• Sat. Apr 27th, 2024

PLACE YOUR AD HERE AT LOWEST PRICE

ಬಂಗಾರಪೇಟೆ : ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಮಾಲೂರು ಮುಗಿಸಿ ಫೆ.೧೫ರಂದು ಬಂಗಾರಪೇಟೆ ತಾಲ್ಲೂಕು ಪ್ರವೇಶ ಮಾಡಲಿರುವ ಹಿನ್ನಲೆಯಲ್ಲಿ ಬಂಗಾರಪೇಟೆ ತಾಲ್ಲೂಕು ಆಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಮ0ಗಳವಾರ ತಹಶೀಲ್ದಾರ್ ರಷ್ಮಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಫೆ.೧೫ರಂದು ತಾಲ್ಲೂಕಿನ ಐನೋರಹೊಸಹಳ್ಳಿ ಗ್ರಾಮ ಪಂಚಾಯ್ತಿ ಮೂಲಕ ತಾಲ್ಲೂಕು ಪ್ರವೇಶ ಮಾಡಲಿದ್ದು, ಜಾಗೃತಿ ಜಾಥಾವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ಎನ್.ಸಿ.ಸಿ. ಕೆಡೆಟ್‌ಗಳು, ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಪಥ ಸಂಚಲನ. ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರು ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಐನೋರಹೊಸಹಳ್ಳಿ ಗ್ರಾಮದಲ್ಲಿ ಜಾಥಾ ಸಾರ್ವಜನಿಕರಿಗೆ ಸಂವಿಧಾನದ ಪ್ರಾಮುಖ್ಯತೆಯನ್ನು ಸಾರುವ ಜಾಗೃತಿ ಗೀತೆಗಳ ಮೂಲಕ ರಂಜಿಸಲಾಗುತ್ತದೆ. ತದ ನಂತರ ಸಂವಿಧಾನ ಪೀಠಿಕೆಯ ಪ್ರಮಾಣ ವಚನವನ್ನು ಭೋದಿಸಿ ಜಾಥಾ ಸೂಲಿಕುಂಟೆ ಗ್ರಾಮ ಪಂಚಾಯ್ತಿಯತ್ತ ಸಾಗಲಿದ್ದು ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ರವರ ನಾಟಕ ಪ್ರಸ್ತುತ ಪಡಿಸಲಿದೆ.

ಫೆ.೧೭ರಂದು ಬಂಗಾರಪೇಟೆ ಪಟ್ಟಣ ಪ್ರವೇಶ ಮಾಡಲಿದ್ದು, ಅಂದು ಬೆಳಿಗ್ಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಲಾರ್ಪಣೆ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮೆರವಣಿಗೆ ನಡೆಯಲಿದ್ದು, ಬಸ್ ನಿಲ್ದಾಣದ ಸಮೀಪ ಮಾನ್ಯ ಶಾಸಕರಿಂದ ಸ್ಕೈ ಅಡ್ವರ್ಟೈಸಿಂಗ್ ಹೀಲಿಯಂ ಬಲೂನ್ ಹಾರಿಸಲಿದ್ದಾರೆ.

ಫೆ.೧೫ ರಿಂದ ಫೆ.೧೮ ರವರೆಗೆ ಬಂಗಾರಪೇಟೆಯ ವಿವಿಧ ಗ್ರಾಮ ಪಂಚಾಯ್ತಿಗಳ ಮೂಲಕ ಸಂಚರಿಸಲಿರುವ ಜಾಥಾ ೧೯ಕ್ಕೆ ಕೆ.ಜಿ.ಎಫ್ ತಾಲ್ಲೂಕು ಪ್ರವೇಶ ಮಾಡಲಿದೆ. ಬಾಬಾ ಸಾಹೇಬ್ ಕೆಜಿಎಫ್‌ಗೆ ಬೇಟಿ ನೀಡಿದ ಫೆ.೨೩ರಂದು ಅಂಬೇಡ್ಕರ್ ಬೇಟಿ ನೀಡಿದ ದಕ್ಷಿಣ ಭಾರತ ಬುದ್ದಿಸ್ಟ್ ಸೊಸೈಟಿ ಸಮೀಪ ಜಾಥಾ ಕೊನೆಗೊಳ್ಳಲಿದೆ.

ಪೂರ್ವಬಾವಿ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಾರೆಡ್ಡಿ, ಸಿ.ಡಿ.ಪಿ.ಒ. ಮುನಿರಾಜು, ಪುರಸಭೆ ಮುಖ್ಯಾಧಿಕಾರಿ, ದಲಿತ ಸಂಘಟನೆಗಳ ಮುಖಂಡರಾದ ಸೂಲಿಕುಂಟೆ ರಮೇಶ್, ಮದಿವಣ್ಣನ್, ಹಿರೇಕರಪನಹಳ್ಳಿ ರಾಮಪ್ಪ, ಸಿದ್ದನಹಳ್ಳಿ ಯಲ್ಲಪ್ಪ, ಹುಣಸನಹಳ್ಳಿ ವೆಂಕಟೇಶ್, ರಮಣಕುಮಾರ್, ರಘು ಮತ್ತಿತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!