• Tue. Jun 18th, 2024

PLACE YOUR AD HERE AT LOWEST PRICE

ಮಿಟ್ಸುಬಿಷಿ ಕಂಪನಿ ಮತ್ತು ಯೂನೈಟೆಡ್ ವೇ ಸಂಸ್ಥೆಯಿಂದ ಚನ್ನಪ್ಪನಹಳ್ಳಿ ತಾಳೆ ಕೆರೆ ಅಭಿವೃದ್ಧಿ. ಕೆರೆ ಅಭಿವೃದ್ಧಿಯಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ. ಕೆರೆಗಳ ಅಭಿವೃದ್ಧಿ ಜೊತೆಗೆ ಶಾಲೆ, ಆಸ್ಪತ್ರೆ, ಕೃಷಿ ವಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿ : ವಿ.ಆರ್ ಸುದರ್ಶನ್

ವೇಮಗಲ್ : ಸ್ಥಳೀಯ ಕಾರ್ಖಾನೆ ಮಿಟ್ಸುಬಿಷಿ ಎಲಿವೇಟರ್ ಪ್ರೈವೆಟ್ ಲಿಮಿಟೆಡ್ ಕಂಪನಿ, ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾಗೂ ಯೂನೈಟೆಡ್ ವೇ ಆಫ್ ಬೆಂಗಳೂರು ಇವರ ಸಹಕಾರದೊಂದಿಗೆ ವೇಮಗಲ್- ಕುರುಗಲ್ ಪಪಂ ವ್ಯಾಪ್ತಿಗೆ ಬರುವ ತಾಳೆ ಕೆರೆಯನ್ನು ಅಭಿವೃದ್ಧಿ ಪಡಿಸಿರುವ ಕೆರೆಯನ್ನು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮತ್ತು ಜಿಲ್ಲಾಧಿಕಾರಿ ಅಕ್ರಂಪಾಷ ರವರ ಸಮ್ಮುಖದಲ್ಲಿ ಪಪಂ ಮುಖ್ಯಾಧಿಕಾರಿ ವೆಂಕಟೇಶ್ ರವರಿಗೆ ಕೆರೆಯ ಯೋಜನೆಯನ್ನು ಹಸ್ತಾಂತರಿಸಿದರು.

ಚನ್ನಪನಹಳ್ಳಿ ಕೆರೆಯ ಜೀರ್ಣೋದ್ಧಾರವನ್ನು 2021 ರಲ್ಲಿ ಪ್ರಾರಂಭಿಸಿ 2024 ರಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.
ಹೂಳು ತೆಗೆಯುವುದು, ಕೆರೆಯಲ್ಲಿನ ಕೆಟ್ಟ ಗಿಡಗಳನ್ನು ತೆಗೆದು ಸ್ವಚ್ಚಗೊಳಿಸಿ, ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ, ಪಾರ್ಕ್ ನಿರ್ಮಾಣ, ಉತ್ತಮ ಗುಣಮಟ್ಟದ ದೀಪದ ವಿದ್ಯುತ್ ವ್ಯವಸ್ಥೆ, ಒಳಹರಿವು ಡಿ-ಸಿಲ್ಟೇಶನ್, ಪೈಪ್ ಕಲ್ವರ್ಟ್‌ಗಳ ನಿರ್ಮಾಣ, ರಾಕ್‌ಫಿಲ್ ಬಂಡ್ ರಚನೆ ಮತ್ತು ಮಳೆನೀರು ಟ್ರೆಂಚ್‌ನ ಅಭಿವೃದ್ಧಿಯ ಚೊತೆಗೆ ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುವುದು ತುಂಬಾ ವಿಶೇಷವಾಗಿದೆ.

