• Thu. Apr 25th, 2024

PLACE YOUR AD HERE AT LOWEST PRICE

ಕೋಲಾರ, ಡಿ.೨೫ : ದಲಿತ ಸಂಸ್ಕೃತಿ ಭಾರತದ ಮೂಲ ಸಂಸ್ಕೃತಿ. ವೈದಿಕ ಹಾಗೂ ಪುರಿರೋಹಿತ ಶಾಹಿ ಸಂಸ್ಕೃತಿ ಮೂಲ ಸಂಸ್ಕೃತಿ ಅಲ್ಲ. ಭಾರತದ ತಲೆಮೇಲೆ ಏರುತ್ತೊರುವುದು ನಿಜವಾದ ಸಂಸ್ಕೃತಿ ಅಲ್ಲ. ಶ್ರಮ, ದುಡಿಮೆ, ಕೃಷಿ ಜೊತೆ ಬೆಳೆದು ಬಂದಿರುವುದು ನಿಜವಾದ ಸಂಸ್ಕೃತಿ ಎಂದು ಸಂವಾದ ಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ ಅಭಿಪ್ರಾಯಪಟ್ಟರು.

ಆದಿಮ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನ-೨೦೦ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇಡೀ ದೇಶದ ಸಾಂಸ್ಕೃತಿಕ ನೆಲೆ ವಿಸ್ತರಿಸಬಲ್ಲ ಕೇಂದ್ರ ಆದಿಮ. ಜನಗಳ ಪ್ರೇರಣೆಯಿಂದ ಆರಂಭವಾದ ಸಾಂಸ್ಕೃತಿಕ ಕೇಂದ್ರ. ಸಂಸ್ಕೃತಿ ಜನಸಮುದಾಯದಿಂದ ಬರುವಂಥದ್ದು. ಯಾರೂ ಸೃಷ್ಟಿ ಮಾಡುವುದಲ್ಲ. ಕೆಲವ ಮಾಧ್ಯಮ, ಆಳುವ ವರ್ಗ ಬಿಂಬಿಸುವುದಷ್ಟೇ ಭಾರತದ ಸಂಸ್ಕೃತಿ ಅಲ್ಲ ಎಂದರು.

ಬೇಸಿಗೆ ಶಿಬಿರ ವಾಣಿಜ್ಯೀಕರಣಗೊಂಡಿದೆ ಆದರೆ ಆದಿಮ ಮೂಲ ಸಂಸ್ಕೃತಿಯ ನೆಲೆಗಟ್ಟು ಕಟ್ಟಿಕೊಡುತ್ತಿದೆ. ನೆಲ ಸಂಸ್ಕೃತಿಯನ್ನು ಕೆಲವರು ಹಾಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಭಾರತ ಸಂಸ್ಕೃತಿಯನ್ನು ವಿಶ್ವವ್ಯಾಪ್ತಿಯಲ್ಲಿ ಬಿಂಬಿಸುತ್ತಿರುವುದಾಗಿ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಬಹುಸಂಸ್ಕೃತಿ ನಾಶ ಮಾಡಿ ಏಕ ಸಂಸ್ಕೃತಿ ಹೇರಲಾಗುತ್ತಿದೆ. ಭಾರತ ಉಳಿದಿರುವುದು ಬಹುತ್ವದಿಂದ, ನುಡಿಗಾರರಿಂದ, ಶ್ರಮದಿಂದ, ದುಡಿಮೆಯಿಂದ, ಕೃಷಿಯಿಂದ ನಮ್ಮ ನೆಲಮೂಲ ಸಂಸ್ಕೃತಿಯನ್ನು ಕಟ್ಟಿಕೊಡಲಾಗಿದೆ. ಆದಿಮ ಇಂದು ಈ ದಿಸೆಯಲ್ಲಿ ತಳಮಟ್ಟದಿಂದ ಸಂಸ್ಕೃತಿಯನ್ನು ಬಿಂಬಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸಂಸ್ಕೃತಿ,ಆಡಳಿತ,ಧರ್ಮ ಬಹಳ ದೂರ ದೂರ ಅಲ್ಲ. ಪೂರಕವಾಗಿ ಕೆಲಸಮಾಡುತ್ಯಿರುತ್ತವೆ. ಹೀಗಾಗಿ, ತಿಳಿದು ಸಾಗಬೇಕು. ವೈದಿಕ ಸಂಸ್ಕೃತಿ ಹೇರಿ ಬಹುತ್ವ ನಾಶ ಮಾಡಲು ಹೊರಟ್ಟಿದ್ದಾರೆ. ಆದರೆ,ಆದಿಮದಂಥ ತಳಸಮುದಾಯಗಳ ಒತ್ತಾಸೆಯಾಗಿ ನಿಂತಿರುವ ಕೇಂದ್ರಗಳ ಮೂಲಕ ಅದನ್ನು ಹಿಮ್ಮೆಟ್ಟಿಸಬೇಕು. ಕಾರ್ಪೊಟೀಕರಣ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ನಡೆಯುತ್ತಿದೆ. ವಿಶ್ವವಿದ್ಯಾಲಯಗಳಿಗೆ ಅಧ್ಯಯನಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 

