• Fri. Mar 1st, 2024

PLACE YOUR AD HERE AT LOWEST PRICE

ಕೆಜಿಎಫ್:ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಸ್ತೆಯಲ್ಲಿ ಹೊಂಚು ಹಾಕಿ ದರೋಡೆ ಮಾಡಲು ಪ್ರಯತ್ನಿಸಿದ್ದವರ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಉರಿಗಾಂಪೇಟೆ ಹೊರ ವಲಯದ ಪೆದ್ದಪಲ್ಲಿಯಿಂದ ಯರನಾಗನಹಳ್ಳಿಗೆ ಹೋಗುವ ಮಾರ್ಗ ಮದ್ಯೆ ಪೊದೆಗಳ ನಡುವೆ ಕತ್ತಲಲ್ಲಿ ಹೊಂಚು ಹಾಕಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಲು ಪ್ರಯತ್ನಿಸಿದ್ದು, ಪೊಲೀಸರು ಬರುವಷ್ಠರಲ್ಲಿ ಮೂರು ಮಂದಿ ಪರಾರಿಗೊಂಡು ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ.

ಬಂಧಿತರನ್ನು ಕೆ.ಜಿ.ಎಫ್. ನಿವಾಸಿಗಳಾದ ವಿಘ್ನೇಶ್ @ ಕುಟ್ಟ ಮತ್ತು ಹರಿಪ್ರಶಾಂತ್ @ ಬಪೂಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿAದ ೩ ದ್ವಿಚಕ್ರವಾಹನಗಳು, ೧ ಚಾಕು ಮತ್ತು ಖಾರದ ಪುಡಿ ಪ್ಯಾಕೆಟ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನಗದು, ವಡವೆ ಇತ್ಯಾದಿ ಬೆಲೆ ಬಾಳುವುದನ್ನು ದರೋಡೆ ಮಾಡಲು ಹೊಂಚು ಹಾಕಿದ್ದವರ ಬಗ್ಗೆ ಮಾಹಿತಿ ಅರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಅಪರಾಧ ಪಿ.ಎಸ್.ಐ ಶ್ರೀಮತಿ. ಜಿ. ಮಾಲಾ, ಸಿಬ್ಬಂದಿಗಳಾದ ಎಂ.ಎನ್.ಗೋಪಿನಾಥ್, ವಿ. ಮಂಜುನಾಥರೆಡ್ಡಿ, ಸಿ. ಮುರಳಿ, ಬಸವರಾಜ ಕಾಂಬಳೆ, ಕೆ.ವಿನೋದ್‌ಕುಮಾರ್ ರವರುಗಳು ಯಶಸ್ವಿಯಾಗಿದ್ದಾರೆ. ರಾಬರ್ಟ್ಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ ಮತ್ತು ವಶಪಡಿಸಿಕೊಂಡ ದ್ವಿಚಕ್ರವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

Leave a Reply

Your email address will not be published. Required fields are marked *

You missed

error: Content is protected !!