• Wed. Sep 18th, 2024

PLACE YOUR AD HERE AT LOWEST PRICE

ನವೆಂಬರ್ 24ರಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ.

ಕೋಲಾರ:ಅತಿಥಿ ಉಪನ್ಯಾಸಕರ ಖಾಯಂಮಾತಿಗಾಗಿ ಒತ್ತಾಯಿಸಿ ನವೆಂಬರ್ 24ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 10030 ಅತಿಥಿ ಉಪನ್ಯಾಸಕರು 2003 ರಿಂದಲೂ ಸಹ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 10 ವರ್ಷಗಳಿಂದ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವವರು ಇದ್ದಾರೆ.

ಅನೇಕರು ಯುಜಿಸಿ ಮಾನದಂಡದ ಅರ್ಹತೆ ಮೇಲೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಾರಕ್ಕೆ 15 ಗಂಟೆಗಳ ಉಪನ್ಯಾಸದ ಜೊತೆಗೆ ಮೌಲ್ಯ ಮಾಪನ ಕೆಲಸ ಸಹ ಮಾಡುತ್ತಿದ್ದರೂ ಸರ್ಕಾರ ವೇತನದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಉಪನ್ಯಾಸಕರ ಬದುಕು ಜೀತದಾಳುಗಳಿಗಿಂತ ಕಡೆಯಾಗಿದೆ ಎಂದ ಅವರು ಸಮಾನ ಕೆಲಸ ಸಮಾನ ವೇತನ ಅಡಿಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಒತ್ತಾಯಿಸಿ ನವೆಂಬರ್ 24 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ 413 ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಎಲ್ಲರನ್ನೂ ಖಾಯಂ ಮಾಡಲು ಮುಂಬರುವ ಡಿ.4ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಖಾಯಂ ಆದೇಶ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಸುದ್ದಿ ಗೋಷ್ಠಿಯಲ್ಲಿ, ಗೌರವ ಅಧ್ಯಕ್ಷ ಚಂಜಿಮಲೆ ಶ್ರೀನಿವಾಸ್, ಲಕ್ಷ್ಮಿನಾರಾಯಣ, ಡಾ.ವಿ.ಬಿ.ಶಿವಣ್ಣ, ಎ.ಬಿ.ರಮೇಶ್, ಬಾಲಾಜಿ, ಸಿ.ಆರ್.ನಾಗಮಣಿ, ‌ಸಿದ್ಧರಾಜು, ಕೆ.ಎನ್.ನಾಗರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!