• Fri. Jul 26th, 2024

PLACE YOUR AD HERE AT LOWEST PRICE

ಕೋಲಾರ : ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ, ನಗರದ ಹೋಪ್ ಹೆಲ್ತ್‌ಕೇರ್ ಆಸ್ಪತ್ರೆ ವೈದ್ಯರ ನಿರ್ಲ್ಯಕ್ಷಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ಕಮ್ಮತಮ್ಮಪಲ್ಲಿ ಗ್ರಾಮದ ವೆಂಕಟರಮಣಪ್ಪ ೩೨ ಮೃತ ವ್ಯಕ್ತಿಯಾಗಿದ್ದಾರೆ.

ಹೊಟ್ಟೆ ನೋವು, ಹೊಟ್ಟೆ ಉಬ್ಬಸ ಎಂದು ಆಸ್ಪತ್ರೆ ಕುಟುಂಬಸ್ಥರು ದಾಖಲಿಸಿದ್ದರು ವೈದ್ಯರು ನೀಡಿದ್ದ ಇಂಜೆಕ್ಷನ್ ನಿಂದಲೇ ಸಾವನ್ನಿಪ್ಪಿದ್ದಾರೆ ಎಂದು ಕುಟುಂಬಸ್ಥರ ಆರೋಪವಾಗಿದೆ. ಇನ್ನು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಸ್ಕ್ಯಾನಿಂಗ್ ವರದಿಗಾಗಿ ಚೀಟಿ ಬರೆದುಕೊಟ್ಟಿದ್ದ ವೈದರು ಸ್ಕ್ಯಾಯನಿಂಗ್ ಮಾಡಿಸಿಕೊಂಡು ಬಂದ ನಂತರ ವರದಿ ನೋಡಿ ಚಿಕಿತ್ಸೆ ನೀಡಲು ಮುಂದಾಗಿದ್ದರಂತೆ. ಅಷ್ಟರೊಳಗೆ ಮೃತ ವ್ಯಕ್ತಿ ತಿಂಡಿ ಬೇಕು ಎಂದಾಗ ತನ್ನ ತಮ್ಮ ತಿಂಡಿ ತರುವಷ್ಟರಲ್ಲಿ ಅಲ್ಲಿದ್ದ ನರ್ಸ್‌ಗಳು ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ನೀಡಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವೆಂಕಟರಮಣಪ್ಪ ಮೃತಪಟ್ಟ ವಿಷಯ ತಿಳಿಯುತ್ತಲ್ಲೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಇತ್ತೀಚೆಗಷ್ಟೇ ಮದುವೆಯಾಗಿ ಚಿಕ್ಕಮಗುವೊಂದಿತ್ತು ಎನ್ನಲಾಗಿದ್ದು, ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆ ಆಸ್ಪತ್ರೆಯಲ್ಲಿ ಸಂಬಂಧಿಕರು ವೈದ್ಯರ ಹಾಗೂ ಸಿಬ್ಬಂದಿಗಳ ವಿರುದ್ಧ ಅಸಮಧಾನ ಹೊರಹಾಕಿದ್ದರು.

ನಂತರ ನೊಂದ ಮೃತನ ಸಂಬಂಧಿಕರು ಆಸ್ಪತ್ರೆಯಲ್ಲಿ ಪ್ರತಿಭಟನೆಗೆ ಮುಂದಾದ ಘಟನೆಯೂ ನಡೆಯಿತು. ಈ ವೇಳೆ ಮೃತನ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಯತ್ನಿಸಿದ್ದರು ಎನ್ನಲಾಗಿದ್ದು ಸ್ಥಳಕ್ಕೆ ಬಂದಿದ್ದ ಪೊಲೀಸರು ವೈದ್ಯರ ಪರ ನಿಂತು ಮೃತ ಸಂಬಂಧಿಕರನ್ನು ದೊಡ್ಡ ದೊಡ್ಡ ಆರೋಪಗಳನ್ನು ಮಾಡಿದ ಆರೋಪಿಗಳ ರೀತಿಯಲ್ಲಿ ಎಳೆದು ಠಾಣೆಗೆ ಕರೆದುಕೊಂಡು ಮಧ್ಯ ಬಂದವರನ್ನು ಏಕವಚನದಲ್ಲಿ ನಿಂದಿಸಿ ದೌರ್ಜನ್ಯವೆಸಗಿದ್ದಾರೆಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಈಗಾಗಲೇ ಸಾವಿನ ನೋವಿನಲ್ಲಿದ್ದ ಕುಟುಂಬದ ಬಗ್ಗೆ ಸ್ವಲ್ಪವೂ ಕನಿಕರವಿಲ್ಲದೆ ಪೊಲೀಸರು ನಡೆದ ಕೊಂಡ ರೀತಿಯ ಬಗ್ಗೆ ಸಾರ್ವಜನಿಕರೂ ತೀವ್ರವಾಗಿ ಖಂಡಿಸಿದ್ದಾರೆ. ಮೃತ ಕುಟುಂಬ ಈಗಾಗಲೇ ನೋವಿನಲ್ಲಿದ್ದು ಈಗ ವೈದ್ಯರ ನೀಡಿದ ದೂರಿನ ಮೇರೆಗೆ ತಮ್ಮ ಅಣ್ಣನನ್ನು ಕೊಲೆ ಮಾಡಿದ ವೈದ್ಯ ಎಂದು ಪ್ರಶ್ನಿಸಿದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ಮತ್ತೊಂದು ನೋವು ನೀಡಿರುವುದು ನಿಜಕ್ಕೂ ಶೋಷನೀಯ.
ಈ ಬಗ್ಗೆ ಕೋಲಾರ ನಗರಠಾಣೆಯಲ್ಲಿ ಮೃತನ ಸಂಬಂಧಿಕರು ಹಾಗೂ ವೈದ್ಯ ಯಶವಂತ್ ಪರ ವಿರೋಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!