• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ: ಪುಸ್ತಕ ಪ್ರೇಮಿ ವಿದ್ಯಾಂಸ ಹರಿಹರಪ್ರಿಯ ಐದಾರು ದಶಕಗಳಿಂದ ಸಂಗ್ರಹಿಸಿದ್ದ ಸುಮರು ಐದು ಲಕ್ಷ ಪುಸ್ತಕಗಳಿದ್ದ ಪುಸ್ತಕ ಮನೆಯನ್ನು ಬೆಂಗಳೂರಿನಿ0ದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರಿಸಲಾಗಿದೆ.

ಲಕ್ಷಾಂತರ ಸಂಖ್ಯೆಯ ಅಪರೂಪದ ಪುಸ್ತಕಗಳ ಸಂಗ್ರಹದ ಗಣಿ ಎಂದೇ ಖ್ಯಾತಿ ಪಡೆದಿರುವ ಹರಿಹರಪ್ರಿಯ ಪುಸ್ತಕ ಮನೆಯನ್ನು ರಾಜಧಾನಿ ಬೆಂಗಳೂರಿನಿ0ದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರ ಮಾಡಿರುವುದು ಜಿಲ್ಲೆಯ ಓದುಗರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ವರದಾನವಾಗಿ ಪರಿಣಮಿಸಿದೆ.

ವಿದ್ಯಾಂಸ ಹರಿಹರಪ್ರಿಯ ಇಷ್ಟು ದಿನ ಬೆಂಗಳೂರಿನ ವಾಜರಹಳ್ಳಿಯ ತಮ್ಮ ನಿವಾಸದಲ್ಲಿ ಇರಿಸಿದ್ದರು. ಐದು ದಿನಗಳ ಹಿಂದೆ ಎಲ್ಲಾ ಪುಸ್ತಕಗಳನ್ನು ಆರು ಲಾರಿಗಳಲ್ಲಿ ಮಾಲೂರಿಗೆ ಸ್ಥಳಾಂತರಿಸಿರುವುದು, ರಾಜಧಾನಿಯ ಪುಸ್ತಕಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಟವನ್ನು ವ್ಯಕ್ತಪಡಿಸಿದ್ದಾರೆ. ಇದು ಬೆಂಗಳೂರಿನ ಓದುಗರಿಗೆ ನಷ್ಟ ಉಂಟು ಮಾಡಿದರೆ ಕೋಲಾರ ಜಿಲ್ಲೆಯ ಓದುಗ ಪ್ರಿಯರಿಗೆ ಖುಷಿಯ ವಿಚಾರವಾಗಿದೆ.

ವಿದ್ವಾಂಸ ಹರಿಹರಪ್ರಿಯ ಐದಾರು ದಶಕಗಳಿಂದ ಈ ಪುಸ್ತಕಗಳನ್ನು ಸಂಗ್ರಹಿಸಿದ್ದು, ಮಾಲೂರಿನ ಹೊರವಲಯದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ತಮ್ಮ ಪುತ್ರಿ ಜಾಗೃತಿಪ್ರಿಯ ಸಾತವಲ್ಲಿ ನಿವೇಶನದಲ್ಲಿ ನಿರ್ಮಿಸಿರುವ ಶೆಡ್ಡಿನಾಕಾರದ ಮನೆಯಲ್ಲಿ ಪುಸ್ತಕಗಳನ್ನು ಇರಿಸಿದ್ದಾರೆ. ಇನ್ನೂ ಜೋಡಿಸಬೇಕಾದ ಕೆಲಸ ಬಾಕಿ ಇದೆ.

