• Mon. Apr 29th, 2024

PLACE YOUR AD HERE AT LOWEST PRICE

ಮುಂಚೂಣಿಯ ಗ್ರಾಹಕ ಸಕ್ರಿಯತೆಯ ಉಪಕ್ರಮಗಳ ಬಿಡುಗಡೆ, ಇಲ್ಲಿಯವರೆಗೆ ಹೊಸದಾಗಿ ಬರಲಿರುವ ಕಾಂಪ್ಯಾಕ್ಟ್ ಎಸ್.ಯು.ವಿಗೆ ಡಿಜಿಟಲ್ ಅಭಿಯಾನ `ನೇಮ್ ಯುವರ್ ಸ್ಕೋಡಾ’ಗೆ ಇಲ್ಲಿಯವರೆಗೆ 1,50,000 ಹೆಸರಿನ ಸಲಹೆಗಳು ಭಾರತದಲ್ಲಿ 24 ವರ್ಷಗಳ ಸಂಭ್ರಮಾಚರಣೆಯ ಮೊಟ್ಟಮೊದಲ 24-ಗಂಟೆಗಳ ಆನ್ಲೈನ್ ಮಾರಾಟ ಕಾರ್ಯಕ್ರಮದಲ್ಲಿ 709 ಕಾರುಗಳ ಬುಕಿಂಗ್ ಸಾಧನೆ  ಡೈನಮಿಕ್ ಎನ್.ಎಫ್.ಟಿ. ಪ್ರೇರಿತ ಡಿಜಿಟಲ್ ಸಮುದಾಯ ಸ್ಕೋಡಾ ಗೇರ್ಹೆಡ್ಸ್ ಪ್ರಾರಂಭ ದೂರದಿಂದ ಕಾರುಗಳ ಸರ್ವೀಸ್ ಮೇಲ್ವಿಚಾರನೆಗೆ ಸರ್ವೀಸ್ ಕ್ಯಾಮ್ ಈಗಾಗಲೇ ಚಾಲ್ತಿಯಲ್ಲಿದೆ ಭಾರತದಾದ್ಯಂತ ಶೋರೂಂಗಳು ಪೂರ್ಣ ಡಿಜಿಟಲೀಕರಣಗೊಂಡಿವೆ.

ಸ್ಕೋಡಾ ಆಟೊ ಇಂಡಿಯಾ ಈಗಾಗಲೇ ತನ್ನ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಬಿಡುಗಡೆ ಮೂಲಕ ಹೊಸ ಯುಗ ಪ್ರಾರಂಭಿಸಿದೆ. ಈ ಹೆಜ್ಜೆಯನ್ನು ಬಳಕೆದಾರರ ಸಕ್ರಿಯತೆ, ಗ್ರಾಹಕರ ತೊಡಗಿಕೊಳ್ಳುವಿಕೆ ಮತ್ತು ಡಿಜಿಟಲೀಕರಣದ ಮೂಲಕ ಹೊಸ ಯುಗದತ್ತ ಇರಿಸಿದ್ದು ಕಂಪನಿಯು 360-ಡಿಗ್ರಿ ಡಿಜಿಟಲ್ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ಅದರಲ್ಲಿ ಮಾರಾಟದ ಮೈಲಿಗಲ್ಲು ಮತ್ತು ಗ್ರಾಹಕರು ಹಾಗೂ ಅಭಿಯಾನಗಳಿಗೆ ಹತ್ತಿರವಾಗಿದೆ.

ಈ ಸಂದರ್ಭ ಕುರಿತು ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪೆಟ್ರ್ ಜನೇಬಾ, “ಬದಲಾಗುತ್ತಿರುವ ಡಿಜಿಟಲ್ ಕ್ಷೇತ್ರ, ಪ್ಲಾಟ್ ಫಾರಂಗಳು ಮತ್ತು ಮಾಧ್ಯಮಗಳೊಂದಿಗೆ ಗ್ರಾಹಕರ ಅನುಭವ ಮತ್ತು ಪ್ರಯಾಣವನ್ನು ಹೆಚ್ಚಿಸುವ ಹೊಸ ವಿಧಾನಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ನಮ್ಮ ಡಿಜಿಟಲ್ ಕಾರ್ಯತಂತ್ರಗಳನ್ನು ನಮ್ಮ ಉತ್ಪನ್ನಗಳು ಹಾಗೂ ಸೇವೆಗಳು ನಮ್ಮ ಗ್ರಾಹಕರು ಹಾಗೂ ಅಭಿಮಾನಿಗಳನ್ನು ಅವರ ಆಯ್ಕೆಯ ಭಾಷೆಯಲ್ಲಿ ತಲುಪುವಂತೆ ರೂಪಿಸಲಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಗೆ ನೇಮ್ ಯುವರ್ ಸ್ಕೋಡಾ ಅಭಿಯಾನವು 1,50,000 ಪ್ರವೇಶಗಳನ್ನು ಪಡೆದಿದೆ.

ಇತ್ತೀಚೆಗೆ ಭಾರತದಲ್ಲಿ 24 ವರ್ಷಗಳನ್ನು ಪೂರೈಸಿದ ಸಂದರ್ಭಕ್ಕೆ ಆಯೋಜಿಸಿದ್ದ ಸಮಾರೋಪಗೊಂಡ ಮೊಟ್ಟಮೊದಲ, ಪೂರ್ಣ ಡಿಜಿಟಲ್ 24-ಗಂಟೆಗಳ ಮಾರಾಟದಲ್ಲಿ ಒಂದೇ ದಿನದಲ್ಲಿ 709 ಸ್ಕೋಡಾ ಕಾರುಗಳು ಬುಕ್ ಆಗಿವೆ. ಇದಲ್ಲದೆ ನಾವು ಸ್ಕೋಡಾ ಗೇರ್ಹೆಡ್ಸ್ ಸಮುದಾಯ ಪ್ರಾರಂಭಿಸುವ ಮೂಲಕ ನಮ್ಮ ಸ್ಕೋಡಾವರ್ಸ್ ಇಂಡಿಯಾ ಎನ್.ಎಫ್.ಟಿ.ಯನ್ನು ಮತ್ತಷ್ಟು ವಿಸ್ತರಿಸಿದ್ದೇವೆ.

ಇವುಗಳೊಂದಿಗೆ ನಾವು ಸತತವಾಗಿ ಈ ವಿಸ್ತಾರ ಮತ್ತು ವೈವಿಧ್ಯಮಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೆಚ್ಚು ಗ್ರಾಹಕರಿಗೆ ಅವರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸತತವಾಗಿ ಇವುಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ” ಎಂದದಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!