• Thu. May 2nd, 2024

PLACE YOUR AD HERE AT LOWEST PRICE

ಬಂಗಾರಪೇಟೆ: ಮಕ್ಕಳಲ್ಲಿನ ಕೌಶಲ್ಯ ಹೊರಹಾಕುವ ನಿಟ್ಟಿನಲ್ಲಿ ಶಾಲಾ ಮಕ್ಕಳ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.

ಅವರು ಪಟ್ಟಣದ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಳೆ ಕಾಲದ ಮಣ್ಣಿನ ಮನೆ ಬಳಕೆ ಬಸ್ಸುಗಳು, ಸೋಲಾರ ವಿದ್ಯುತ್‌ ದ್ವೀಪ, ಮಳೆ ನೀರು ಕೊಯ್ಲುಸಂಗ್ರಹಣೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ಮನುಷ್ಯನ ದೇಹದ ಆಕಾರ, ಸೋಲಾರ ಸಿಸ್ಟಮ್‌, ಸಿಲಿಕಾನ್‌ ಸಿಟಿ ಚಿತ್ರಣ, ಅರಣ್ಯ ಪ್ರದೇಶ, ನಿಸರ್ಗ, ಗ್ರಾಮೀಣ ಜನರ ಸಂಸ್ಕೃತಿ ಹೀಗೆ ಅನೇಕ ವಿಭಿನ್ನ ಆಕೃತಿಗಳು ವಸ್ತು ಪ್ರದರ್ಶನದಲ್ಲಿ ಆಕರ್ಷಿಣೀಯ ವಸ್ತುಗಳಾಗಿದ್ದವು ಎಂದರು.

ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ಪಠ್ಯದ ವಿಷಯಗಳು ಎಷ್ಠೇ ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ ಆದರೆ ಇಂತಹ ಪ್ರದರ್ಶನಳಿಂದಾಗಿ  ಸುಲಭವಾಗಿ ವಿಷಯ ಗ್ರಹಿಕೆಗೆ ಸಹಕಾರಿಯಾಗುತ್ತದೆ. ವಸ್ತು ಪ್ರದರ್ಶನದ ಹಿಂದೆ ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಆಸಕ್ತಿ ಇದೆ ಮತ್ತು ಈ ವಸ್ತು ಪ್ರದರ್ಶನ ಶಿಕ್ಷಣದ ಒಂದು ಭಾಗವಾಗಿ ರೂಪುಗೊಂಡಿದೆ ಎಂದರು.

ಮಕ್ಕಳೇ ಖುದ್ದು ವಸ್ತುಗಳನ್ನು ತಯಾರಿಸಿಕೊಂಡು ಬಂದು ಅವುಗಳ ವಿವರಣೆ ನಿಡುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಭಾಗದ ಜೀವನಶೈಲಿ ಕುರಿತು ಏರ್ಪಡಿಸಿದ್ದ ಪರಿಕಲ್ಪನೆ ನೋಡುಗರ ಗಮನ ಸೆಳೆಯುತ್ತಿದೆ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂತಹ ವಸ್ತು ಪ್ರದರ್ಶನದ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಾಗಿ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಗೌಡ, ಆದರ್ಶ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಇಸಿoಓ ವಾಜಿದ್ ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!