PLACE YOUR AD HERE AT LOWEST PRICE
ಬಂಗಾರಪೇಟೆ:ಪಟ್ಟಣದ ಬಿ.ಆರ್. ಸಿ ಕೇಂದ್ರದಲ್ಲಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಿಗೆ ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಬೆಂಗಳೂರು ರವರು ನೀಡಿರುವ ವಿಜ್ಞಾನ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಕನ್ಯ ರವರು ಸರ್ಕಾರಿ ಶಾಲೆಯ ಮಕ್ಕಳಿಗೆ ನೋಡಿ-ಕಲಿ ಮಾಡಿ-ತಿಳಿ ಪದ್ಧತಿಯಲ್ಲಿ ಬೋಧಿಸಲು ಈ ವಿಜ್ಞಾನ ಕಿಟ್ ಅತ್ಯಂತ ಉಪಯುಕ್ತವಾಗಿದೆ.
ವಿಜ್ಞಾನ ಎಂಬುದು ಕಬ್ಬಿಣದ ಕಡಲೆ ಎಂಬ ಮಾತಿದೆಯಾದರೂ ಇತ್ತೀಚೆಗೆ ವಿಷಯ ಬೋದನೆಗೆ ಪ್ರೋತ್ಸಾಹ ಹೆಚ್ಚುತ್ತಿದೆ. ಇದನ್ನು ಉಪಯೋಗಿಸಿಕೊಂಡು ಶಿಕ್ಷಕರು ಮಕ್ಕಳಿಗೆ ಬೋದಸಿ ವಿಜ್ಞಾನ ವಿಷಯದ ಕಲಿಕೆಯನ್ನು ಸುಲಭಗೊಳಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಆರ್.ಪಿ ಮುನಿರಾಜು, ಇ.ಸಿ.ಓಗಳಾದ ವಾಜಿದ್ ಮತ್ತು ಲೀಲಾ, ಐ.ಎಲ್.ಪಿ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ವಿಶ್ವನಾಥ, ವಿಜಯ್ ಕುಮಾರ್, ನಂಜುಂಡಪ್ಪ, ಸಿ.ಆರ್.ಪಿ ಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.