• Sat. Mar 2nd, 2024

PLACE YOUR AD HERE AT LOWEST PRICE

ಕೆಜಿಎಫ್:ಶಾಸಕಿ ಡಾ. ರೂಪಕಲಾ ಎಂ ಶಶಿಧರ್ ಕೆ.ಜಿ.ಎಫ್. ಬಿ.ಇ.ಎಂ.ಎಲ್. ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ಕಛೇರಿ ಕಟ್ಟಡ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಅವರು ಮಾತನಾಡಿ‌ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಆರ್.ಟಿ.ಒ. ಕಛೇರಿ ಬಾಡಿಗೆ ಕಟ್ಟಡವಾಗಿದ್ದು ಶೀಥಿಲಾವಸ್ಥೆಯಲ್ಲಿದ್ದು ಕಟ್ಟಡ ಸ್ಥಳಾಂತರಕ್ಕೆ ಸೂಕ್ತ ಸ್ಥಳ ಸಿಗದೆ ಕಛೇರಿಯು ಬೇರೆ ತಾಲ್ಲೂಕಿಗೆ ವರ್ಗಾವಣೆಯಾಗುವ ಆತಂಕ‌ ಸಾರ್ವಜನಿಕರಲ್ಲಿತ್ತು.

ಆದರೆ ಅದಕ್ಕೆ ಅವಕಾಶ ಕೊಡದೆ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಿ.ಇ.ಎಂ.ಎಲ್. ಕಾರ್ಖಾನೆಯ ಬಳಿ ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ 5.00 ಎಕರೆ ಜಮೀನು ಮಂಜೂರು ಮಾಡಿಸಲಾಯಿತು ಎಂದು ತಿಳಿಸಿದರು.

ಈ ಕಟ್ಟಡವು ರೂ.5.00 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಛೇರಿ ಆವರಣದಲ್ಲಿ ಡ್ರೈವಿಂಗ್ ಟ್ರ್ಯಾಕ್  ಸಹಾ ನಿರ್ಮಾಣವಾಗಲಿದ್ದು ಅತ್ಯಂತ ಮಾದರಿ ಕಛೇರಿಯಾಗಿ ನಿರ್ಮಾಣವಾಗಲಿದೆ‌ ಎಂದು ತಿಳಿಸಿದರು.

ಸುಸಜ್ಜಿತವಾದ ಆರ್.ಟಿ.ಒ. ಕಛೇರಿ ನಿರ್ಮಾಣವಾಗುತ್ತಿರುವುದರಿಂದ‌ ಮುಂದಿನ‌ ದಿನಗಳಲ್ಲಿ ಕೈಗಾರಿಕೆಗಳು ಪ್ರಾರಂಭಾವಾಗುವುದರಿಂದ ಎಲ್ಲ ರೀತಿಯಲ್ಲೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ಮಾಣ ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ‌ಸೋಮಶೇಖರ್,‌ ಸಹಾಯಕ ಸಾರಿಗೆ ಅಧಿಕಾರಿಯಾದ ನಯಾಝ್ ಪಾಷಾ, ಪೌರಾಯುಕ್ತರಾದ  ಪವನ್ ಕುಮಾರ್, ನಗರ ಸಭೆ ಸದಸ್ಯರಾದ ಮಾಣಿಕ್ಯಂ ಮುಖಂಡರಾ ಆ.ಮು ಲಕ್ಷ್ಮೀನಾರಾಯಣ, ವೆಂಕಟಕೃಷ್ಣಾರೆಡ್ಡಿ ಮೊದಲಾದವರು ಹಾಜರಿದ್ದರು.

Today MLA Dr. Roopakala M Shashidhar visited construction site of new RTO building near BEML and inspected the progress of construction.

Leave a Reply

Your email address will not be published. Required fields are marked *

You missed

error: Content is protected !!