• Mon. Apr 29th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಕೋಲಾರದ ರಂಗಮಂದಿರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ ಉಸ್ತುವಾರಿ ಸಚಿವರ ಪಕ್ಕದಲ್ಲಿರುವ ಎಲ್ಲರೂ ಭೂಗಳ್ಳರೆಂದು ಶಾಸಕರಿಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆರೋಪ ಮಾಡಿರುವುದು ಶೋಭೆ ತರುವಂತದ್ದಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡುತ್ತಾ, ಸಂಸದರು ಶ್ರೀನಿವಾಸಪುರ ಸಂಬಂಧಪಟ್ಟಹಾಗೆ ಅರಣ್ಯ ಒತ್ತುವರಿ ಬಗ್ಗೆ ಮಾತನಾಡುತ್ತಿರುವ ವೇಳೆಯಲ್ಲಿ ಉಸ್ತುವರಿ ಸಚಿವರ ಅಕ್ಕಪಕ್ಕ ಇರುವವರು ಭೂಗಳ್ಳರನ್ನು ಕೂರಿಸಿಕೊಂಡಿದ್ದಾರೆ. ಎಂದು ಹೇಳುವ ವೇಳೆ ಮಾತನ್ನು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಸಂಸದ ಮುನಿಸ್ವಾಮಿ ರವರಿಗೆ ಇದು ಶೋಭೆ ತರುವಂತಹದಲ್ಲ ಎಂದರು.

ಸಂಸದರ ಸ್ಥಾನ ಹಾಗೂ ಗೌರವನ್ನು ಕಾಪಾಡಿಕೊಳ್ಳಬೇಕು. ಸಂಸದರು ಎಂದರೆ ಕೆಎಚ್ ಮುನಿಯಪ್ಪ ರವರನ್ನು ನೋಡಿ ಕಲಿಯಬೇಕು, ಸಂಸದ ಎಸ್.ಮುನಿಸ್ವಾಮಿ ಶಾಸಕ ಎಸ್ ಎನ್ ನಾರಾಯಣಸ್ವಾಮಿಯವರ ಮೇಲೆ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಇಡೀ ಜಿಲ್ಲೆಯಲ್ಲಿ ಕಲುಷಿತ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿದ್ದೀರಲ್ಲ, ನಿಮ್ಮದೇ ಸರ್ಕಾರ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿತ್ತು ಯಾಕೆ ಅದನ್ನು ರುಜು ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ಶಾಸಕರನ್ನು ಭೂಗಳ್ಳಲೆಂದು ಮೊದಲು ರುಜುವಾತು ಮಾಡಿ ನಂತರ ಅವರನ್ನು ಭೂಗಳ್ಳರೆಂದು ಹೇಳಿ. ಪದೇ ಪದೇ ಶಾಸಕ ಎಸ್ ಎನ್ ನಾರಾಯಣಸ್ವಾಮಿಯವರ ತಾಯಿ ಹೆಸರನ್ನು ತರುತ್ತೀರಿ ಅವರಿಗೆ ಈಗಾಗಲೇ 97 ವರ್ಷ ಕಳೆದಿದೆ ಇಂತಹ ಸಮಯದಲ್ಲೂ ಸಹ ಅವರ ಹೆಸರನ್ನು ತಂದು ಅಪಪ್ರಚಾರ ಮಾಡುವುದು ಸರಿಯಲ್ಲ, ಅವರು 30 ವರ್ಷಗಳ ಕಾಲ ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ತದನಂತರ ಕಾನೂನು ಬದ್ಧವಾಗಿ ಸರ್ಕಾರದಿಂದ ಆ ಭೂಮಿಯನ್ನು ಪಡೆದುಕೊಂಡಿದ್ದಾರೆ.

ಆದರೆ ಪದೇ ಪದೇ ಸರ್ಕಾರಿ ಜಮೀನನ್ನು ಶಾಸಕರು ಅವರ ತಾಯಿ ಹೆಸರಿಗೆ ಮಾಡಿಕೊಂಡು ಸೈಟ್ಗಳನ್ನು ಮಾಡಿಕೊಂಡಿದ್ದೀರಿ ಎಂದು ಆರೋಪ ಮಾಡುತ್ತಿರಲ್ಲ ಇದು ಸರಿನಾ, ನಿಮ್ಮ ಹೆಂಡತಿ ಹೆಸರಿನಲ್ಲಿಯೇ ಕ್ರಷರ್ ಮಾಡಿಕೊಂಡಿದ್ದೀರಿ ಅಲ್ಲವೇ ಅದು ಯಾವುದು ಸ್ವಾಮಿ ಎಂದು ಪ್ರಶ್ನೆ ಮಾಡಿದರು.

ನಿಮ್ಮ ಸರ್ಕಾರವಿದ್ದಾಗ ನಿಮ್ಮ ಬಂಟ ದಯಾನಂದವರನ್ನು ತಹಶೀಲ್ದರಾಗಿ ಆಯ್ಕೆ ಮಾಡಿ ಬಹಳಷ್ಟು ತನಿಖೆಗಳನ್ನು ಮಾಡಿದೆ. ಆದರೆ ಶಾಸಕರು ತಾಲೂಕಿನಲ್ಲಿ ಎಲ್ಲಿಯೂ ಸಹ ಒಂದಿಂಚು ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದರು.

ಮೊನ್ನೆಯೂ ಸಹ ಮಾಲೂರಿನಲ್ಲಿ ನಂಜೇಗೌಡರು ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತೀರಿ ಹಾಗೂ ಡಿಕೆ ರವಿ ಸಾವಿಗೆ ಕಾರಣ ಏನೆಂದು ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ ಆದರೂ ಸಹ ಶಾಸಕರ ಮೇಲೆ ಆರೋಪ ಮಾಡುತ್ತಿರಿ ಅಲ್ಲವೇ ಯಾಕೆ ನಿಮಗೆ ಅವರನ್ನು ಕಂಡರೆ ಅಷ್ಟೊಂದು ದ್ವೇಷ ಎಂದು ಪ್ರಶ್ನೆ ಮಾಡಿದರು .

ಶಾಸಕರ ನಿಮಗೆ ನೂರಕ್ಕೆ ನೂರು ಅಳತೆಯ ಸೈಟ್ ಕೊಡಲಿಲ್ಲ ಎಂದು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರನ್ನು ತೇಜೋವದೆ ಮಾಡುತ್ತಿದ್ದೀರಾ,ನಿಮಗೆ ಎಸ್ಎನ್ ಸಿಟಿ ನಲ್ಲಿ ಸೈಟ್ ಕೊಟ್ಟಿದ್ದಾರೆ ಅವರು ಒಳ್ಳೆಯವರಾಗುತ್ತಿದ್ದರು ಅಲ್ಲವೆ ಎಂದರು.

ಶಾಸಕ ಎಸ್ಎನ್ ನಾರಾಯಣಸ್ವಾಮಿಯವರ ಮೇಲೆ ಇದೇ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ನೀವು ಬಂಗಾರಪೇಟೆಗೆ ಬಂದಾಗ ಶಾಸಕರ ಅಭಿಮಾನಿಗಳಿಂದ ಬಾಯ್ ಕಟ್ ಮಾಡಲಾಗುವುದೆಂದು ಸಂಸದರಿಗೆ ಎಚ್ಚರಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!