• Fri. Mar 1st, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಹುದುಕುಳ ವ್ಯವಸಾಯ ಸೇವಾ ಸಹಕಾರ ಸಂಘದ ಅದ್ಯಕ್ಷರಾಗಿ ಅ.ನಾ ಹರೀಶ್ ಉಪಾಧ್ಯಕ್ಷರಾಗಿ ನಟರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಂಘದ ಕಛೇರಿಯು ಹಳೇಯದಾಗಿದ್ದು, ನೂತನ ಕಟ್ಟಡದ ಅವಶ್ಯಕತೆಯಿದೆ.

ಶಾಸಕರ ನಿಧಿಯಿಂದ ೫ಲಕ್ಷ ರೂಗಳನ್ನು ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು. ಇದರೊಟ್ಟಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ನಿರ್ದೇಶಕ ಗೋವಿಂದರಾಜು ಅವರ ಸಹಕಾರದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು.

ಸದಾಕಾಲ ನಾನು ಅಭಿವೃದ್ಧಿಪರವಾಗಿದ್ದು, ಜನರೊಂದಿಗೆ ಇರುತ್ತೇನೆ. ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಮದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಎಚ್.ಎಂ.ರವಿ, ಉಪಾಧ್ಯಕ್ಷ ಶ್ರೀರಾಮ್, ಮುಖಂಡ ಹರೀಶ್, ಮುನಿರಾಜ್, ಯಾಸಿನ್, ಚಂದ್ರಣ್ಣ, ಪಿಳ್ಳಪ್ಪ, ಮೂರ್ತಿ, ಮಂಜುನಾಥ್, ಸೀನಣ್ಣ, ನಾಗರಾಜ್, ಚಲಪತಿ, ಸೀನಪ್ಪ, ಬುಲೆಟ್ ನಾಗರಾಜ್, ವೆಂಕಟೇಶ್, ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!