• Sat. Apr 27th, 2024

PLACE YOUR AD HERE AT LOWEST PRICE

ಕೆಜಿಎಫ್:ಭಾರತ ದೇಶದ ಸೈನ್ಯದಲ್ಲಿ ೪ ವರ್ಷಗಳ ಕಾಲ ಆಗ್ನಿವೀರರಾಗಿ ಸೇವೆ ಸಲ್ಲಿಸಲು ಕೆಜಿಎಫ್ ತಾಲ್ಲೂಕಿನ ಯುವಕರು ಆಯ್ಕೆಯಾಗಿರುವುದು ಶ್ಲಾಘನೀಯ ಸಂಗತಿ ಎಂದು ರೋಟರಿ ಜೋನಲ್ ಗೌರರ್ನರ್ ಅ.ಮು.ಲಕ್ಷ್ಮೀನಾರಾಯಣ್ ಹೇಳಿದರು.

ಬೇತಮಂಗಲದ ಹಳೆ ಬಡಾವಣೆಯ ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದ ಅವರಣದಲ್ಲಿ ಕೆಜಿಎಫ್ ತಾಲ್ಲೂಕಿನಿಂದ ದೇಶದ ಸೈನ್ಯದಲ್ಲಿ ಆಗ್ನಿವೀರರಾಗಿ ೧೫ ಮಂದಿ ಆಯ್ಕೆಯಾಗಿರುವವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ದೇಶದ ಗಡಿಯನ್ನು ಕಾಯುವಂತಹ ಪವಿತ್ರವಾದ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಗಣನೀಯ ಸಂಗತಿಯಾಗಿದೆ, ದೇಶಕ್ಕಾಗಿ ಶ್ರಮಿಸುವವರನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ, ಮುಂದಿನ ದಿನಗಳಲ್ಲಿಯೂ ಆಗ್ನಿವೀರರಿಗೆ ಉತ್ತಮ ಅವಕಾಶಗಳು ದೊರೆಯಲಿದೆ ಎಂದರು.

ಕೆಜಿಎಫ್ ತಾಲ್ಲೂಕಿನ ಆಗ್ನಿವೀರರಿಗೆ ಯಾವುದೇ ಅವಶ್ಯಕತೆ ಇದ್ದರು ಸಹ ಕೆಜಿಎಫ್ ರೋಟರಿಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು, ಕೆಜಿಎಫ್ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಆಯ್ಕೆಯಾಗಬೇಕು, ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶ್ರೀಹರಿ ಮಾತನಾಡಿ, ಗ್ರಾಮೀಣ ಭಾಗದ ಯುವಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಆಯ್ಕೆಯಾಗಬೇಕು, ಇದಕ್ಕೆ ಪೂರಕವಾಗಿ ಬೇತಮಂಗಲದಲ್ಲಿ ತರಬೇತಿ ಏರ್ಪಡಿಸಿದರೆ ಸಹಕಾರ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೆಜಿಎಫ್ ರೋಟರಿ ಕ್ಲಬ್ ಅಧ್ಯಕ್ಷ ಅಭಿಲಾಷ್ ಕಾರ್ತಿಕ್, ಖಜಾಂಚಿ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ವಿನೋದ್ ಬಾಬು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಾಬು, ತರಬೇತಿದಾರರ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸುರೇಶ್, ಶ್ರೀಧರ್, ಮಹೇಶ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!