ಪುಸ್ತಕ ಭಂಡಾರವು ವಿದ್ವಾಂಸರು, ಸಂಶೋಧಕರು, ಅಧ್ಯಯನಶೀಲರಿಗೆ ಆಕರ ಗ್ರಂಥಾಲಯವಾಗಿದೆ. ಇಲ್ಲಿಗೆ ಬಂದು ಓದಿ ಹೋಗಬಹುದು. ಕೇಳಿದ ಪುಸ್ತಕವನ್ನು ನಾನೇ ಖುದ್ದಾಗಿ ತೆಗೆದುಕೊಡುತ್ತೇನೆ. ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಪುಸ್ತಕಗಳಿವೆ. ಇದರಲ್ಲಿ ಶೇ ೫ರಷ್ಟು ಪುಸ್ತಕಗಳು ಗೆಳೆಯರು ನೀಡಿದ್ದು. ಇನ್ನುಳಿದವನ್ನು ದುಡಿಮೆಯಿಂದ ಖರೀದಿಸಿದ್ದೇನೆ ಎಂದರು.

ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿರುವ ೭೨ ವಯಸ್ಸಿನ ಹರಿಹರಪ್ರಿಯ, ೧೦ನೇ ವಯಸ್ಸಿನಿಂದಲೇ ಪುಸ್ತಕ ಸಂಗ್ರಹಿಸುತ್ತಿದ್ದಾರೆ. ಬರವಣಿಗೆ, ಉಪನ್ಯಾಸಗಳಲ್ಲಿ ತೊಡಗಿರುವ ಅವರು ಸುಮಾರು ೧೧೦ ಕೃತಿ ಬರೆದಿದ್ದಾರೆ. ಸಾಹಿತ್ಯ ಕೃತಿಗಳು ಸೇರಿದಂತೆ ತಾವು ಸಂಗ್ರಹಿಸಿದ ಪುಸ್ತಕಗಳನ್ನು ೧೯೯೨ರಿಂದ ಸಾರ್ವಜನಿಕ ವೀಕ್ಷಣೆಗೆ, ಮಾಹಿತಿಗೆ ಮುಕ್ತಗೊಳಿಸಿದ್ದಾರೆ.

“ನನ್ನ ಬಳಿ ಸುಮಾರು ಐದು ಲಕ್ಷ ಪುಸ್ತಕಗಳ ಸಂಗ್ರಹವಿದೆ. ಬೆಂಗಳೂರಿನ ನಿವಾಸದ ಮಹಡಿಯಲ್ಲಿ ಇರಿಸಿದ್ದೆ. ಸಂಖ್ಯೆ ಹೆಚ್ಚಳದಿಂದ ತುಸು ಕಷ್ಟವಾಗತೊಡಗಿತು. ಭಾರದಿಂದ ಮನೆಗೆ ತೊಂದರೆ ಆಗಬಹುದೆಂದು ಎಂಜಿನಿಯರ್ ಸ್ನೇಹಿತರು ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಿದ್ದೇನೆ. ಜೊತೆಗೆ ಕೋಲಾರ ನನ್ನ ತವರು ಜಿಲ್ಲೆ. ಇಲ್ಲಿಯೇ ಸಾಂಸ್ಕೃತಿಕ ಅಧ್ಯಯನ ಕೇಂದ್ರ ರೂಪಿಸುವ ಯೋಜನೆ ಇದೆ”. ಸರ್ಕಾರದಿಂದ ಯಾವುದೇ ನೆರವು ಪಡೆದಿಲ್ಲ.  ಹಲವರು ನೆರವು ನೀಡಲು ಮುಂದೆ ಬಂದಿದ್ದಾರೆ. ಪುಸ್ತಕ ಜೋಡಿಸಿಡಲು ೩೦೦ ಬೀರುಗಳ ಅಗತ್ಯವಿದೆ. ಇನ್ನೂ ಹೆಚ್ಚಿನ ಜಾಗದ ಅವಶ್ಯವಿದೆ . ದುಡ್ಡು ತೆಗೆದುಕೊಂಡು ಭಾಷಣ ಮಾಡುತ್ತೇನೆ. ಅಷ್ಟನ್ನೂ ಪುಸ್ತಕ ಖರೀದಿಸಲು ಬಳಸುತ್ತೇನೆ. 

– ಪುಸ್ತಕಮನೆ ಹರಿಹರಪ್ರಿಯ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!