ಇಂದು ಭಾರತದ ನರನಾಡಿಗಳಲ್ಲಿ ಅಸ್ಪೃಶ್ಯತೆ ಇದೆ, ದೇಶವೇ ನರಳುತ್ತಿದೆ. ಜಾತಿ ಜಾತಿಗಳಲ್ಲಿ ಅಸ್ಪೃಶ್ಯತೆ ಇದೆ ಎಂದ ಅವರು, ದೇಶ ಕಟ್ಟಲು ಸಾಂಸ್ಕೃತಿಕ ತಳಹದಿ ಅಗತ್ಯ. ಆದಿಮದಿಂದ ಆರಂಭವಾಗಬೇಕು. ಅಗಾಧವಾದ ಆರ್ಥಿಕ ಕೊರತೆ ಕಾಡುತ್ತಿದೆ. ರಾಜಕಾರಣ ಇಲ್ಲದೆ ಸಂಸ್ಕೃತಿ ಇಲ್ಲ. ಆದಿಮ ಬೆಳವಣಿಗೆಗೆ ಪೂರಕ ಸಹಕಾರಗಳು ಎಂದು ಅಭಿಪ್ರಾಯಪಟ್ಟರು. 

ಆದಿಮ ಕಾರ್ಯದರ್ಶಿ ಕೊಮ್ಮಣ್ಣ ಮಾತನಾಡಿ, ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ಆದಿಮ ತನ್ನ ಪಯಣವನ್ನು ಆರಂಭಿಸಿತು. ಅಂದು ಅವರು ಆದಿಮ ದಲಿತ ಚಳುವಳಿಯ ಮುಂದುವರಿದ ಭಾಗ ಎಂದು ಹೇಳಿದ್ದರು. ಮೊದಲಿಗೆ ಮನೆಗೊಂದು ಹುಂಡಿ ದಿನಕ್ಕೊಂದು ರೂಪಾಯಿ ಕ್ರೂಡೀಕರಿಸಲಾಯಿತು. ಆರಂಭದ ನಡೆಯಲ್ಲಿ ಸುಮಾರು ೩೪ ಜನರಿದ್ದರು, ಅವರ ಮೂಲಕ ಒಂದೊAದು ರೂಪಾಯಿ ಸೇರಿಸಿ ೩೬ ಸಾವಿರ ಆದಾಗ ಆದಿಮಕ್ಕೆ ಜಾಗ ಹುಡುಕಾಟ ಶುರು ಮಾಡಲಾಯಿತು.

ಶ್ರೀರಾಮರೆಡ್ಡಿ ಮೇಷ್ಟುç ಇಲ್ಲಿಗೆ ಆಗಮಿಸಿ ಇಲ್ಲಿ ಒಂದು ಮರದ ಬುಡದಲ್ಲಿ ಐದು ಮರಗಳು ಹೆಣೆದುಕೊಂಡಿದ್ದನ್ನು ನೋಡಿ, ನಿಮಗೆ ಹುಚ್ಚು ಹಿಡಿದಿದೆ, ನೀಡು ಹುಚ್ಚರು, ಈ ಹುಚ್ಚು ಹೀಗೇ ಇರಲಿ, ಈ ಜಾಗ ಚೆನ್ನಾಗಿದೆ, ಇಲ್ಲಿಂದ ನಿಮ್ಮ ನಡೆ ಪ್ರಾರಂಭಿಸಿ ಎಂದು ಹೇಳಿದರು. ಇಲ್ಲಿಯವರೆಗೂ ಆದಿಮ ನಡೆ ನಿಲ್ಲದೆ ಮುಂದುವರೆದಿದೆ ಎಂದು ತಿಳಿಸಿದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!