• Fri. Mar 1st, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಮೊದಲ ಸ್ಥಳೀಯ ದಿನ ಪತ್ರಿಕೆಯಾಗಿ ಮನೆ ಮಾತಾಗಿದ್ದ ಕೋಲಾರ ಪತ್ರಿಕೆಯ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು ಆದ ಕೆ.ಪ್ರಹ್ಲಾದರಾಯರು, ಅಕ್ಟೋಬರ್ ೯ ಸೋಮವಾರ ತಡರಾತ್ರಿ ತಮ್ಮ ಕೊನೆಯ ಉಸಿರೆಳೆದಿದ್ದು, ಪತ್ರಕರ್ತರಿಗೆ ಅತೀವ ದುಖಃ ತಂದಿದೆ.

ಕಳೆದ ನಲವತ್ತು ವರ್ಷಗಳಿಂದ ಕೋಲಾರ ಪತ್ರಿಕೆ ಜಿಲ್ಲೆಯ ಮನೆ ಮಾತಾಗಿ, ಸ್ಥಳೀಯ ಪತ್ರಿಕೋದ್ಯಮ ಬೆಳವಣಿಗೆಗೆ ಸ್ಪೂರ್ತಿಯಾಗುವಲ್ಲಿ ಪ್ರಹ್ಲಾದರಾಯರು ಸ್ಪೂರ್ತಿಯಾಗಿದ್ದರು. ಇವರು ಪತ್ರಿಕೋದ್ಯಮದ ಜೊತೆ ಜೊತೆಗೇ ಕೋಲಾರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಕೊಡುಗೆ ನೀಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಅದ ಕೊಡುಗೆ ನೀಡಿದ್ದಾರೆ.

೨೯ನೇ ಜನವರಿ ೧೯೪೩ರಲ್ಲಿ ಮುಳಬಾಗಿಲಿನ ಸಂಗಸ0ದ್ರ ಗ್ರಾಮದಲ್ಲಿ ಜನಿಸಿದ ರಾಯರು ೧೯೬೩ ರಿಂದ ೧೯೭೧ ರವರೆಗೆ ಹಾಸನದ ಜನಮಿತ್ರ ಪತ್ರಿಕೆಯ ಉಪ ಸಂಪಾಕರಾಗಿ, ೧೯೭೫ ರಿಂದ ೧೯೭೫ ರವರೆಗೆ ಜನಮಿತ್ರ ಪತ್ರಿಕೆಯ ಚಿಕ್ಕಮಗಳೂರು, ದಾವಣಗೆರೆ, ನಗರವಾಣಿ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ತದನಂತರ ತವರೂರಿಗೆ ಆಗಮಿಸಿದ ರಾಯರು ೧೯೭೫ ರ ಏಪ್ರಿಲ್ ೫ ರಿಂದ ಕೋಲಾರ ಜಿಲ್ಲೆಯ ಪ್ರಥಮ ದೈನಿಕವಾದ ಕೋಲಾರ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಪ್ರಕಾಶಕರಾಗಿ ಜಿಲ್ಲೆಯ ಮನೆ ಮನಗೂ ಸ್ಥಳೀಯ ಪತ್ರಿಕೆಯನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಇಷ್ಟೇ ಅಲ್ಲದೆ ಇವರು ವಿವಿಧ ಕ್ಷೇತ್ರಗಳಿಗೆ ತಮ್ಮ ಸೇವೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದಾಗ ಯಶಸ್ವೀಯಾಗಿ ನಿಭಾಯಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ, ಭಾರತೀಯ ವಿದ್ಯಾಭವನ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ, ನೆರೆಯ ಆಂದ್ರ ಪ್ರದೇಶದಲ್ಲಿರುವ ಕುಪ್ಪಂ ದ್ರಾವಿಡ ವಿಶ್ವವಿದ್ಯಾನಿಲಯದ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ-ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ಪ್ರಬಂಧ ಸಂಶೋಧನೆಗಳಿಗೆ ಪ್ರೇರಣೆ, ಸಹಾಯ, ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಇದರೊಟ್ಟಿಗೆ ಕೋಲಾರ ಪ್ರತ್ರಿಕೆ ಕಾರ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ, ಮಾಹಿತಿ,ಚಿತ್ರ,ದಾಖಲೆಗಳ ಪೂರೈಕೆಮಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ.

