• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ: ಅಂತರ್ಜಾತಿಯ ವಿವಾಹಗಳು ಕೇವಲ ಪ್ರೀತಿಯ ವಿವಾಹಗಳಿಗೆ ಸೀಮಿತವಾಗದೆ, ಅರೇಂಜ್ ಮದುವೆಗಳಾಗುವಂತಾದರೆ ಜಾತಿ ಅಸಮಾನತೆಯ ವ್ಯವಸ್ಥೆಯನ್ನು ನಿವಾರಿಸಲು ಸಾಧ್ಯವಾಗುತ್ತದೆಯೆಂದು ಚಿತ್ರನಟ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಹೇಳಿದರು.

ನಗರದ ಅಂತರಗಂಗೆ ಬುದ್ದಿಮಾಂದ್ಯರ ಆಶ್ರಮದಲ್ಲಿ ವಕೀಲ ಜೋಡಿಗಳಾದ ಆರ್.ಎನ್.ಗಾಯಿತ್ರಿ ಹಾಗೂ ಎಸ್.ಎನ್.ಬೀರಾಜ್‌ರ ಮಂತ್ರ ಮಾಂಗಲ್ಯ ಮದುವೆಗೆ ಸಾಕ್ಷಿಯಾಗಿ ಅವರು ಮಾತನಾಡುತ್ತಿದ್ದರು.

ಅಂತರ್ಜಾತಿ ವಿವಾಹಗಳಿಂದ ಜಾತಿ ವ್ಯವಸ್ಥೆಯನ್ನು ನಿವಾರಿಸಬಹುದೆಂದು ಅಂಬೇಡ್ಕರ್ ನಂಬಿದ್ದರು. ಆದರೆ, ಪ್ರಗತಿಪರವಾಗಿ ಆಲೋಚಿಸುತ್ತಿರುವ ಯುವಕ ಯುವತಿಯರ ಪ್ರೇಮ ವಿವಾಹಗಳಲಿ ಮಾತ್ರವೇ ಅಂತರ್ಜಾತಿ ವಿವಾಹಗಳನ್ನು ಕಾಣಬಹುದಾಗಿದೆ, ಆದರೆ, ಅರೇಂಜ್ ಮದುವೆಗಳು ಅಂತರ್ಜಾತಿ ವಿವಾಹಗಳಾದರೆ ಸಮ ಸಮಾಜದ ಕನಸು ನನಸಾಗಲಿದೆ, ಸಾಮಾಜಿಕ ನ್ಯಾಯ ವೈಜ್ಞಾನಿಕ ಪರಿವರ್ತನೆಯ ಆಶಯ ಈಡೇರಲಿದೆ ಎಂದರು.

ವಿವಾಹವಾದ ಜೋಡಿಗಳಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯವನ್ನು ಬೋದಿಸಿದ ಸಿಪಿಐಎಂ ಕಾರ್ಯದರ್ಶಿ ಗಾಂನಗರ ನಾರಾಯಣಸ್ವಾಮಿ ಮಾತನಾಡಿ, ಅಂತರ್ಜಾತಿ ವಿವಾಹವಾದರ ವೈವಾಹಿಕ ಜೀವನ ಇತತರಿಗೆ ಅದರ್ಶವಾಗುವಂತೆ ಬದುಕಬೇಕೆಂದು ನವಜೋಡಿಗಳನ್ನು ಆರೈಸಿದರು.

ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಮಾತನಾಡಿ, ಪ್ರಜಾಪ್ರಭುತ್ವದಲಿ ಪ್ರತಿಕ್ರಿಯೆ ರೋಗ, ಪ್ರಕ್ರಿಯೆ ಔಷಧ ಎನ್ನುತ್ತಾರೆ, ಸಮ ಸಮಾಜ ಕುರಿತು ಕೇವಲ ಭಾಷಣ ಮಾಡದೆ ಅವುಗಳನ್ನು ಈ ರೀತಿಯ ಕಾರ್ಯಕ್ರಮಗಳ ಮೂಲಕ ಕಾರ್ಯರೂಪಕ್ಕೆ ತರಬೇಕಿದೆ ಎಂದರು.

ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ವಿ.ಗೀತಾ ಮಾತನಾಡಿ, ಪೋಷಕರನ್ನು ಒಪ್ಪಿಸಿ ಇತ್ತೀಚಿಗೆ ಹೆಚ್ಚಿನ ಯುವ ಜೋಡಿಗಳು ಅಂತರ್ಜಾತಿ ವಿವಾಹವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಅಂತರಗಂಗೆ ಬುದ್ದಿ ಮಾಂದ್ಯರ ಶಾಲೆಯ ಮುಖ್ಯಸ್ಥ ಶಂಕರ್ ಮಾತನಾಡಿ, ಯಾವುದೇ ಬೇಥ ಅರಿಯದ ಬುದ್ದಿಮಾಂದ್ಯರು ದೇವರುಗಳಿದ್ದಂತೆ, ಇಂತ ದೇವಾಲಯದಂತ ಆಶ್ರಮದಲ್ಲಿ ಮೊದಲ ವಿವಾಹ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ವೇದಿಕೆಯಲ್ಲಿ ಪುಣ್ಯಹಳ್ಳಿ ಶಂಕರ್ ಇತರರಿದ್ದರು.

ನವ ಜೋಡಿಯ ಬಂಧು ಬಳಗದವರು, ಹೋರಾಟದ ಸಂಗಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಮಂತ್ರಮಾಂಗಲ್ಯ  ಒಪ್ಪಂದ ಓದಿ ನವ ಜೋಡಿಗಳಾದ ಗಾಯಿತ್ರಿ, ಭೀರಾಜ್‌ರನ್ನು ಅಭಿನಂದಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!