• Sat. Apr 27th, 2024

PLACE YOUR AD HERE AT LOWEST PRICE

ದೊಡ್ಡಬಳ್ಳಾಪುರ:ಆಂದ್ರದಿಂದ ಬೆಂಗಳೂರಿಗೆ ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಇಂದು ಮುಂಜಾನೆ ಪ್ರವಾಸಿ ಮಂದಿರದ ಬಳಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀರಾಮಸೇನೆಯ ಮುಂಖಡ ಸುಂದರೇಶ್ ನರಗಲ್ ಮಾತನಾಡಿ  ಹಿಂದೂಪುರದಿಂದ ಕರ್ನಾಟಕದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗಕ್ಕೆ 5 ವಾಹನಗಳಲ್ಲಿ ಗೋಮಾಂಸ ರಪ್ತು ಮಾಡಲಾಗುತ್ತಿದೆ.

ನಗರದ ಹೊರವಲಯದ ಟೋಲ್ ಬಳಿ ಇದನ್ನು ಪ್ರಶ್ನೆ ಮಾಡಿದ ನಮ್ಮ ಕಾರ್ಯಕರ್ತನ ಮೇಲೆ ಗೂಂಡಾಗಳು ಹಲ್ಲೆಗೆ ಯತ್ನಿಸಿದ್ದಾರೆ. ನಂತರ ನಾವೆಲ್ಲಾ ಸೇರಿ ದೊಡ್ಡಬಳ್ಳಾಪುರದ ಐಬಿ ಸರ್ಕಲ್ ನಲ್ಲಿ ಗೋಮಾಂಸ ತುಂಬಿರುವ 5 ವಾಹನಗಳನ್ನು ತಡೆದಿದ್ದೇವೆ.

ಈ ಅಕ್ರಮ ಗೋಮಾಂಸ ಸಾಗಾಟವನ್ನು ಯಾರು ಮಾಡುತ್ತಿದ್ದಾರೆ. ಎಲ್ಲಿಂದ ಮಾಡುತ್ತಿದ್ದಾರೆ. ಯಾರೆಲ್ಲಾ ಇದರಲ್ಲಿ ಶಾಮೀಲಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲವೆ. ಟೋಲ್ ಗಳ ಬಳಿ ಇರುವ ಪೋಲಿಸ್  ಅಧಿಕಾರಿಗಳು ಏನಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರು.

ಈ ಅಕ್ರಮದ ಬಗ್ಗೆ ಇಲ್ಲಿರು ಶಾಸಕರಿಗೆ, ಸಂಸದರಿಗೆ ಮತ್ತು ಅಧಿಕಾರಿಗಳಿಗೆ ಗೊತ್ತಲ್ಲವೆ. ಸಮಾಜದಲ್ಲಿ ಯಾವ ಕಾನೂನಿನಲ್ಲಿ ಗೋಮಾಂಸ ರಪ್ತಿಗೆ ಅವಕಾಶವಿದೆ ಎಂದು ಪ್ರಶ್ನಿಸಿದ ಅವರು ಈ ಅಕ್ರಮವನ್ನು ತಡೆಯಲು ಬಂದಿರುವ ನಮ್ಮನ್ನು ಬಂಧಿಸಲು ಪೋಲಿಸರು ಮುಂದೆ ಬಂದಿದ್ದಾರೆಂದು ಆರೋಪಿಸಿದರು.

ಈ ಅಕ್ರಮದ ಬಗ್ಗೆ ಸರ್ಕಾರದ ಯಾವ ಆದೇಶವಿದೆ ಎಂಬುದನ್ನು ಈ ಕೂಡಲೆ ನಮಗೆ ತೋರಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವ ತನಕ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು.

ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ;

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಭಾನುವಾರ ಬೆಳಗ್ಗೆ 5-30ರ ಸಮಯದಲ್ಲಿ ಹಿಂದೂಪುರದಿಂದ ಬೆಂಗಳೂರಿಗೆ 5 ಬೊಲೆರೋ ವಾಹನಗಳಲ್ಲಿ ಗೋಮಾಂಸ ಸಾಗಿಸುತ್ತಿರುವುದನ್ನು ಶ್ರೀರಾಮಸೇನೆ ಕಾರ್ಯಕರ್ತರು  ತಡೆದಿದ್ದಾರೆ.

ಸ್ಥಳಕ್ಕೆ ತೆರಳಿದ್ದ ಪೋಲಿಸರು ಗೋಮಾಂಸ  ಸಾಗಿಸುತ್ತಿದ್ದ ವಾಹನಗಳನ್ನು ಮತ್ತು 7 ಮಂದಿಯನ್ನು ಬಂಧಿಸಲಾಗಿದೆ. ಹಾಗೂ ವಾಹನ ತಡೆದ 12 ಮಂದಿ ಶ್ರೀರಾಮಸೇನೆ ಕಾರ್ಯಕರ್ತರನ್ನು ಸಹ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಕಾರಿಗೆ ಬೆಂಕಿ.

ಗೋಮಾಂಸ ವಾಹನಗಳನ್ನು ತಡೆಯುವ ವೇಳೆ ಕಾರ್ಯಕರ್ತರ ಮೇಲೆ ನುಗ್ಗಿಸಲು ಯತ್ನಿಸಿದರು ಎಂಬ ಕಾರಣಕ್ಕೆ ಕಾರಿಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ. ಇದೇ ವೇಳೆ ಗೋಮಾಂಸ ಸಾಗಿಸುತ್ತದ್ದವರ ತಲೆ ಮೇಲೆ ಗೋವಿನ ತಲೆ ಇರಿಸಿ ಜೈ ಶ್ರೀರಾಮ್ ಘೋಷಣೆ ಕೂಗಿಸಲಾಗಿದೆ ಎನ್ನಲಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!