PLACE YOUR AD HERE AT LOWEST PRICE
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಾಂಗ್ರೇಸ್ ಮುಖಂಡ ಎಂ.ಶ್ರೀನಿವಾಸ್ ಆಲಿಯಾಸ್ ಕೌನ್ಸಲರ್ ಶ್ರೀನಿವಾಸ್ ರನ್ನು ಕೊಲೆ ಮಾಡಲಾಗಿದೆ.
ಮೃತ ಶ್ರೀನಿವಾಸ್ ಗೃಹಸಚಿವ ಪರಮೇಶ್ವರ್ ಆಪ್ತ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟನಾಗಿದ್ದ.
ಆರು ಜನ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಕೊಲೆ ನಡೆದಿದೆ. ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈಯಲಾಗಿದೆ.
ಎದೆ, ತಲೆ, ದೇಹದ ಮೈಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಶ್ರೀನಿವಾಸದ್ ಕೋಲಾರದ ಜಾಲಪ್ಪಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕಾಂಗ್ರೇಸ್ ಮುಖಂಡನ ಬರ್ಬರ ಹತ್ಯೆ ಪ್ರಕರಣ. ಪ್ರತ್ಯಕ್ಷ ದರ್ಶಿ ಅಮರ್ ಎನ್ನುವರ ಹೇಳಿಕೆ. ಬಾರ್ ಕಾಮಗಾರಿ ವೀಕ್ಷಣೆ ಮುಗಿಸಿ ವಾಪಸ್ ತೋಟದ ಮನೆಗೆ ಬಂದಿದ್ದೆವು. ಎರಡು ಬೈಕ್ ನಲ್ಲಿ ಆರು ಜನ ತೋಟದ ಮನೆಗೆ ಬಂದಿದ್ದರು. ಬಂದ ತಕ್ಷಣ ಅಂಕಲ್ ಚೆನ್ನಾಗಿದ್ದೀರ ಎಂದು ಮಾತನಾಡಿಸಿದ್ರು. ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಏಕಾಏಕಿ ಲಾಂಗ್ ನಿಂದ ದಾಳಿ. ಭಯಕ್ಕೆ ನಾವು ಓಡಿಹೋದೆವು, ನನ್ನ ಮೇಲೆಯೂ ಅಟ್ಯಾಕ್ ಮಾಡಿದ್ರು. ಹಲವಾರು ಬಾರಿ ಏರಿಯಾದಲ್ಲಿ ಓಡಾಡುತ್ತಿದ್ದದ್ದು ನೋಡಿದ್ದೇನೆ.