ಕೆರೆಯ ಅಭಿವೃದ್ಧಿಯಿಂದ ಉಸಿರಾಟಕ್ಕೆ ಅನುಕೂಲವಾಗುವಂತೆ 1100 ಸಸಿಗಳನ್ನು ಪೋಷಣೆ ಮಾಡುತ್ತಿದ್ದಾರೆ. ಮಕ್ಕಳ ಆಟದ ಪ್ರದೇಶ ಮತ್ತು ಬಯಲು ಜಿಮ್, ಹಾಗೂ ವಿಶ್ರಾಂತಿ ಪಡೆಯುವ ಆಸನ ವ್ಯವಸ್ಥೆ, ಕೆರೆಯ ಸುತ್ತಲೂ ವಾಕಿಂಗ್ ಪಾತ್ ನಿರ್ಮಿಸಿರುವುದರ ಜೊತೆಗೆ ಸುರಕ್ಷಿತ ದೃಷ್ಟಿಯಿಂದ ಕೆರೆಯ ಸುತ್ತ ಸೌರಶಕ್ತಿ ಮತ್ತು ಗಾಳಿ ಚಾಲಿತ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಬಗೆ ಬಗೆಯ ಪಕ್ಷಿಗಳನ್ನು ಕಾಣುವುದರಿಂದ ಕೆರೆಯ ಅಂದ ಹೆಚ್ಚುತ್ತಿದೆ. ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಸ್ತಾಂತರ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಿದ್ದರಿಂದ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆಗಳ ಕಾಯಕಲ್ಪ’ಕನಸಿಗೆ ಮರುಜೀವ ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿಗೊಂಡು ಕುಡಿಯುವ ನೀರಿನ ಸಮಸ್ಯೆ ನೀಗುವುದಲ್ಲದೆ, ಪ್ರಾಣಿ ಪಕ್ಷಿಗಳು ಹಾಗೂ ಬೆಳೆಗಳಿಗೆ ಸಹಕಾರಿಯಾಗುತ್ತದೆ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಕೋಲಾರ ಜಿಲ್ಲೆಯ ಕೈಗಾರಿಕಾ ಕಂಪೆನಿಗಳು ಮುಂದಾಗಬೇಕು ಎಂದು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ರವರು ತಿಳಿಸಿದರು.

ಮಿಟ್ಸುಬಿಷಿ ಎಲಿವೇಟರ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಖಾನೆ ವ್ಯವಸ್ಥಾಪಕ ಪಿ ವಿ ಜೋಶಿ ಮಾತನಾಡಿ, “ಚನ್ನಪನಹಳ್ಳಿ ಕೆರೆ ಪುನಶ್ಚೇತನವು ನಮ್ಮ ಕಂಪನಿಗೆ ನಿರ್ಣಾಯಕ ಉಪಕ್ರಮವನ್ನು ಪ್ರತಿನಿಧಿಸುತ್ತದೆ, ನಮ್ಮ ಇಎಸ್‌ಜಿ ಗುರಿಗಳಿಗೆ ಅರ್ಥಪೂರ್ಣ ಕೊಡುಗೆಯಾಗಿದೆ ಎಂದರು.

ಯುನೈಟೆಡ್ ವೇ ಬೆಂಗಳೂರು ಸಿಇಒ ರಾಜೇಶ್ ಕೃಷ್ಣನ್ ಮಾತನಾಡಿ, ನಮ್ಮ ಸಿಎಸ್‌ಆರ್ ನ್ನು ಜಿಲ್ಲಾಡಳಿತ ಮತ್ತು ಪಟ್ಟಣ ಪಂಚಾಯಿತಿಯನ್ನು ಒಳಗೊಂಡಿರುವ ಪರಿಪೂರ್ಣ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಇದು ಒಂದು ಅತ್ಯುತ್ತಮ ಉದಾಹರಣೆಯಾಗಿದೆ, ಕೆರೆಗಳ ಅಭಿವೃದ್ಧಿ ಮತ್ತು ನೀರಿನ ಸಂರಕ್ಷಣೆಗಾಗಿ ಅರಿವು ಮೂಡಿಸಲಾಗುತ್ತಿದೆ ಎಂದರು. ‌

ಈ ಸಂದರ್ಭದಲ್ಲಿ ಜಿಲ್ಲಾ‌ಧಿಕಾರಿ ಅಕ್ರಂಪಾಷ, ಮಾಜಿ ಸಭಾಪತಿ ವಿ‌.ಅರ್ ಸುದರ್ಶನ್, ಮಿಟ್ಸುಬಿಷಿ ಎಲಿವೇಟರ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಖಾನೆ ವ್ಯವಸ್ಥಾಪಕ ಪಿ ವಿ ಜೋಶಿ, ಯುನೈಟೆಡ್ ವೇ ಬೆಂಗಳೂರು ಸಿಇಒ ವೆಂಕಟ್ ಸುಧಾಕರ್, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ವೇಮಗಲ್ – ಕುರುಗಲ್ ಪಪಂ ನ ಹಿರಿಯರು, ಮಿಟ್ಸುಬಿಷಿ ಮತ್ತು ಯುನೈಟೆಡ್ ವೇ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!