• Sat. Jul 27th, 2024

PLACE YOUR AD HERE AT LOWEST PRICE

ಹತ್ತು ದಿನಗಳೊಳಗೆ ಎಪಿಎಂಸಿ ಅಧಿಕಾರಿಗಳ,ದಲ್ಲಾಳರ ಹಾಗೂ ರೈತರ ಸಭೆಯನ್ನು ನಡೆಸಿ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ : ವಿವಿಧ ಜನಪರ ಸಂಘಟನೆಗಳಿoದ ಆಗ್ರಹ

ಕೋಲಾರ,ಮೇ.೨೨ : ಎಪಿಎಂಸಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ರೈತರ ಹಾಗೂ ದಲ್ಲಾಳರ ಮತ್ತು ಅಧಿಕಾರಿಗಳ ಸಭೆಯನ್ನು ನಡೆಸಿ, ರೈತರ ಕುಂದು ಕೊರತೆಯನ್ನು ಚರ್ಚಿಸಿ, ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ಮುಂದಿನ ಹತ್ತು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಜನಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹಿರಿಯ ದಲಿತ ಮುಖಂಡ ಟಿ. ವಿಜಯಕುಮಾರ್ ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರ ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ವಿಶೇಷ ತನಿಖಾಧಿಕಾರಿಯನ್ನು ನೇಮಕ ಮಾಡಿ, ದಲ್ಲಾಳರು ನಿರ್ವಹಿಸುತ್ತಿರುವ ದಾಖಲೆಗಳನ್ನು ಪರಿಶೀಲಿಸಿ, ರೈತರಿಗೆ ಆಗುತ್ತಿರುವ ಮೋಸವನ್ನು ತಡೆ ಹಿಡಿಯಬೇಕು, ಜತೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ಅವರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಎಪಿಎoಸಿ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ೩ ಕೋಟಿ ತೆರಿಗೆ ಹಣ ಸಂಗ್ರಹವಾಗಿದ್ದು, ಇದು ೫ ಕೋಟಿಗೆ ಏರಿಕೆ ಯಾಗಿರುವುದು, ಇದಕ್ಕೆ ದಲ್ಲಾಳರು ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಸುಳ್ಳು ಮಾಹಿತಿಯನ್ನು ಎಪಿಎಂಸಿ ಮೇಲಾಧಿಕಾರಿಗಳಿಗೆ ದೂರು ನೀಡಿ, ರೈತರ ಮತ್ತು ಅಧಿಕಾರಿಗಳಿಗೆ ದಕ್ಕೆ ತರುವ ಕಾರ್ಯವಾಗಿದೆ ಎಂದು ದೂರಿದರು.

ಇನ್ನೂ ನೂತನವಾಗಿ ಪರವಾನಿಗೆ ಪಡೆದಿರುವ ದಲ್ಲಾಳಿಗಳು ವ್ಯಾಪಾರ ಮಾಡಲು ಬಂದರೆ ಅವರಿಗೆ ಸ್ಥಳಾವಕಾಶ ನೀಡದೆ ಹಾಗೂ ರೈತರಿಂದ ಖರೀದಿಸದಂತೆ ದೌರ್ಜನ್ಯವಾಗಿ ಹಾಗೂ ಉದ್ದೇಶ ಪೂರ್ವವಾಗಿ ಕಿರುಕುಳ ನೀಡುತ್ತಿದ್ದಾರೆ. ಹೊಸ ಪರವಾನಿಗೆದಾರರು, ಹೆಸರಿಗೆ ಲಕ್ಷಾಂತರ ರೂಮಗಳು ಹಣ ನೀಡಿದರೆ ಅವರಿಗೆ ಸ್ಥಳವಕಾಶ ಮತ್ತು ವ್ಯಾಪಾರ ಮಾಡಿಕೊಳ್ಳಲು ವ್ಯವಸ್ಥೆಯಾಗುತ್ತದೆ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸಂಘದ ಹೆಸರಿನಲ್ಲಿ ಗೊತ್ತಿರುವುದನ್ನ ಗಮನಿಸಿ ಅಧಿಕಾರಗಳು ಇದಕ್ಕೆ ಕಡುಬನ ಹಾಕಲು ಮುಂದಾದಾಗ ತರಕಾರಿ ಮಾರುವ ದಳ್ಳಾಲದ ಸಂಗವು ತಿರುಗಿ ಬಿದ್ದು ಅಧಿಕಾರಿಗಳ ಕಾರ್ಯವೈಕರಿಯನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ರೈತರು ಕಷ್ಟಪಟ್ಟು ಬೆಳೆದು ತರಕಾರಿಯನ್ನು ಮಾರುಕಟ್ಟೆಗೆ ತಂದರೆ ಮಾರುಕಟ್ಟೆ ದಲ್ಲಾಳರು ನೂರು ಕೆ.ಜಿ.ತರಕಾರಿಯಲ್ಲಿ ೫ ಕೆಜಿ ಯಷ್ಟು ಕಡಿಮೆಗೊಳಿಸಿ, ಅದಕ್ಕೆ ಹಣ ನೀಡಿದೆ. ಕೇವಲ ೯೫ ಕೆಜಿಗೆ ಮಾತ್ರ ಹಣ ನೀಡಿ, ರೈತರಿಗೆ ನಷ್ಟವನ್ನು ಈ ಕೂಡಲೇ ನಿಲ್ಲುವಂತೆ ಆಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್, ಸಾಮಾಜಿಕ ಕಾರ್ಯಕರ್ತ ಹೂವಳ್ಳಿ ನಾಗರಾಜ್, ರೈತ ಸಂಘದ ತಾಲೂಕು ಸಂಚಾಲಕ ನಾಗನಾಳ ರಮೇಶ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುವೆಂಪುನಗರ ಆನಂದಕುಮಾರ್, ಮಹಿಳಾ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಎಂ.ಶಶಿಕಲಾ, ಕರ್ನಾಟಕ ಪರಿಸರ ಭೂ ಪರಿಸರ ಸಂರಕ್ಷಣಾ ಸಮಿತಿ ತಾರಕ್ ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!