PLACE YOUR AD HERE AT LOWEST PRICE
KOLARA, ಕೋಲಾರ ಬ್ರೇಕಿಂಗ್; ಇಂದಿನಿಂದ ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರ ಸಭೆಗಳನ್ನ ಮಾಡಿ 25 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನ ಗೆದ್ದು ಮೋದಿ ಅವರಿಗೆ ಉಡುಗೋರೆ ನೀಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೋಲಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆ ಅವರ ಅರೋಗ್ಯ ಉತ್ತಮವಾಗಿರಲು ಮತ್ತು ಮತ್ತೊಮ್ಮೆ ಪ್ರಧಾನಯಾಗಲಿ ಎಂದು ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಇಂದು ಪ್ರಾರ್ಥನೆ ಮಾಡಲಿದ್ದೇವೆ ಎಂದರು.
ಈ ಸರ್ಕಾರ ಕುಂಭಕರ್ಣ ನಿದ್ರೆ ಯಲ್ಲಿದೆ ಹಾಗಾಗಿ ಎಚ್ಚರಿಸುವ ಕೆಲಸ ಮಾಡಲಿದ್ದೇವೆ. ಈಗಾಗಲೆ ಸರ್ಕಾರ ಇದ್ದೂ ಸತ್ತಂತ್ತಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ.
ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿಗಳನ್ನ ಕೊಟ್ಟು ಬೇರೆಲ್ಲಾ ಯೋಜನೆಗಳಿಗೆ ಮಾನ್ಯತೆ ಕೊಟ್ಟಿಲ್ಲ. ಗ್ಯಾರಂಟಿಗಳ ಕುರಿತು ನಾನು ತಲೆ ಕೆಡಿಸಿಕೊಂಡಿಲ್ಲ, ಗ್ಯಾರಂಟಿಗಳು ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ನೀರಾವರಿ, ಅಭಿವೃದ್ಧಿ ಯೋಜನೆಗಳೂ ಸಂಪೂರ್ಣ ಸ್ಥಗಿತವಾಗಿದೆ. ಒಂದು ಕೀ ಮೀ ರಸ್ತೆ ಮಾಡಲು ಇವರಿಂದ ಆಗಿಲ್ಲ. ರಾಜ್ಯ ಸರ್ಕಾರ ಕದ್ದುಮುಚ್ಚಿ ಕಾವೇರಿ ನೀರು ಬಿಡುತ್ತಿದೆ. ಮಂಡ್ಯ ಮೈಸೂರು ಭಾಗದಲ್ಲಿ ಈಗಾಗಲೆ ರೈತರ ಹೋರಾಟ ಆರಂಭವಾಗಿದೆ.
ಇಂದಿನಿಂದ ನಾವು ಕಾವೇರಿ, ಬರ ಸಮಸ್ಯೆ ವಿರುದ್ದ ಹೋರಾಟ ಮಾಡಲಿದ್ದೇವೆ. ಜೆಡಿಎಸ್ ಜೊತೆ ಮೈತ್ರಿ ಇನ್ನೂ ಮಾತುಕತೆ ನಡೆಯುತ್ತಿದೆ ಹಾಗಾಗಿ ಅದರ ಬಗ್ಗೆ ಈಗಲೆ ಮಾತನಾಡುವುದು ಬೇಡ ಎಂದರು.