• Sun. May 5th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ಕೆಜಿಎಫ್ ನಗರಕ್ಕೆ ಡಾಃಅಂಬೇಡ್ಕರ್ ಬಂದು ಹೋಗಿದ್ದ ನೆನಪಿಗಾಗಿ ಅವರು ಬಂದಿದ್ದ ಸ್ಥಳದಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೧೯೫೬ರ ಫೆಬ್ರವರಿ ೨೩ರಂದು ಡಾ.ಬಿ.ಆರ್.ಅಂಬೇಡ್ಕರ್ ರವರು ಕೆಜಿಎಫ್‌ನ ಗಣಿ ಪ್ರದೇಶಕ್ಕೆ ಬಂದಿದ್ದರು. ಅದರ ಸಲುವಾಗಿ ಅವರು ಬಂದಿದ್ದ ಜಾಗವನ್ನು ಸ್ಮಾರಕ ಹಾಗೂ ಮ್ಯೂಸಿಂಯ ನಿರ್ಮಾಣ ಮಾಡಬೇಕೆಂಬ ಸಂಘದ ಒತ್ತಾಯದ ಮೇರೆಗೆ ೨೦೨೨ರಲ್ಲಿ ಸರ್ವೆ ನಂ.೨ರಲ್ಲಿ ೫ಎಕರೆ ಜಮೀನನ್ನು ಮೀಸಲಿಟ್ಟಿದ್ದರು ಹಾಗೂ ಬಜೆಟ್‌ನಲ್ಲಿ ಸಹ ೨ಕೋಟಿ ಹಣ ಮೀಸಲಿಟ್ಟು ೧.೫೫ಕೋಟಿ ಹಣ ಸಹ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದ್ದರು.

ಆದರೆ ಅದೇ ವರ್ಷ ಮತ್ತೆ ಸರ್ಕಾರ ನೀಡಿದ್ದ ೫ಎಕರೆ ಜಾಗವನ್ನು ರದ್ದುಪಡಿಸಿದೆ. ಜಿಲ್ಲಾಧಿಕಾರಿ ಅಕ್ರಮ್ ಪಾಷ ರವರು ೧೭.೧.೨೦೨೪ರಲ್ಲಿ ಕೆಜಿಎಫ್ ನಗರಸಭೆಗೆ ಪತ್ರ ಬರೆದು ಅಂಬೇಡ್ಕರ್ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಮನೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ರದ್ದುಗೊಳಿಸಿ ಆ ಜಾಗವನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ಕೆಜಿಎಫ್‌ಗೆ ಬಂದು ಹೋಗಿ ೭೪ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ ದಲಿತ ಸಂಘಟನೆಗಳು ಹೋರಾಟ ಮಾಡಿ ಪಡೆದ ಜಾಗವನ್ನು ಸರ್ಕಾರ ಕೈಗಾರಿಕೆಗೆ ಮೀಸಲಿಟ್ಟಿರುವುದು ಯಾವ ನ್ಯಾಯ. ಸರ್ಕಾರ ನಮ್ಮದು ದಲಿತ ಪರ ಸರ್ಕಾರ ಸಂವಿಧಾನವನ್ನು ನಾವು ಗೌರವಿಸುವೆವು ಎಂದು ಬಾಯಲ್ಲಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ರದ್ದು ಮಾಡಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಅಂಬೇಡ್ಕರ್ ಸ್ಮಾರಕ ಇರಬಾರದೆ ಎಂದು ಪ್ರಶ್ನಿಸಿದರು.

ಅಲ್ಲದೆ ಸ್ಮಾರಕ ನಿರ್ಮಣಕ್ಕೆ ಕನಿಷ್ಟ ಪಕ್ಷ ಪರ್ಯಾಯ ಸ್ಥಳವನ್ನೂ ತೋರಿಸದೆ ಕಡೆಗಣಿಸಲಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ದಲಿತ ವಿರೋಧಿತನ ಅನುಸರಿಸುತ್ತಿದೆ ಎಂದು ಆರೋಪಿಸಿ, ಇದೇ ತಿಂಗಳು ೨೩ರಂದು ಅಂಬೇಡ್ಕರ್ ಕೆಜಿಎಫ್‌ಗೆ ಬಂದು ಹೋಗಿದ್ದ ದಿನವಾಗಿದೆ. ಅಂದು ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಪೂಜೆ ಸಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಂಘದ ತಾಲ್ಲೂಕು ಸಂಘಟನಾ ಸಂಚಾಲಕರಾದ ರಾಮಚಂದ್ರಪ್ಪ, ಗೋವಿದಂಪ್ಪ, ಶಿವಕುಮಾರ್ ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!