್ಕೆ ಸರಿಯಾದ ಮಾಹಿತಿ, ಲೆಕ್ಕಗಳನ್ನು ನೀಡುತ್ತಿಲ್ಲ. ಕಳೆದ ಬಾರಿ ನಡೆದಿದ್ದ ವಾರ್ಷಿಕ ಸಾಮಾನ್ಯ ಸಭೆಗೆ ಸಂಬoಧಿಸಿದoತೆ ಸರಿಯಾದ ಉತ್ತರಗಳನ್ನು ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ನುಕ್ಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎನ್.ಎನ್.ಶ್ರೀರಾಮ್ ಮಾತನಾಡಿ, ಕೋಚಿಮುಲ್ ನೌಕರರು-ಸಿಬ್ಬಂದಿ ಸಾಮಾನ್ಯ ಕಲ್ಯಾಣ ಟ್ರಸ್ಟ್ ಗೆ ಸಂಗ್ರಹವಾಗಿರುವ ಹಣ ಎಷ್ಟು, ನೌಕರರು, ಸಿಬ್ಬಂದಿಗೆ ಖರ್ಚು ಮಾಡುವ ಬದಲು ಅನ್ಯ ಕಾರ್ಯಗಳಿಗೆ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಜತೆಗೆ ಕ್ಷೇತ್ರ ಮರುವಿಂಗಡಣೆಯಲ್ಲಿ ಕೋಲಾರ ತಾಲೂಕಿನ ಒಂದು ಸ್ಥಾನ ಹೆಚ್ಚುವರಿಯಾಗಿದ್ದು, ಆ ಸ್ಥಾನವನ್ನು ಮೀಸಲು ಕ್ಷೇತ್ರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಕಲ್ಯಾಣ ಟ್ರಸ್ಟ್ ಗೆ ಸಂಗ್ರಹವಾಗಿರುವ ಹಣದ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾ ಡೇರಿಯಾದಂತೆ ಕೋಲಾರದಲ್ಲಿ ಎಂವಿಕೆ ಗೋಲ್ಡನ್ ಡೇರಿ ಆರಂಭವಾಗಬೇಕಿದ್ದು, ಕುರಿತು ಟೆಂಡರ್ ಹಂತದಲ್ಲಿದೆ ಎಂದರು. ಈಗಾಗಲೇ ಈಗಾಗಲೇ ಪ್ರತಿ ತಿಂಗಳು ಕೋಚಿಮುಲ್ ಒಕ್ಕೂಟವು ೨ ಕೋಟಿರೂ ವಿದ್ಯುತ್ ಬಿಲ್ ಪಾವತಿಸುತ್ತಿದ್ದು, ಕೋಲಾರ ತಾಲೂಕಿನ ಹೊಳಲಿ ಬಳಿ ಸೋಲಾರ್ ಘಟಕ ಸ್ಥಾಪಿಸಲಾಗುವುದು.

೨ ಕೋಟಿರೂ ವಿದ್ಯುತ್ ಬಿಲ್ ಅನ್ನು ಶೂನ್ಯ ಮಾಡಿಕೊಳ್ಳಬಹುದು. ಚಿಂತಾಮಣಿಯಲ್ಲಿ ಐಸ್‌ಕ್ರೀಂ ಘಟಕ ೪೫ ಕೋಟಿರೂನಲ್ಲಿ ಮಾಡಲಾಗುವುದು. ಎರಡೂ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಸಾಮಾನ್ಯ ಸಭೆಯಲ್ಲಿಯೂ ಒಪ್ಪಿಗೆ ಸೂಚಿಸಿದ್ದಾರೆ. ಹಾಲಿ ಧರವನ್ನು ೨ ತಿಂಗಳಲ್ಲಿ ಏರಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ಒಕ್ಕೂಟ ವಿಭಜನೆಗೆ ಯಾರೂ ಅಡ್ಡಿಯಿಲ್ಲ. ಕ್ಷೇತ್ರ ವಿಂಗಡಣೆ ಈ ಹಿಂದೆಯೇ ಮಾಡಬೇಕಿದ್ದು, ತಡವಾಗಿದೆ ಕೂಡಲೇ ಮಾಡಲಾಗುವುದು. ಸಾಮಾನ್ಯ ಸಭೆ ಎಂದರೆ ಚರ್ಚೆ ನಡೆಯುವುದು ಸಾಮಾನ್ಯ. ಗಲಾಟೆ-ಗದ್ದಲ ಆಗಿಲ್ಲ. ಆರೋಗ್ಯಕರ ಚರ್ಚೆಯಷ್ಟೇ ಎಂದರು.

ಸಭೆಯಲ್ಲಿ ಕೋಚಿಮುಲ್ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಕೆ.ಎನ್.ನಾಗರಾಜ, ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜು, ವೈ.ಬಿ.ಅಶ್ವತ್ಥನಾರಾಯಣಬಾಬು, ಡಿ.ವಿ.ಹರೀಶ್, ಎನ್.ಹನುಮೇಶ್, ಎನ್.ಸಿ.ವೆಂಕಟೇಶ್, ಆರ್.ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆಯ ಉಪ ಡಾ.ಜಿ.ಟಿ.ರಾಮಯ್ಯ ಮತ್ತಿತರರಿದ್ದರು

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!