ಇನ್ನೂ ಒಬ್ಬ ನುಡಿಕಾರರಾಗಿ ಇವರು ಜಿಲ್ಲಾ ಕನ್ನಡ ಸಾಹಿತ್ಯಪರಷಿತ್ತನ ಅಧ್ಯಕ್ಷ, ಕರ್ನಾಟಕ ಗೆಜಟಿಯರ್ ವಿಶೇಷ ಸದಸ್ಯ,ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ,ಸರ್ಕಾರದ ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಜಿಲ್ಲಾ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ, ಡಿವಿಜಿ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಕಮಲಾ ನೆಹರೂ ಸ್ಯಾನಿಟೋರಿಯಂ ಸಂದರ್ಶಕ ಸಮಿತಿ ಸದಸ್ಯ, ಶ್ರೀ ಟಿ.ಚೆನ್ನಯ್ಯ ರಂಗಮoದಿರದ ನಿರ್ಮಾಣ ಸಮಿತಿಯಲ್ಲಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಸದಸ್ಯ, ಜಿಲ್ಲೆ ರೆಡ್ ಕ್ರಾಸ್ ಸಂಸ್ಥೆ ಸದಸ್ಯ, ದ್ರಾವಿಡ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಲಹಾ ಸಮಿತಿ ಸದಸ್ಯ, ಹೀಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

ಇವರ ಸೇವೆಯನ್ನು ಗುರುತಿಸಿ ೧೯೯೭ರಲ್ಲಿ ಕರ್ನಾಟಕ ಮಾಧ್ಯಮ ಅಕ್ಯಾಡೆಮಿಯ ಅಂದೊಳನ ಪ್ರಶಸ್ತಿ ೨೦೦೨ರಲ್ಲಿ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದ ಧ್ರುವ ಪ್ರಶಸ್ತಿ.೨೦೦೪ರಲ್ಲಿ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಪ್ರಶಸ್ತಿ, ೨೦೦೬ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ್ ನಲ್ಲಿ ಪ್ರಶಸ್ತಿ, ೨೦೦೦ದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪುರಸ್ಕಾರ-೨೫ ವರ್ಷಗಳ ಸೇವೆಗಾಗಿ, ೨೦೦೩ರಲ್ಲಿ ಕೋಲಾರ ರತ್ನ ಪ್ರಶಸ್ತಿ.ಕೋಲಾರ ಸಾಂಸ್ಕೃತಿಕ ಸಂಘದಿ0ದ ೧೯೯೩ರಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು, ೧೯೯೬ರಲ್ಲಿ ಭಾರತ ಸೇವಾದಳದ ಪುರಸ್ಕಾರ
೨೦೧೫-೧೬ ರಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ, ೨೦೧೦ರ ಸುರ್ವೆ ಪ್ರತಿಷ್ಹಾನದ ವಿಶ್ವೇಶ್ವರಯ್ಯ ಪ್ರಶಸ್ತಿ ೨೦೧೫ರಲ್ಲಿ ಜಿ.ನಾರಾಯಣ ಸ್ವಾಮಿ ಪ್ರಶಸ್ತಿ, ೨೦೧೫ರಲ್ಲಿ ಮಾಧ್ಯಮ ಆಕ್ಯಾಡೆಮಿ ಪ್ರಶಸ್ತಿ ೨೦೧೫ ಗೂಳೂರಿನ ಡಾ. ಜಚನಿ ಮಾನವ ಧರ್ಮ ಪೀಠ ದಿಂದ ಪ್ರಶಸ್ತಿ ಅಷ್ಟೇ ಅಲ್ಲದೇ ಹಲವು ಓದುಗರ ವೇದಿಕೆಗಳಿಂದ ಸಾರ್ಥಕ ಸೇವೆಗಳಿಗಾಗಿ ಮೆಚ್ಚುಗೆಯ ಪ್ರಶಸ್ತಿಗಳಿಗೆ ಪ್ರಹ್ಲಾದರಾಯರು ಭಾಜನರಾಗಿದ್ದಾರೆ.

ಹೀಗೆ ತಮ್ಮ ಜೀವನವಿಡೀ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕೆ.ಪ್ರಹ್ಲಾದರಾವ್ ನಿಧನ ವಾರ್ತೆ ಕೇಳಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಅವರ ಆಪ್ತ ಬಳಗದವರು ಹಾಗೂ ಅವರೊಂದಿಗೆ ಕೆಲಸ ಮಾಡಿದ ಎಲ್ಲಾ ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ತಮ್ಮ ಜೀವನ ಸಂಗಾತಿ ವಾಣಿ, ಮಕ್ಕಳಾದ ಸುಹಾಸ್, ಡಾ. ನರೇನ್, ಸುಮಾ, ಸುಚೇತಾ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!