PLACE YOUR AD HERE AT LOWEST PRICE
ಕೆಜಿಎಫ್:ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿನೋದ್ ಬಾಬು ಇಂದು ಬೆಳಿಗ್ಗೆ ಸುಮಾರು 7 ಘಂಟೆ ಸಮಯದಲ್ಲಿ ಬೆಮೆಲ್ ನ ಆಲದ ಮರದ ಬಳಿ ಹೃಧಯಾಘಾತವಾಗಿ ಆಸ್ಪತ್ರಗೆ ಸಾಗಿಸುವ ವೇಳೆ ನಿಧನಹೊಂದಿರುತ್ತಾರೆ.
ಇಂದು ಬೆಳಿಗ್ಗೆ ಬೆಮೆಲ್ ನ ಆಲದಮರದ ಬಳಿ ಸುಮಾರು 7 ಘಂಟೆ ಸಮಯದಲ್ಲಿ ವಾಯುವಿಹಾರ ಮುಗಿಸಿ ಮನೆಗೆ ಹೋಗುವ ವೇಳೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಬೆಮೆಲ್ ಮೆಡಿಕಲ್ ಸೆಂಟರ್ ಗೆ ಸಾಗಿಸಿದ್ದಾರೆ.
BEML ಮೆಡಿಕಲ್ ಸೆಂಟರ್ ನಲ್ಲಿ ವೈದ್ಯರು ಪರೀಕ್ಷೆ ಮಾಡಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಮೃತದೇಹವನ್ನು ಕೆಜಿಎಫ್ ನ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿನೋದ್ ಬಾಬು ದೈಹಿಕ ಶಿಕ್ಷಕರಾಗಿದ್ದು, ಈ ಹಿಂದೆ ಕೆಜಿಎಫ್ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದಾರೆ.
ಬೆಮೆಲ್ ಉದ್ಯೋಗಿಯಾಗಿದ್ದ ಹಿರಿಯ ರಾಜಕಾರಣಿ ಬೆಮೆಲ್ ಕೆಂಪಣ್ಣರವರ ಮಗನಾದ ಕತ್ತಿಹಳ್ಳಿ ನಿವಾಸಿ ವಿನೋದ್ ಬಾಬು ಉರಿಗಾಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ವಿನೋದ್ ಬಾಬು ಮಡದಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದು, ಸದಾ ಶಿಕ್ಷಕರ ಸಮಸ್ಯೆಗಳಿಗೆ ಹಗಲಿರುಳು ಸ್ಪಂದಿಸುತ್ತಾ ಶಿಕ್ಷಕರ ಮತ್ತು ಸರ್ಕಾರಿ ನೌಕರರ ಕನ್ಮಣಿಯಾಗಿದ್ದರು.
ವಿನೋದ್ ಬಾಬು ಮೃತಪಟ್ಟ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್, ಮಾಜಿ ಶಾಸಕ ವೈ.ಸಂಪಂಗಿ, ಸರ್ಕಾರಿ ನೌಕರರ ಸಂಘದ ಕೆಜಿಎಫ್ ತಾ ಅಧ್ಯಕ್ಷ ಎಲ್.ನರಸಿಂಹಮೂರ್ತಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಬಂಗಾರಪೇಟೆ ತಾಲ್ಲೂಕು ಅದ್ಯಕ್ಷ ಆಂಜನೇಯಗೌಡ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕರಾಮಾಚಾರಿ ಸೇರಿದಂತೆ ಸಾವಿರಾರು ಶಿಕ್ಷಕರು ಕೆಜಿಎಫ್ ಸಿವಿಲ್ ಆಸ್ಪತ್ರೆ ಬಳಿ ಜಮಾಯಿಸಿದ್ದರು.